ಮೈಸೂರು,ಅ.27(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ನಾಡಹಬ್ಬ ದಸರಾ ಮಹೋತ್ಸವ ಸೋಮವಾರ ಅಚ್ಚು ಕಟ್ಟಾಗಿ ನೆರವೇರಿತು. ಜಂಬೂಸವಾರಿಯನ್ನು ಟಿವಿಗಳಲ್ಲಿನ ನೇರಪ್ರಸಾರದಲ್ಲಿ ಅಸಂಖ್ಯಾತ ಮಂದಿ ವೀಕ್ಷಿಸಿದ್ದರೆ, ಸಾಮಾಜಿಕ ಜಾಲತಾಣ ಗಳಲ್ಲಿ 6 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಂದಾ ಜಿಗಿಂತ ಕಡಿಮೆ ವೆಚ್ಚವೇ ಆಗಿದೆ. ನ.1ರಂದು ದಸರಾ ಮಹೋತ್ಸವದ ವೆಚ್ಚದ ವಿವರವನ್ನು ಸಾರ್ವಜನಿಕರ ಮುಂದಿಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ದಸರಾ ಮಹೋತ್ಸವ ಯಶಸ್ವಿ ಯಾದ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂ ರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಕೊರೊನಾ ಹಿನ್ನೆಲೆ ಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆ -ಸೂಚನೆಗಳನ್ನು ಸರಿಯಾಗಿ ಪಾಲಿಸಿ, ಸೀಮಿತ ಸಂಖ್ಯೆ ಜನರಿಗಷ್ಟೇ ಅವಕಾಶ ನೀಡಿ, ಸರಳ ಮತ್ತು ಸಾಂಪ್ರದಾಯಿಕ ಹಾಗೂ ಅರ್ಥ ಪೂರ್ಣವಾಗಿ ದಸರಾ ನೆರವೇರಿಸಲಾಗಿದೆ. ಕೊರೊನಾ ಹರಡುವುದನ್ನು ತಡೆಯಲೆಂದೇ ವರ್ಚುವಲ್ ಆಗಿಸಲಾಗಿತ್ತು ಎಂದರು.
ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸ ಲೆಂದೇ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವ ರಿಂದ ಈ ಬಾರಿ ದಸರಾ ಮಹೋತ್ಸವ ಉದ್ಘಾಟಿಸಲಾಗಿದೆ. ವೈದ್ಯರೊಬ್ಬರು ದಸರಾ ಉದ್ಘಾಟಿಸಿದ್ದು ಇದೇ ಮೊದಲು. ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೆÇಲೀಸರು ಮತ್ತಿತರ ಕೊರೊನಾ ವಾರಿಯರ್ಸ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಅವರೆಲ್ಲರ ಪ್ರತಿನಿಧಿಗಳಿಗೆ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ, ಕೊರೊನಾ ಯೋಧರಿಗೆ ಗೌರವ ಸಮರ್ಪಿಸಲಾಯಿತು ಎಂದರು.
ಲೆಕ್ಕ ನೀಡುವೆ: ಈ ಸಾಲಿನ ದಸರಾಗೆ ಸರ್ಕಾರ 10 ಕೋಟಿ ರೂ. ಅನುದಾನ ನೀಡಿತ್ತು. ಅಗತ್ಯ ಬಿದ್ದರೆ 5 ಕೋಟಿ ರೂ. ನೀಡುವುದಾಗಿ ಮುಡಾ ಹೇಳಿತ್ತು. ಆದರೆ ದಸರಾ ಮಹೋತ್ಸವವನ್ನು ಸರ್ಕಾರ ನೀಡಿದ 10 ಕೋಟಿ ರೂ. ಅನುದಾನದಲ್ಲೇ ಪೂರ್ಣಗೊಳಿಸಲಾಗಿದೆ. ಮುಡಾದಿಂದ ಹಣ ಪಡೆದಿಲ್ಲ. ದಸರಾ ಮುಗಿದಿದೆ. ಯಾವುದಕ್ಕೆ ಎಷ್ಟು ಹಣ ವಿನಿಯೋಗಿಸಲಾಗಿದೆ? ಎಷ್ಟು ಉಳಿದಿದೆ? ಎಂಬ ಲೆಕ್ಕವನ್ನು ಜನರ ಮುಂದಿಡುವುದು ನಮ್ಮ ಕರ್ತವ್ಯ. ದಸರಾಗೆ ಎಷ್ಟು ಖರ್ಚಾಗಿದೆ ಎಂಬ ಮಾಹಿತಿ ನೀಡುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.
ನಿಯಮ ಉಲ್ಲಂಘಿಸಿಲ್ಲ: ಚಾಮುಂಡಿಬೆಟ್ಟದಲ್ಲಿನ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಜ್ಞರ ಸಮಿತಿ ಸೂಚನೆಯಂತೆ 200 ಮಂದಿ, ಅರಮನೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ 50 ಮಂದಿ ಹಾಗೂ ಜಂಬೂಸವಾರಿಗೆ 300 ಮಂದಿಗಷ್ಟೇ ಅವಕಾಶ ನೀಡಲಾಯಿತು. ಸಾಕಷ್ಟು ಮಂದಿ ದಸರಾ ನೋಡುವ ಆಸೆಯಿಂದ ಪ್ರವೇಶ ಅವಕಾಶ ಕೋರಿ ನನ್ನನ್ನು ಸಂಪರ್ಕಿಸಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ ದಸರಾ ವೀಕ್ಷಿಸಲು ಹೆಚ್ಚಿನ ಜನರಿಗೆ ಅವಕಾಶವಿಲ್ಲ. ಜಾಲತಾಣ, ಟಿವಿಯಲ್ಲೇ ನೇರ ಪ್ರಸಾರದಲ್ಲಿ ದಸರಾ ವೀಕ್ಷಿಸುವಂತೆ ಸಲಹೆ ನೀಡಿದೆ. ವೀಕ್ಷಕರ ಸಂಖ್ಯೆ `ಮಿತಿ’ ಮೀರದಂತೆ ಕ್ರಮ ಕೈಗೊಳ್ಳ ಲಾಗಿತ್ತು. ಖ್ಯಾತ ಗಾಯಕ ದಿ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ನಡೆದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗಲಿದ ಗಣ್ಯರೊಬ್ಬರ ಹೆಸರಿನಲ್ಲಿ ದಸರಾ ಮಹೋತ್ಸವದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿರುವುದು ಸಹ ಇದೇ ಮೊದಲು ಎಂದರು. ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಮುಖಂಡ ಯಶಸ್ವಿನಿ ಸೋಮಶೇಖರ್ ಗೋಷ್ಠಿಯಲ್ಲಿದ್ದರು.