ಹಾಸನಕ್ಕೂ ಕಾಲಿಟ್ಟ ಮಾರಕ ‘ಮಂಗನ ಕಾಯಿಲೆ’
ಮೈಸೂರು

ಹಾಸನಕ್ಕೂ ಕಾಲಿಟ್ಟ ಮಾರಕ ‘ಮಂಗನ ಕಾಯಿಲೆ’

March 10, 2019

* ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮ
* ಚಿಕ್ಕ ಬಸವನಹಳ್ಳಿ, ಬಸವನಗುಡಿ ಗ್ರಾಮದಲ್ಲಿ ವೈರಸ್ ಪತ್ತೆ!
ಹಾಸನ: ಶಿವಮೊಗ್ಗದಲ್ಲಿ ಜನರ ಜೀವ ಹಿಂಡಿದ್ದ ಮಂಗನ ಕಾಯಿಲೆ ಇದೀಗ ಹಾಸನ ಜಿಲ್ಲೆಗೂ ವ್ಯಾಪಿಸಿದ್ದು, ಜಿಲ್ಲೆಯ ಎರಡು ಗ್ರಾಮದಲ್ಲಿ ಮಾರಕ ರೋಗದ ವೈರಸ್ ಪತ್ತೆಯಾಗಿದೆ.

ದನ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಹಾಸನ ತಾಲೂಕಿನ ಚಿಕ್ಕ ಬಸ ವನಹಳ್ಳಿ ಮತ್ತು ಸಕಲೇಶಪುರ ಬಸವನ ಗುಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ. ವೈರಸ್ ಪತ್ತೆ ಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ವಿಜಯ್ ಹಾಗೂ ಡಿಎಚ್‍ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಜಾಗೃತಿ ಮೂಡಿ ಸಲು ಮುಂದಾಗಿದ್ದು, ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕ ಗೊಂಡಿದ್ದಾರೆ. ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಔಷಧ ನೀಡಿ, ಬಿತ್ತಿಪತ್ರ ಹಂಚಿ ಜಾಗೃತಿ ಮೂಡಿಸಲು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದೆ. ಜಿಲ್ಲೆಯ 625 ದನ-ಕರುಗಳು, ಕುರಿ, ಮೇಕೆಯ ರಕ್ತದ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡು ಸ್ಯಾಂಪಲ್‍ಗಳಲ್ಲಿ ಮಂಗನ ಕಾಯಿಲೆ ವೈರಸ್ ಪಾಸಿಟಿವ್ ಆಗಿ ಬಂದಿದೆ.

ಈಗಾಗಲೇ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆಯಿಂದ ಅನೇಕರು ಮೃತ ಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ, ಜನರಿಗೆ ದ್ರವ ರೂಪದ ಔಷಧಿ ಯನ್ನು (ಆಒP oiಟ) ವಿತರಿಸುತ್ತಿದ್ದು, ಜಾನು ವಾರುಗಳನ್ನು ಮೇಯಿಸಲು ಹೋದ ವೇಳೆ ಅದನ್ನು ತಮ್ಮ ದೇಹಕ್ಕೆ ಹಚ್ಚಿಕೊಂಡು ಹೋಗ ಬೇಕು ಎಂದು ಸೂಚಿಸಿದ್ದಾರೆ.
ಜೊತೆಗೆ ಕರಪತ್ರ ವಿತರಣೆ, ಮೈಕಿಂಗ್ ಹಾಗೂ ಬ್ಯಾನರ್‍ಗಳ ಮೂಲಕ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಅಲ್ಲದೇ ಪಶು ಇಲಾಖೆ ವತಿ ಯಿಂದ ಜಾನುವಾರುಗಳಿಗೆ ಉಣ್ಣೆಗಳ ಔಷಧಿಯನ್ನು ಸಾರ್ವಜನಿಕರಿಗೆ ನೀಡು ವಂತೆ ಮನವಿ ಮಾಡಲಾಗಿದೆ. ಆದ್ದ ರಿಂದ ಯಾವುದೇ ಭಾಗದಲ್ಲಿ ಮಂಗಗಳು ಸತ್ತರೆ ಕೂಡಲೇ ವಿಷಯವನ್ನು ಆರೋಗ್ಯ ಇಲಾಖೆಗೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸಲು ಸಾರ್ವಜನಿಕರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳು ತಿಳಿಸಿದ್ದಾರೆ.
ಬೇಲೂರು ತಾಲೂಕಿನ ಗೆಂಡೆಹಳ್ಳಿ ವ್ಯಾಪ್ತಿಯಲ್ಲಿ ಮಂಗ ಸತ್ತ ಹಿನ್ನೆಲೆಯಲ್ಲಿ ಆ ಮಂಗದ ಅಂಗಾಂಶಗಳ ಮಾದರಿ ಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಏಈಆ ನೆಗೆಟಿವ್ ಎಂದು ವರದಿಯಾಗಿರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಏಈಆ ಪ್ರಕರಣಗಳು ಈವರೆಗೆ ಕಾಣಿಸಿಕೊಂಡಿ ರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಭಯ ಪಡುವ ಅಗತ್ಯವಿರು ವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಕ್ಸ್…
625 ಗ್ರಾಮಗಳಲ್ಲಿ ಉಣ್ಣೆ ಮಾದರಿ ಸಂಗ್ರಹ
ಜಿಲ್ಲೆಯಲ್ಲಿ ಮಂಗನಕಾಯಿಲೆ (ಏಈಆ) ಹರಡದಂತೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರನ್ವಯ ಜಿಲ್ಲೆಯ 625 ಗ್ರಾಮಗಳಿಂದ ಉಣ್ಣೆ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗದ ಗಿಆಐ ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷಿಸಲಾಗಿದೆ.

ಜಿಲ್ಲೆಯ 2 ಕಡೆ ಅಂದರೆ ಹಾಸನ ತಾಲೂಕಿನ ಕೌಶಿಕ ವ್ಯಾಪ್ತಿಯ ಚಿಕ್ಕಬಸವನಹಳ್ಳಿ ಗ್ರಾಮ ಹಾಗೂ ಸಕಲೇಶಪುರ ತಾಲೂಕಿನ ದೇವಾಲಕೆರೆ ವ್ಯಾಪ್ತಿಯ ಬಸವನಗುಡಿ ಗ್ರಾಮಗಳಿಂದ ಸಂಗ್ರಹಿಸಿದ್ದ ಉಣ್ಣೆ ಮಾದರಿಗಳಲ್ಲಿ ಏಈಆ ವೈರಾಣು ಇರುವುದು ಖಚಿತ ಪಟ್ಟಿರುತ್ತದೆ.
ಜಿಲ್ಲೆಯಾದ್ಯಂತ ಉಣ್ಣೆ ಮಾದರಿಗಳಲ್ಲಿ ವೈರಾಣು ಪತ್ತೆಯಾಗಿರುವುದರಿಂದ ಮಂಗನಕಾಯಿಲೆಯ ಮುಂಜಾಗ್ರತಾ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಜ್ವರ ಪೀಡಿತರಲ್ಲಿ ಸಹ ಏಈಆ ಅಂಶ ಪತ್ತೆ ಮಾಡಲು 3 ರೋಗಿಗಳ ರಕ್ತ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಏಈಆ ಪಾಸಿಟಿವ್ ವರದಿಯಾಗಿರುವುದಿಲ್ಲ. ಮಂಗನಕಾಯಿಲೆಯು ಹರಡುವ ಬಗ್ಗೆ ಮಾಹಿತಿ ಸಂಗ್ರಹಿಸಲು ಮಂಗಗಳ ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಟ್ಟಾರೆ ಮಲೆನಾಡ ಭಾಗದ ಮಂಗನ ಕಾಯಿಲೆ, ಹಾಸನಕ್ಕೂ ಆವರಿಸಿರುವುದು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡಿದೆ.

Translate »