ಪುನೀತ್ ರಾಜ್‌ಕುಮಾರ್ ನಿಧನದ ಆಘಾತ ಮೂವರು ಆತ್ಮಹತ್ಯೆಗೆ ಶರಣಾದರೆ, ಮತ್ತೆ ಮೂವರು ಹೃದಯಾಘಾತದಿಂದ ಸಾವು
ಮೈಸೂರು

ಪುನೀತ್ ರಾಜ್‌ಕುಮಾರ್ ನಿಧನದ ಆಘಾತ ಮೂವರು ಆತ್ಮಹತ್ಯೆಗೆ ಶರಣಾದರೆ, ಮತ್ತೆ ಮೂವರು ಹೃದಯಾಘಾತದಿಂದ ಸಾವು

October 31, 2021

ಮೈಸೂರು, ಅ.೩೦- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದಿಂದ ಮನನೊಂದು ಅವರ ಮೂವರು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಕೆ.ಆರ್.ನಗರದ ಆಟೋ ಚಾಲಕ ಸೀಮೆಎಣ್ಣೆ ಅಶೋಕ್(೪೦), ಬೆಳಗಾವಿಯ ರಾಹುಲ್ ಗಾಡಿವಡ್ಡರ (೨೬) ಮತ್ತು ಚಿಕ್ಕಮಗಳೂರಿನ ಶರತ್ (೩೦), ಆತ್ಮಹತ್ಯೆಗೆ ಶರಣಾದವರಾಗಿದ್ದು, ಕೆ.ಆರ್.ಪೇಟೆಯ ಕುಂಚ ಕಲಾವಿದ ಲೋಕೇಶ್(೪೭), ಭಾರತೀನಗರದ ಚಿತ್ರಕಥೆಗಾರ ಸುರೇಶ್(೪೬) ಮತ್ತು ಕೊಪ್ಪಳದ ಜ್ಞಾನ ಮೂರ್ತಿ ನಿಂಗಾಪುರ(೪೦) ಪುನೀತ್ ನಿಧನವಾರ್ತೆ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೆ.ಆರ್.ನಗರದ ಆಟೋ ಚಾಲಕ ಅಶೋಕ್ ಶುಕ್ರವಾರ ಪುನೀತ್ ನಿಧನದ ಸುದ್ದಿ ತಿಳಿದ ನಂತರ ದುಃಖಿತನಾಗಿದ್ದ ಎಂದು ಹೇಳಲಾಗಿದ್ದು, ಶನಿವಾರ ಕೆ.ಆರ್.ನಗರದಲ್ಲಿ ಪುನೀತ್ ಭಾವಚಿತ್ರ ಮೆರವಣ ಗೆ ಮಾಡಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಮುಗಿದ ನಂತರ ಹೊರವಲಯದ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನೇಣ ಗೆ ಶರಣು: ಬೆಳಗಾವಿಯ ರಾಹುಲ್ ಗಾಡಿವಡ್ಡರ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಯಾಗಿದ್ದು, ಶುಕ್ರವಾರ ಸಂಜೆ ಸ್ನೇಹಿತರೊಡಗೂಡಿ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬAಧ ಅಥಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನ ರಾಂಪುರ ನಿವಾಸಿ ಶರತ್ ಅವರು ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದು, ಶುಕ್ರವಾರ ಸಂಜೆವರೆಗೂ ಕಣ ್ಣÃರಿಡುತ್ತಾ, ಪುನೀತ್ ನಿಧನದ ಸುದ್ದಿಯನ್ನು ಟಿವಿ ಯಲ್ಲಿ ವೀಕ್ಷಿಸುತ್ತಿದ್ದರು. ರಾತ್ರಿ ಕೊಠಡಿಗೆ ಹೋಗಿ ನೇಣು ಬಿಗಿದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ದೂರು ತಾಲೂಕು ಭಾರತೀನಗರದ ಚಿತ್ರಕಥೆಗಾರ ಸುರೇಶ್ ಪುನೀತ್ ರಾಜ್‌ಕುಮಾರ್ಅಭಿಮಾನಿಯಾಗಿದ್ದು, ಚಿತ್ರಕಥೆ ಹಾಗೂ ಧಾರಾವಾಹಿ ಕಥೆ ಬರಹಗಾರ. ಸಿನಿಮಾರಂಗ ದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಹಲವಾರು ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದರು. ‘ಹಳ್ಳಿ ಲೈಫು’ ಮತ್ತು ‘ಪ್ಯಾಟೆ ಹುಡುಗರು’ ಚಿತ್ರಗಳಿಗೆ ಕಥೆ ಬರೆದಿದ್ದರು ಎನ್ನಲಾಗಿದ್ದು, ಈ ಚಿತ್ರಗಳು ಇನ್ನೂ ತೆರೆಕಂಡಿಲ್ಲ. ಶುಕ್ರವಾರ ಪುನೀತ್ ರಾಜ್‌ಕುಮಾರ್ ನಿಧನ ವಾರ್ತೆಯನ್ನು ಟಿವಿಯಲ್ಲಿ ನೋಡುತ್ತಿದ್ದಂತೆಯೇ ಆಘಾತಗೊಂಡು ಕುಸಿದುಬಿದ್ದ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕೆ.ಆರ್.ಪೇಟೆಯ ಕುಂಚ ಕಲಾವಿದ, ಲೋಕಿ ಆರ್ಟ್ಸ್ ಮಾಲೀಕ ಲೋಕೇಶ್ ಡಾ.ರಾಜ್‌ಕುಮಾರ್ ಅಭಿಮಾನಿಯಾಗಿದ್ದರು. ಅಲ್ಲದೆ ಅವರು ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿ. ಇವರ ಚಿತ್ರಗಳು ತೆರೆಕಂಡಾಗ ಮೊದಲ ಶೋನಲ್ಲೇ ನೋಡಿ ಬರುತ್ತಿದ್ದರು. ಶುಕ್ರವಾರ ಟಿವಿಯಲ್ಲಿ ಪುನೀತ್ ನಿಧನ ವಾರ್ತೆ ನೋಡುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ನಿಧನಕ್ಕೆ ತಾಲೂಕು ಕುಂಚ ಕಲಾವಿದರ ಸಂಘದ ಸದಸ್ಯರು ಹಾಗೂ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಕೊಪ್ಪಳದ ಜ್ಞಾನಮೂರ್ತಿ ನಿಂಗಾಪುರ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಕಿರಾಣ ಅಂಗಡಿ ನಡೆಸುತ್ತಿದ್ದ ಇವರು ಪುನೀತ್ ಚಿತ್ರ ತೆರೆಕಂಡಾಗ ಅಂಗಡಿ ಬಾಗಿಲು ಮುಚ್ಚಿ ಚಿತ್ರಮಂದಿರಕ್ಕೆ ತೆರಳಿ ಫಸ್ಟ್ ಶೋನಲ್ಲೇ ಚಿತ್ರ ವೀಕ್ಷಿಸುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರ ನಿಧನ ಸುದ್ದಿ ಕೇಳಿದ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Translate »