ಡಾ. ವಿಷ್ಣು ನೆನಪಿನೋತ್ಸವದಲ್ಲಿ ಹಳೆಯ ಚಿತ್ರಗೀತೆ ರಂಜನೆ
ಮೈಸೂರು

ಡಾ. ವಿಷ್ಣು ನೆನಪಿನೋತ್ಸವದಲ್ಲಿ ಹಳೆಯ ಚಿತ್ರಗೀತೆ ರಂಜನೆ

January 5, 2021

ಮೈಸೂರು, ಜ.4(ವೈಡಿಎಸ್)- ಮೈಸೂರಿನ ರಾಮಕೃಷ್ಣನಗರ ನೃಪತುಂಗ ಶಾಲೆಯ ರಮಾಗೋವಿಂದ ರಂಗ ಮಂದಿರದಲ್ಲಿ `ಸಾಹಸಸಿಂಹ ಡಾ.ವಿಷ್ಣುವರ್ಧನ್ ನೆನಪಿ ನೋತ್ಸವ ಸಮಿತಿ’, ಕನ್ನಡ ಜನ ಜಾಗೃತಿ ವೇದಿಕೆ, ಕರ್ನಾಟಕ ಕಾವಲು ಪಡೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಸಂಗೀತ ಸಂಜೆ’ಯಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಸಂಗೀತಪ್ರಿಯ ರನ್ನು ತಲೆದೂಗುವಂತೆ ಮಾಡಿತು. ಇದೇ ವೇಳೆ ಕೊರೊನಾ ವಾರಿಯರ್ಸ್ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಿತು. ಗಾಯಕರಾದ ಅರುಣಾ ಚಲಮ್, ಟಿವಿಎಸ್ ಕುಮಾರ್, ಮಮತಾ, ಎಂ.ವಿ.ಗೋವಿಂದರಾಜು ಮಧುರ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರಿಗೆ ಮುದ ನೀಡಿದವು.

ಇದೇ ಸಂದರ್ಭ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರ್ ನಾಥ್, ಹೆಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರ ಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ನಟ ಶಂಕರ್ ಅಶ್ವಥ್, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ನೆನಪಿನೋತ್ಸವ ಸಮಿತಿಯ ಎಂ.ಮೋಹನ್ ಕುಮಾರ್‍ಗೌಡ, ಗೌರವಾಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಕಾರ್ಯಾಧ್ಯಕ್ಷ ಗ.ಶಾ.ಭೋಗಾ ನಂದೀಶ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಪ್ರೊ. ಎಂ.ಎನ್.ನಂಜರಾಜೇ ಅರಸ್, ಮಡ್ಡೀಕೆರೆ ಗೋಪಾಲ್ ಉಪಸ್ಥಿತರಿದ್ದರು.

Translate »