ಬೆಂಗಳೂರು ಗಲಭೆ ಪ್ರಕರಣ ಬಂಧಿತ ಅಮಾಯಕರ ಬಿಡುಗಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ
ಮೈಸೂರು

ಬೆಂಗಳೂರು ಗಲಭೆ ಪ್ರಕರಣ ಬಂಧಿತ ಅಮಾಯಕರ ಬಿಡುಗಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

September 3, 2020

ಬೆಂಗಳೂರು,ಸೆ.2(ಕೆಎಂಶಿ)- ನಗ ರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಯಲ್ಲಿ ಪೆÇಲೀಸರು ಬಂಧಿ ಸಿರುವವರಲ್ಲಿ ಅಮಾಯ ಕರನ್ನು ಬಿಡುಗಡೆಗೊಳಿಸು ವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಅಮಾ ಯಕರನ್ನು ಬಂಧಿಸಲಾಗಿದೆ ಎಂದು ನನಗೆ ಮಾಹಿತಿ ದೊರೆತಿದೆ. ಅಂಥವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಕಾರಣಕರ್ತರಾಗಿದ್ದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಇದುವರೆಗೂ 380 ಮಂದಿಯನ್ನು ಬಂಧಿಸಿದ್ದು, ಅವ ರಲ್ಲಿ ಕೆಲವರು ಅಮಾಯಕರಿದ್ದಾರೆ. ಅಂಥ ವರಿಗೆ ಶಿಕ್ಷೆ ಆಗಬಾರದು. ಇದರ ಹಿಂದೆ ಎಂಥ ದೊಡ್ಡ ಶಕ್ತಿಗಳಿದ್ದರೂ ಅಂತಹ ಶಕ್ತಿಗಳನ್ನು ಬಗ್ಗು ಬಡಿಯಬೇಕು. ನಾವು ಯಾವುದೇ ಕಾರಣಕ್ಕೂ ಕೋಮು ಪ್ರಚೋ ದನೆಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ತನಿಖೆ ಆರಂಭಗೊಂಡಿದೆ. ತನಿಖೆ ನಡೆಯಲಿ, ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನಾನು ಈ ಮೊದಲು ಹೇಳಿದಂತೆ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆಯಾಗಬೇಕೆಂದು ಈಗಲೂ ನಾನು ಒತ್ತಾಯಿಸುತ್ತೇನೆ. ಘಟನೆಯ ಬಗ್ಗೆ ಮಳೆ ಗಾಲದ ಅಧಿವೇಶನದಲ್ಲಿ ಸವಿಸ್ತಾರವಾಗಿ ಪ್ರಸ್ತಾಪ ಮಾಡುವುದಾಗಿಯೂ ತಿಳಿಸಿದರು.

Translate »