ಕೆ.ಆರ್.ನಗರದಲ್ಲಿ ಅದ್ಧೂರಿ ಗ್ರಾಮೀಣ ದಸರಾ ಆಚರಣೆ
ಮೈಸೂರು

ಕೆ.ಆರ್.ನಗರದಲ್ಲಿ ಅದ್ಧೂರಿ ಗ್ರಾಮೀಣ ದಸರಾ ಆಚರಣೆ

September 28, 2018

ಕೆ.ಆರ್.ನಗರ:  ತಾಲೂಕಿನಲ್ಲಿ ಗ್ರಾಮೀಣ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಅಧಿಕಾರಿಗಳೊಂದಿಗೆ ಚುನಾಯಿತಿ ಸದ ಸ್ಯರು ಮತ್ತು ಸಾರ್ವಜನಿಕರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ತಹಶೀ ಲ್ದಾರ್ ನಿಖಿತಾ.ಎಂ.ಚಿನ್ನಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ದಸರಾ ಹಿನ್ನಲೆಯಲ್ಲಿ ಸರ್ಕಾರ ಗ್ರಾಮೀಣ ದಸರಾ ಆಚರಣೆ ಮಾಡುವಂತೆ ಸೂಚಿಸಿರುವುದರ ಜತೆಗೆ ಹೋಬಳಿ ಮಟ್ಟದಲ್ಲೂ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಅ.10ರಂದು ಹೆಬ್ಬಾಳು ಮತ್ತು ಚುಂಚನ ಕಟ್ಟೆ, 11 ರಂದು ಮಿರ್ಲೆ ಮತ್ತು ಸಾಲಿಗ್ರಾಮ, 12 ರಂದು ಹೊಸ ಅಗ್ರಹಾರ ಮತ್ತು ಕಸಬಾ ಹೋಬಳಿಗಳಲ್ಲಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ತಹಶೀಲ್ದಾರ್ ತಾಲೂಕು ಕೇಂದ್ರದಲ್ಲಿ 15 ಮತ್ತು 16 ರಂದು ಆಚರಿಸಲಾಗುತ್ತದೆ ಎಂದರು. ಅ. 15 ರಂದು ಪಟ್ಟಣದಲ್ಲಿ ನಡೆಯುವ ಮೆರವಣಿಗೆಯಲ್ಲಿ ಎಲ್ಲಾ ಇಲಾಖೆಗಳ ವತಿಯಿಂದ ತಲಾ ಒಂದು ಸ್ತಬ್ಧಚಿತ್ರ ಪಾಲ್ಗೊಳ್ಳಬೇಕು ಎಂದು ಸೂಚಿಸಿದ ಅವರು ಚೆಸ್ಕಾಂ ವತಿಯಿಂದ ಗರುಡ ಗಂಭ ಸೇರಿದಂತೆ ಮೆರವಣಿಗೆ ಯಲ್ಲಿ ತೆರಳುವ ರಸ್ತೆಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಬೇಕು ಎಂದು ಆದೇಶಿಸಿದರು.

ಅ. 16 ರಂದು ವೇದಿಕೆ ಕಾರ್ಯಕ್ರಮ ಪುರಸಭೆ ಬಯಲು ರಂಗ ಮಂದಿರದಲ್ಲಿ ನಡೆಯಲಿದ್ದು, ಸಚಿವ ಸಾ.ರಾ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಇತರ ಚುನಾಯಿತ ಸದಸ್ಯರು ಭಾಗವಹಿಸ ಲಿದ್ದಾರೆ ಎಂದು ಮಾಹಿತಿ ನೀಡಿದರು. ತಾ.ಪಂ. ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಉಪಾಧ್ಯಕ್ಷೆ ನೀಲಮಣಿರೇವಣ್ಣ, ಸದಸ್ಯ ರಾದ ಜಿ.ಎಸ್.ಮಂಜುನಾಥ್, ಶ್ರೀನಿವಾಸ ಪ್ರಸಾದ್, ಕುಮಾರ್, ಪುರಸಭೆ ಅಧ್ಯಕ್ಷೆ ಹರ್ಷಲತಾಶ್ರೀಕಾಂತ್, ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭದ ಸ್ವಾಮಿ, ರೈತ ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಂಪ್ರಸಾದ್, ಎಸ್‍ಸಿ-ಎಸ್‍ಟಿ ಹಿತರಕ್ಷಣಾ ಸಮಿತಿ ಸದಸ್ಯ ನಾಗರಾಜು, ಸಿಡಿಪಿಒ ಸುಮಿತ್ರ, ಸಹಾಯಕ ಅಭಿಯಂತರರಾದ ಅರ್ಕೇಶ್ವರಮೂರ್ತಿ, ಮಂಜುನಾಥ್, ಚಂದ್ರಶೇಖರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »