ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಿ: ಡಿಸಿ
ಮೈಸೂರು

ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ಪರಿಶೀಲಿಸಿ: ಡಿಸಿ

October 28, 2020

ಮೈಸೂರು, ಅ.27(ಎಂಕೆ)- ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ರಚಿಸಿರುವ ಅಧಿಕಾರಿಗಳ ತಂಡವು ನಿತ್ಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ಗಳ ಸಭೆ ನಡೆಸಿದ ಅವರು, ಪೊಲೀಸ್ ಅಧಿಕಾರಿ ಗಳು, ಸೆಸ್ಕ್ ಮತ್ತು ನೋಡಲ್ ಅಧಿಕಾರಿ ಇರುವ ವೀಕ್ಷಕರ ತಂಡವು ಕೋವಿಡ್-19 ಚಿಕಿತ್ಸೆಗೆ ಸಂಬಂ ಧಿಸಿ ಖಾಸಗಿ ಆಸ್ಪತ್ರೆಗಳತ್ತ ಕಣ್ಣಿಡಬೇಕು ಎಂದರು. ಸರ್ಕಾರದ ಸೂಚನೆಯಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರ ಸೂಚಿಸುವ ಸೋಂಕಿತರಿಗಾಗಿ ಮೀಸಲಿಟ್ಟಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆಯಾಗ ದಂತೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರವನ್ನು ಪಾಲಿ ಸುತ್ತಿವೆಯೇ ಎಂಬುದನ್ನು ಸೋಂಕಿತರ ಕುಟುಂಬಸ್ಥರಿಂದ ಮಾಹಿತಿ ಪಡೆದು ತಿಳಿದುಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆದರೆ ಆ ಹೆಚ್ಚುವರಿ ಹಣವನ್ನು ರೋಗಿಗಳ ಕಡೆಯವರಿಗೆ ವಾಪಸ್ ಕೊಡಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ನಿರ್ದೇಶನ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವಿವಿಧ ಬಗೆ ಹಾಸಿಗೆ ಪಟ್ಟಿಯನ್ನು ನಿತ್ಯವೂ ಆಸ್ಪತ್ರೆ ಮುಂಭಾಗ ಪ್ರಕಟಿಸಬೇಕು. ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿವ್ಯಕ್ತಿಯ ಪೂರ್ಣ ಮಾಹಿತಿಯನ್ನು ಎಸ್3 ಪೆÇೀರ್ಟಲ್‍ನಲ್ಲಿ ದಾಖಲಿಸುವುದನ್ನು ಗಮನಿ ಸಬೇಕು. ಖಾಸಗಿ ಆಸ್ಪತ್ರೆಗಳು ಐಸಿಎಂಆರ್ ಸೂಚಿಸಿದÀ ಚಿಕಿತ್ಸಾ ಕ್ರಮವನ್ನು ಕಡ್ಡಾಯವಾಗಿ ಅನುಸರಿಸುತ್ತಿ ವೆಯೇ ಇಲ್ಲವೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ಸೋಂಕಿತರು ಯಾವ ಕಾರಣಕ್ಕೆ ಮೃತಪಟ್ಟರು ಎಂಬ ಬಗ್ಗೆ ಡೆತ್ ಆಡಿಟ್ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಾಗೂ ಕುಟುಂಬ ದವರಿಗೆ ಸಮಸ್ಯೆ ಉಂಟಾಗಬಾರದು ಎಂಬ ಸದುದ್ದೇಶದಿಂದ ಈ ತಂಡ ರಚಿಸಲಾಗಿದೆ. ತಂಡದಲ್ಲಿರುವವರು ಆಸ್ಪತ್ರೆ ಸಿಬ್ಬಂದಿ ಯೊಡನೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್, ನೊಡೆಲ್ ಅಧಿಕಾರಿಗಳಾದ ಡಾ.ರವಿ, ಡಾ.ಸೀತಾಲಕ್ಷ್ಮಿ, ಡಾ.ಜಗದೀಶ್, ರೂಪಶ್ರೀ, ಸೆಸ್ಕ್ ಇಂಜಿನಿಯರುಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Translate »