ಜೈನ ಮುನಿಗಳಿಗೆ ಆತ್ಮೀಯ ಸ್ವಾಗತ
ಮೈಸೂರು

ಜೈನ ಮುನಿಗಳಿಗೆ ಆತ್ಮೀಯ ಸ್ವಾಗತ

July 22, 2018

ಮೈಸೂರು: ಸ್ಥಾನಕವಾಸಿ ಜೈನ ಸಂಘ ಮತ್ತು ಶ್ರೀ ಸುಮತಿನಾಥ ಜೈನ ಮೂರ್ತಿಪೂಜಕ ಸಂಘದ ಜೈನ ಮುನಿಗಳಾದ ಡಾ. ಶ್ರೀ ಸಮಕ್ತಿ ಮುನಿಜೀ ಮಹಾರಾಜ್, ಶ್ರೀ ಭವಂತ ಮುನಿಜೀ ಮಹಾರಾಜ್ ಮತ್ತು ಶ್ರೀ ಜಯವಂತ ಮುನಿಜೀ ಮಹಾರಾಜ್ ಅವರು ಚಾತುರ್ಮಾಸ ಪೂಜೆಗಾಗಿ ಇಂದು ಮೈಸೂರಿಗೆ ಆಗಮಿಸಿದರು.

ಜುಲೈನಿಂದ ಅಕ್ಟೋಬರ್‍ವರೆಗೆ ನಡೆಯುವ ಚಾತುರ್ಮಾಸಕ್ಕಾಗಿ ಆಗಮಿಸಿದ ಜೈನಮುನಿ ಶ್ರೀಗಳನ್ನು ಮೈಸೂರಿನ ಫೌಂಟನ್ ಸರ್ಕಲ್ ಬಳಿ ಜೈನ ಸಂಘಟನೆಗಳ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಅಶೋಕ ರಸ್ತೆ ಮೂಲಕ ಮೆರವಣಿಗೆಯಲ್ಲಿ ಹಳ್ಳದಕೇರಿಯಲ್ಲಿರುವ ಶ್ರೀ ಸ್ಥಾನಿಕವಾಸಿ ಜೈನ ಸಂಘಕ್ಕೆ ಕರೆತಂದರು.

ಈ ವೇಳೆ ಶ್ರೀ ಶೃತಮುನಿಜೀ ಮಹಾರಾಜ್, ಶ್ರೀ ಅಕ್ಷತ ಮುನಿಜೀ ಮಹಾರಾಜ್, ಶ್ರೀ ಸ್ಥಾನಕವಾಸಿ ಜೈನ ಸಂಘದ ಅಧ್ಯಕ್ಷ ಬಿ.ಎ. ಕೈಲಾಸಚಂದ್ ಜೈನ್, ಕಾರ್ಯದರ್ಶಿ ಸುಶೀಲ್ ನಂದಾವತ್, ಖಜಾಂಚಿ ರಾಜೇಂದ್ರ ಕುಮಾರ್ ಬನ್ಸಾಲಿ, ಉಪಾಧ್ಯಕ್ಷ ಮಾಂಗಿಲಾಲ್ ಚೌರಾಡಿಯಾ, ಜಂಟಿ ಕಾರ್ಯದರ್ಶಿ ಧರಂಚಂದ್ ನಂದಾವತ್ ಉಪಸ್ಥಿತರಿದ್ದರು.

ಶ್ರೀ ಸ್ಥಾನಕವಾಸಿ ಜೈನ ಯುವ ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್, ಉಪಾಧ್ಯಕ್ಷ ಮನೋಹರ್ ಸಂಕ್ಲಾ, ಕಾರ್ಯದರ್ಶಿ ರಾಕೇಶ್ ಬಾಂಟಿಯಾ, ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಸರಾಲ, ಶ್ರೀ ಸ್ಥಾನಿಕವಾಸಿ ಶಿಕ್ಷಣ್ ಸಂಘದ ಅಧ್ಯಕ್ಷ ಬುದ್‍ಮಾಲ್ ಬಾಗ್‍ಮಾರ್, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಬಿ.ಕೆ. ದೀಪಕ್ ಜೈನ್, ಮನಮಲ್ ಡರ್ಲಾ, ಶ್ರೀ ಸ್ಥಾನಿಕವಾಸಿ ಜೈನ ಸಂಘ ಯುವ ಸಂಘಟನೆ, ಮಹಿಳಾ ಸಂಘಟನೆ, ಮೂರ್ತಿಪೂಜಕ ಸಂಘಗಳ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಜೈನಮುನಿಶ್ರೀಗಳನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.

Translate »