ಕೋವ್ಯಾಕ್ಸಿನ್, ಕೋವಿಶೀಲ್ಡ್‍ಗೆ ಡಿಸಿಜಿಐ ಹಸಿರು ನಿಶಾನೆ
ಮೈಸೂರು

ಕೋವ್ಯಾಕ್ಸಿನ್, ಕೋವಿಶೀಲ್ಡ್‍ಗೆ ಡಿಸಿಜಿಐ ಹಸಿರು ನಿಶಾನೆ

January 4, 2021

ನವದೆಹಲಿ, ಜ. 3-ಸೇರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‍ಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಹೇಳಿದೆ.

ದೆಹಲಿಯಲ್ಲಿ ಡಿಸಿಜಿಐ ಅಧ್ಯಕ್ಷ ವಿ.ಜಿ.ಸೊಮಾನಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ. ತಜ್ಞರ ಸಮಿತಿ ಎರಡು ಕೊರೊನಾ ಲಸಿಕೆ ಬಗ್ಗೆ ಹೇಳಿದ್ದು ಕೋವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಆ ಎರಡು ಲಸಿಕೆಗಳಾಗಿವೆ. ಇವುಗಳನ್ನು ತುರ್ತು ಸಮಯ ದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಇದೀಗ ಡಿಸಿಜಿಐ ಅನುಮತಿ ಸಿಕ್ಕ ಲಸಿಕೆಗಳನ್ನು ಉತ್ಪಾದಿಸಲು ಮಾರ್ಕೆಟಿಂಗಾಥ ರೈಸೇಷನ್ ಸಂಸ್ಥೆಗಳು ಅನುಮತಿ ಕೋರಲಿವೆ. ಒಮ್ಮೆ ಅವುಗಳಿಗೆ ಅನುಮತಿ ಸಿಕ್ಕ ನಂತರ ಲಸಿಕೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಪ್ರಧಾನಿ ಹರ್ಷ: ಕೊನೆಗೂ ಭಾರತದಲ್ಲಿ 2 ಕೋವಿಡ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಸಂಬಂಧ ಟ್ವಿಟರ್‍ನಲ್ಲಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ. ಸೇರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ. ಈ ವಿಚಾರವನ್ನು ಡಿಸಿಜಿಐ ಸುದ್ದಿಗೋಷ್ಠಿಯ ಮೂಲಕ ಪ್ರಕಟಿಸಿದ್ದು, ಅತ್ತ ಘೋಷಣೆಯಾಗುತ್ತಲೇ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸ್ವದೇಶಿ ನಿರ್ಮಿತ ಲಸಿಕೆಗಳು ತುರ್ತು ಬಳಕೆಯ ಅನುಮೋದನೆ ಪಡೆದಿವೆ. ಇದರಿಂದ ಸಾವಿರಾರು ಜೀವ ಉಳಿಸಿ ದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. `ತುರ್ತು ಬಳಕೆಯ ಅನುಮೋದನೆ ನೀಡಲಾದ ಎರಡು ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಎನಿಸುತ್ತದೆ. ಆತ್ಮನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ ಸಮುದಾಯ ಪಟ್ಟ ಸಾಹಸ ಮತ್ತು ಉತ್ಸಾಹವನ್ನು ಇದು ತೋರಿಸುತ್ತದೆ. ಈ ಅತ್ಯುತ್ತಮ ಕೆಲಸಕ್ಕಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೆÇಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಎಲ್ಲಾ ಕೊರೊನಾ ಯೋಧರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಲಸಿಕೆ ಶೇ.110ರಷ್ಟು ಸುರಕ್ಷಿತವಾಗಿದೆ, ವದಂತಿಗಳು ಅಸಂಬದ್ಧ: ಡಿಸಿಜಿಐ
ನವದೆಹಲಿ: ಕೋವಿಡ್-19 ವಿರುದ್ಧ ವಿಶ್ವದಲ್ಲಿಯೇ ಬೃಹತ್ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಭಾರತ ಸಜ್ಜಾಗು ತ್ತಿರುವುದರ ಮಧ್ಯೆ ಸೇರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‍ಗಳ ತುರ್ತು ಪರಿಸ್ಥಿತಿಗಳಲ್ಲಿ ನಿರ್ಬಂ ಧಿತ ಬಳಕೆಗೆ ಅನುಮತಿ ನೀಡಿದೆ. ಈ ಮಧ್ಯೆ ಲಸಿಕೆಯ ಸುರ ಕ್ಷತೆ ಬಗ್ಗೆ ಹಲವರಲ್ಲಿ ಸಂಶಯ ಮೂಡಿದ್ದು, ಹಬ್ಬು ತ್ತಿರುವ ವದಂತಿ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸ್ಪಷ್ಟನೆ ನೀಡಿದೆ. ಇಂತಹ ಸಂಶಯ ಗಳು, ಹಬ್ಬುತ್ತಿರುವ ವದಂತಿಗಳು ಸಂಪೂರ್ಣವಾಗಿ ಅಸಂ ಬದ್ಧವಾಗಿದ್ದು, ಲಸಿಕೆಯ ಸುರಕ್ಷತೆಯಲ್ಲಿ ಸಣ್ಣ ಮಟ್ಟಿನ ಸಂಶಯ ಕಂಡುಬಂದರೂ ನಾವು ಅದರ ಬಳಕೆಗೆ ಅನುಮತಿ ಕೊಡುವುದಿಲ್ಲ. ಲಸಿಕೆ ಶೇ.110ರಷ್ಟು ಸುರಕ್ಷಿತವಾಗಿದೆ. ಲಸಿಕೆ ಸುರಕ್ಷಿತವಾಗಿಲ್ಲ ಎನ್ನುವುದು ಖಂಡಿತಾ ಸುಳ್ಳು ಸುದ್ದಿ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ.ಸೊಮಾನಿ ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಉಪಯೋಗಿಸಿದ ನಂತರ ಅಡ್ಡ ಪರಿಣಾಮ ಗಳೇನಾ ದರೂ ಕಾಣಿಸಿಕೊಳ್ಳಬಹುದೇ ಎಂದು ಕೇಳಿದಾಗ, ಸಣ್ಣ ಮಟ್ಟಿನ ಜ್ವರ, ನೋವು, ಅಲರ್ಜಿ ಎಲ್ಲಾ ರೀತಿಯ ಲಸಿಕೆಗಳಲ್ಲಿಯೂ ಇರುತ್ತದೆ. ಲಸಿಕೆ ಶೇ.110ರಷ್ಟು ಸುರಕ್ಷಿತವಾಗಿದೆ. ಇದರ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತ ಸರ್ಕಾರದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಸ್ವಾಗತಿಸಿದೆ ಎಂದು ಡಾ.ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.

ಭಾರತದ ಕ್ರಮ ಸ್ವಾಗತಿಸಿದ ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ,ಜ.3-ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂ ತ್ರಕ (ಡಿಸಿಜಿಐ) ಅನುಮೋದನೆ ನೀಡಿ ರುವುದು ಸ್ವಾಗತಾರ್ಹ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೇರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆ ಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂ ಧಿತ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಅತ್ತ ಡಿಸಿಜಿಐ ಲಸಿಕೆಗಳಿಗೆ ಅನುಮೋದನೆ ನೀಡುತ್ತಲೇ ಈ ಕ್ರಮ ವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ.

ಈ ಕುರಿತಂತೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರದೇಶ ಪ್ರಾಂತೀಯ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಅವರು, ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ. ಇದೊಂದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಹೇಳಿದ್ದಾರೆ.

`ಭಾರತ ಇಂದು ತೆಗೆದುಕೊಂಡ ಈ ನಿರ್ಧಾರವು ಈ ಭಾಗದಲ್ಲಿನ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಕೋವಿಡ್-19 ನ ಪರಿ ಣಾಮವನ್ನು ಕಡಿಮೆ ಮಾಡುವಲ್ಲಿ ಆದ್ಯತೆಯ ಜನಸಂಖ್ಯೆಯಲ್ಲಿ ಲಸಿಕೆ ಬಳಕೆ, ಇತರ ಸಾರ್ವಜನಿಕ ಆರೋಗ್ಯ ಕ್ರಮಗಳ ನಿರಂತರ ಅನುಷ್ಠಾನ ಮತ್ತು ಸಮುದಾಯದ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಅನುಮೋದಿತ ಲಸಿಕೆಗಳನ್ನು ಮೊದಲು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡ ಲಾಗುವುದು, ಜೊತೆಗೆ ಎರಡು ಕೋಟಿ ಆರೋಗ್ಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಮಿಕರು ಮತ್ತು 27 ಕೋಟಿ ವೈದ್ಯರು, ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಸಹ-ಅಸ್ವಸ್ಥರಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Translate »