ಭೂಕುಸಿತ ವೇಳೆ ನಾಪತ್ತೆಯಾಗಿರುವ ಬಾಲಕಿ ಮಂಜುಳಾ ಅವರದ್ದು ಎಂಬ ಶಂಕೆ
ಮಡಿಕೇರಿ: ಭೂ ಕುಸಿತ ಮತ್ತು ಜಲ ಪ್ರಳಯಕ್ಕೆ ತುತ್ತಾಗಿ ಧ್ವಂಸಗೊಂಡ ಜೋಡುಪಾಲದ ಬಳಿ ಮೃತದೇಹವೊಂ ದರ ಅಸ್ತಿಪಂಜರ ಪತ್ತೆಯಾಗಿದೆ. ಆಗಸ್ಟ್ 16ರಂದು ಭೂ ಕುಸಿತ ಮತ್ತು ನದಿ ಪ್ರವಾ ಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಮಂಜುಳಾ (15) ಎಂಬಾಕೆಯ ಮೃತದೇಹದ ಅಸ್ತಿಪಂಜರ ಇಬರಬಹುದೆಂಬ ಬಲ ವಾದ ಶಂಕೆ ವ್ಯಕ್ತವಾಗಿದ್ದು, ವೈದ್ಯಕೀಯ ಮೂಲಗಳು ಮತ್ತು ಪೊಲೀಸರು ಇದನ್ನು ದೃಢಪಡಿಸಿಲ್ಲ.
ಮೃತದೇಹದ ಅಸ್ತಿಪಂಜರ ಮಾತ್ರವೇ ಪತ್ತೆಯಾಗಿರುವುದರಿಂದ ಮಂಜುಳಾ ಅವರ ಪೋಷಕರು ಕೂಡ ಇದನ್ನು ಖಾತರಿಪಡಿಸಲು ಸಾಧ್ಯವಾಗಿಲ್ಲ. ಕಳೆದ 41 ದಿನಗಳವರೆಗೆ ಮೃತಳ ಪೋಷಕರು ಮತ್ತು ಕುಟುಂಬಸ್ಥರು ಜೋಡುಪಾಲ ವ್ಯಾಪ್ತಿಯಲ್ಲಿ ಭೂ ಸಮಾಧಿಯಾದ ಮಂಜು ಳಾಗೆ ನಿರಂತರ ಶೋಧ ನಡೆಸುತ್ತಿದ್ದರು. ಈ ಸಂದರ್ಭ ಗುರುವಾರ ಬೆಳಗಿನ 11 ಗಂಟೆಗೆ ಸಮಯದಲ್ಲಿ ಆಕೆ ವಾಸವಿದ್ದ ಮನೆಯ 1 ಕಿ.ಮೀ. ದೂರದಲ್ಲಿ ಮಾನ ವನ ಅಸ್ಥಿಪಂಜರ ಪತ್ತೆಯಾಗಿತ್ತು.
ಮಾಹಿತಿ ಅರಿತ ಮಡಿಕೇರಿ ಗ್ರಾಮಾಂ ತರ ಪೊಲೀಸರು ಅತ್ತ ತೆರಳಿ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಸ್ಥಳಕ್ಕೆ ತೆರಳಿ ಅಸ್ಥಿಪಂಜರವನ್ನು ಪರೀಕ್ಷಿಸಿದ ವೈದ್ಯರು ಮೂಳೆಗಳು ಮನುಷ್ಯರದ್ದೆ ಎಂಬುದನ್ನು ಮಾತ್ರ ಖಚಿತ ಪಡಿಸಿದರು. ಈಗ ಸಿಕ್ಕಿರುವ ಅಸ್ಥಿಪಂಜರವನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೆ ಇದು ಮಂಜುಳಾ ಅವರ ಮೃತದೇಹದ ಅಸ್ತಿಪಂಜರ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ವೈದ್ಯರು ಮತ್ತು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಅಸ್ತಿಪಂಜರ ಯಾರದ್ದು ಎಂಬ ಪ್ರಶ್ನೆ ಉದ್ಬವಿಸಿದೆ.
ಅಂದು ನಡೆದದ್ದೇನು?: ಮೂಲತಃ ಬೆಟ್ಟತ್ತೂರಿನ ನಿವಾಸಿ ಸೋಮಯ್ಯ ಅವರ ಪುತ್ರಿ ಮಂಜಳಾ, ಮದೆನಾಡಿನ ಮದೆ ಮಹೇಶ್ವರ ಪ್ರೌಢಶಾಲೆಯಲ್ಲಿ ಎಸ್‍ಎಸ್ ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ಹಿನ್ನೆಲೆ ಆಕೆಯನ್ನು ಜೋಡುಪಾಲದ ತನ್ನ ಸಂಬಂಧಿಕರಾದ ಬಸಪ್ಪ ಅವರ ಮನೆ ಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟತ್ತೂರಿನಿಂದ ಮದೆನಾಡು ಕಡೆಗೆ ಒಂದೇ ಬಸ್ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಜೋಡುಪಾಲದಲ್ಲಿ ಉಳಿದುಕೊಂಡು ಮಂಜುಳ ವ್ಯಾಸಂಗ ಮುಂದುವರಿ ಸಿದ್ದಳು. ಆದರೆ, ಆಗಸ್ಟ್ 16ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಮತ್ತು ಜಲ ಪ್ರಳಯದಿಂದಾಗಿ ಬಸಪ್ಪ ಅವರ ಮನೆಯ ಮೇಲೆ ಬರೆ ಕುಸಿದಿ ತ್ತಲ್ಲದೆ, ನದಿ ನೀರು ಕೂಡ ನುಗ್ಗಿತ್ತು.
ಈ ಸಂದರ್ಭ ಮನೆಯಲ್ಲಿದ್ದ ಬಸಪ್ಪ, ಗೌರಮ್ಮ, ಮೋನಿಶಾ ಸೇರಿದಂತೆ ಮಂಜುಳಾ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಆ ಬಳಿಕ ಸೇನಾ ತಂಡ, ಅರೆ ಸೇನಾ ಪಡೆ, ಸಿಆರ್‍ಪಿಎಫ್, ಪೊಲೀಸರು ಡ್ರೋಣ್ ಕ್ಯಾಮರಾ ಬಳಸಿ ನಡೆಸಿದ ಶೋಧ ಕಾರ್ಯದಲ್ಲಿ ಮಂಜುಳಾ ಹೊರತುಪಡಿಸಿ ಮೂವರ ಮೃತದೇಹ ಗಳು ಪತ್ತೆಯಾಗಿ ಅಂತ್ಯ ಸಂಸ್ಕಾರವೂ ನಡೆದಿತ್ತು. ಆದರೆ ಮಂಜುಳಾ ಕಣ್ಮರೆ ಯಾಗಿ 40 ದಿನ ಕಳೆದರೂ ಆಕೆಯ ಮೃತದೇಹ ಪತ್ತೆಯಾಗಿರಲಿಲ್ಲ.