ಇಂದಿರಾನಗರ ಭೂ ಕುಸಿತ ಪ್ರದೇಶಕ್ಕೆ ಡಿಸಿ ಭೇಟಿ
ಕೊಡಗು

ಇಂದಿರಾನಗರ ಭೂ ಕುಸಿತ ಪ್ರದೇಶಕ್ಕೆ ಡಿಸಿ ಭೇಟಿ

September 28, 2018

ಮಡಿಕೇರಿ:  ಅತಿವೃಷ್ಟಿಯಿಂದ ಭೂಕುಸಿತದಿಂದಾಗಿ ಮನೆಗಳು ಹಾನಿ ಗೀಡಾದ ಮಡಿಕೇರಿಯ ಇಂದಿರಾನಗರಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಭೇಟಿ ನೀಡಿ ಮನೆಮಠಗಳನ್ನು ಕಳೆದುಕೊಂಡ ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.

ಮನೆಗಳನ್ನು ಕಳೆದುಕೊಂಡು ನಿರಾ ಶ್ರಿತರಾದವರಿಗೆ ಮತ್ತು ಮನೆಗಳು ಹಾನಿ ಗೀಡಾದವರಿಗೆ ಪರಿಹಾರದ ಹಣ ತಲು ಪಿರುವ ಬಗ್ಗೆ ಸಂತ್ರಸ್ಥರಿಂದ ಮಾಹಿತಿ ಯನ್ನು ಜಿಲ್ಲಾಧಿಕಾರಿಗಳು ಪಡೆದು ಕೊಂಡರು. ಇಂದಿರಾನಗರದಲ್ಲಿ ಹಾನಿ ಗೀಡಾಗಿರುವ ರಸ್ತೆಗಳ ದುರಸ್ಥಿ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದರು. ಮತ್ತು ಅಪಾಯ ಕಾರಿ ಸ್ಥಿತಿಯಲ್ಲಿರುವ ಮನೆಗಳ ನಿವಾಸಿ ಗಳಿಗೆ ಬೇರೆಡೆ ಸ್ಥಳಾಂತರಿಸಲು ಜಿಲ್ಲಾ ಧಿಕಾರಿ ಪಿ.ಐ.ಶ್ರೀವಿದ್ಯಾ ಅಧಿಕಾರಿಗಳಿಗೆ ಸೂಚಸಿದರು.

ಈ ಸಂದರ್ಭ ಮಡಿಕೇರಿ ತಹ ಶೀಲ್ದಾರ್ ಕುಂಞಮ್ಮ, ನಗರಸಭಾ ಪೌರಾಯುಕ್ತರಾದ ರಮೇಶ್, ಇಂಜಿನಿ ಯರ್, ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಖಾಬಿ ಮತ್ತಿತರರು ಹಾಜರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಅತಿವೃಷ್ಟಿಯಿಂದಾಗಿ ಸಂತ್ರಸ್ಥರಾದ ಸ್ಥಳೀಯ ನಿವಾಸಿಗಳಿಗೆ ಜಿಲ್ಲಾಡಳಿತದ ವತಿಯಿಂದ ಪರಿಹಾರವನ್ನು ವಿತರಿಸ ಲಾಗುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿ ರುವ ಮನೆಗಳ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Translate »