ದಸರಾ ಮನೆ ಮನೆ ಬೊಂಬೆ ಪ್ರದರ್ಶನ  ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ದಸರಾ ಮನೆ ಮನೆ ಬೊಂಬೆ ಪ್ರದರ್ಶನ  ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

October 26, 2018

ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜನನಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮನೆ ಮನೆ ಬೊಂಬೆ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಗುರುವಾರ ಬಹುಮಾನ ವಿತರಿಸಲಾಯಿತು.

ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ 1 ಲಕ್ಷ ಬೊಂಬೆ ಪ್ರದರ್ಶನ ನಡೆಸಿದ್ದ ಆಂಧ್ರಪ್ರದೇಶದ ಗಾಯತ್ರಿ ಸೇವಾ ಟ್ರಸ್ಟ್‍ನ ಡಾ.ಎ.ರವಿಕಲ್ಯಾಣ ಚಕ್ರವರ್ತಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರ ಹ್ಮಣ್ಯ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಸುಜಾತಾ ರಾವ್ ಇನ್ನಿ ತರರು ಅತಿಥಿಯಾಗಿ ಪಾಲ್ಗೊಂಡು ಬೊಂಬೆ ಪ್ರದರ್ಶನದ ವಿಜೇತರಿಗೆ ಬಹು ಮಾನಗಳನ್ನು ವಿತರಿಸಿದರು.

ಮೈಸೂರಿನ ಗಿರಿದರ್ಶಿನಿ ಬಡಾವಣೆಯ ಗೀತಾ ಶ್ರೀಹರಿ (ಪ್ರಥಮ), ಸರಸ್ವತಿಪುರಂನ ಜಯಶ್ರೀ ನಾಗಪ್ರಸಾದ್ (ದ್ವಿತೀಯ), ಕುವೆಂಪು ನಗರದ ಇಂದ್ರಾಣಿ ಶಂಕರ್ (ತೃತೀಯ) ಹಾಗೂ ಕುವೆಂಪುನಗರದ ಮೀರಾ ರಮೇಶ್, ಗೋಕುಲಂನ ವಿ.ಎಸ್. ಪ್ರಿಯಾಂಕ, ಅರವಿಂದ ನಗರದ ರಾಜೇ ಶ್ವರಿ, ವಿಜಯನಗರ ರೈಲ್ವೆ ಬಡಾವಣೆಯ ಪೂರ್ಣಿಮಾ ಮುರಳೀಧರ್ (ಸಮಾ ಧಾನ) ಬಹುಮಾನಗಳನ್ನು ಪಡೆದಿದ್ದಾರೆ. ವಿಜೇತರಿಗೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೆಸರಿನಲ್ಲಿ ಪಾರಿ ತೋಷಕ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜನನಿ ಟ್ರಸ್ಟ್‍ನ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಡಾ. ಎಂ.ಕೆ.ಅಶೋಕ ಮಾತನಾಡಿ, ಮೈಸೂ ರಿನ 46 ಮನೆಗಳಲ್ಲಿ ಬೊಂಬೆ ಪ್ರದ ರ್ಶನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಂದು ಮನೆಯಲ್ಲೂ ಸ್ಪರ್ಧಿ ಗಳು ಆಕರ್ಷಕವಾಗಿ ಬೊಂಬೆಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್‍ನ ರೂಪಾ ಸಂಪತ್‍ಕುಮಾರ್, ಗಿರಿಜಾ ಭಗವಾನ್, ಸಂಘಟನಾ ಕಾರ್ಯದರ್ಶಿ ಎಸ್.ಎನ್. ರಾಜೇಶ್, ವಿಕ್ರಂ ಅಯ್ಯಂಗಾರ್ ಇನ್ನಿ ತರರು ಉಪಸ್ಥಿತರಿದ್ದರು.

Translate »