ಇಂದು ಬೆಳಗ್ಗೆ ಪುನೀತ್‌ರಾಜ್‌ಕುಮಾರ್‌ಅಂತ್ಯಕ್ರಿಯೆ
ಮೈಸೂರು

ಇಂದು ಬೆಳಗ್ಗೆ ಪುನೀತ್‌ರಾಜ್‌ಕುಮಾರ್‌ಅಂತ್ಯಕ್ರಿಯೆ

October 31, 2021
  • ಬೆಳಗ್ಗೆ ೫.೩೦ ರಿಂದ ೬.೩೦ರೊಳಗೆ ಅಂತಿಮ ಯಾತ್ರೆ ಆರಂಭ
  • ೧೫ ಕಿ.ಮೀ. ಯಾತ್ರೆ, ಬೆಳಗ್ಗೆ ೧೧ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ
  • ಮಧ್ಯಾಹ್ನ ನಂತರ ಹಾಲುತುಪ್ಪ
  • ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರಿಗೆ ಮಾತ್ರ ಅಂತಿಮ ವಿಧಿ-ವಿಧಾನದಲ್ಲಿ ಪಾಲ್ಗೊಳ್ಳುವ ಅವಕಾಶ
  • ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್‌ರಿಂದ ಅಂತ್ಯಕ್ರಿಯೆ ವಿಧಿ-ವಿಧಾನ ನೆರವೇರಿಸಲು ನಿರ್ಧಾರ

ಬೆಂಗಳೂರು, ಅ. ೩೦ (ಕೆಎಂಶಿ)- ಹೃದಯಾಘಾತದಿಂದ ಕೊನೆಯುಸಿರೆಳೆದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ನಗರದ ಕಂಠೀರವ ಸ್ಟುಡಿಯೋದಲ್ಲಿ ಬೆಳಗ್ಗೆ ೧೧ ಗಂಟೆಯೊಳಗೆ ಪುನೀತ್ ಅವರ ಅಂತ್ಯಸAಸ್ಕಾರ ನಡೆಯಲಿದೆ. ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್‌ಕುಮಾರ್ ಅಂತ್ಯಕ್ರಿಯೆ ವಿಧಿ-ವಿಧಾನ ನೆರವೇರಿಸಲಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಹೀಗಾಗಿ ಪಾರ್ಥಿವ ಶರೀರ ವಿಧಿ-ವಿಧಾನಗಳನ್ನು ವಿನಯ್ ನೆರವೇರಿಸಲಿದ್ದಾರೆ. ಪುನೀತ್ ಅವರ ಸೋದರ ಮಾವ ಚಿನ್ನೇಗೌಡ ಹಾಗೂ ಬಿಜೆಪಿಯ ಶಾಸಕ ಕುಮಾರ್‌ಬಂಗಾರಪ್ಪ ಅವರ ಸಮ್ಮುಖದಲ್ಲಿ ಅಬ್ಕಾರಿ ಸಚಿವ ಗೋಪಾ ಲಯ್ಯ ಅವರು ಅಂತ್ಯಸAಸ್ಕಾರ ನಡೆಯುವ ಸ್ಥಳ ನಿಗದಿ ಮತ್ತು ಪೂರ್ವ ಸಿದ್ಧತೆಯನ್ನು ಕೈಗೊಂಡಿದ್ದಾರೆ.

ವರನಟ ಡಾ.ರಾಜ್‌ಕುಮಾರ್ ಅವರ ಸಮಾಧಿಯ ಪಕ್ಕದಲ್ಲೇ ಪುನೀತ್ ಅವರ ಅಂತ್ಯಸAಸ್ಕಾರ ನಡೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ೫೦ ಬೆಟಾಲಿಯನ್ ಪೊಲೀಸರನ್ನು ನಿಯೋಜಿಸಲಾಗಿದೆ. ಅಂತ್ಯಸAಸ್ಕಾರ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬ ಸಂಬAಧಿಗಳು, ಸಿನಿಮಾ ಜಗತ್ತಿನ ಕಲಾವಿದರು ಹಾಗೂಅತೀ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ಅವರ ಸಹೋದರರಾದ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿದ ನಂತರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದಾರೆ. ಕುಟುಂಬದೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಯವರು, ಪಾರ್ಥಿವ ಶರೀರ ವೀಕ್ಷಿಸಲು ಅಭಿ ಮಾನಿಗಳ ಮಹಾಪೂರವೇ ಹರಿದು ಬರುತ್ತಿದೆ. ಅವರ ಎಲ್ಲಾ ಅಭಿಮಾನಿಗಳಿಗೂ ಪುನೀತ್ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಕುಟುಂಬ ದವರ ಸಲಹೆಯಂತೆ ನಾಳೆ ಬೆಳಗಿನ ಜಾವ ೫.೩೦ರಿಂದ ೬ ಗಂಟೆಯೊಳಗೆ ಕಂಠೀ ರವ ಕ್ರೀಡಾಂಗಣದಿAದ ಅಂತಿಮ ಯಾತ್ರೆ ಆರಂಭಗೊಳ್ಳಲಿದೆ.

೧೫ ಕಿಲೋಮೀಟರ್ ಅಂತಿಮ ಯಾತ್ರೆಯ ರೂಟ್ ಮ್ಯಾಪ್‌ನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಪುನೀತ್ ಅವರ ಹಿರಿಯ ಪುತ್ರಿ ಧೃತಿ ಅವರು ಆಗಮಿಸಿದ್ದು, ಸಂಜೆಯೇ ಅಂತ್ಯಕ್ರಿಯೆ ನಡೆಸಲು ಈ ಮುನ್ನ ತೀರ್ಮಾನಗೊಳಿಸಲಾಗಿತ್ತು. ಸಂಜೆ ವೇಳೆ ಗೊಂದಲವುAಟಾಗಬಹುದು. ಮತ್ತೊಂದೆಡೆ ಪುನೀತ್ ಅಭಿಮಾನಿಗಳು ಪಾರ್ಥಿವ ಶರೀರ ವೀಕ್ಷಿಸಲು ಹಿಂಡು ಹಿಂಡಾಗಿ ಬರುತ್ತಿರುವುದರಿಂದ ಅವರಿಗೆ ನಿರಾಸೆ ಮಾಡಬಾರದೆಂಬ ಉದ್ದೇಶದಿಂದ ನಾಳೆ ಬೆಳಗ್ಗೆ ಅಂತ್ಯಕ್ರಿಯೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಪುನೀತ್ ನಿಧನರಾಗಿ ಭಾನುವಾರಕ್ಕೆ ಮೂರು ದಿನವಾಗುವುದರಿಂದ ಬೆಳಗ್ಗೆ ೧೧ ಗಂಟೆಯೊಳಗೆ ಅಂತ್ಯಕ್ರಿಯೆ ನೆರವೇರಿಸಿ, ಕುಟುಂಬ ಸದಸ್ಯರು ಮನೆಗೆ ಹೋಗಿಬಂದ ನಂತರ ಹಾಲುತುಪ್ಪ ನೆರವೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿಯುವವರೆಗೂ ಕುಟುಂಬ ಸದಸ್ಯರು ಹಾಗೂ ಗಣ್ಯರನ್ನು ಹೊರತುಪಡಿಸಿ, ಬೇರೆ ಯಾರಿಗೂ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ ಎಂದಿರುವ ಅವರು, ಅಭಿಮಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಪುನೀತ್ ಕುಟುಂಬವರ್ಗ ಹಾಗೂ ಗಣ್ಯರಿಗೆ ಮಾತ್ರ ಅವಕಾಶ. ಅಭಿಮಾನಿಗಳು ಕಂಠೀರವ ಕ್ರೀಡಾಂಗಣದಲ್ಲಿ ಮಾತ್ರ ಪುನೀತ್ ಅವರ ದರ್ಶನ ಪಡೆದುಕೊಳ್ಳಬೇಕು. ನಾಳೆ ಬೆಳಗ್ಗೆ ಕಂಠೀರವ ಕ್ರೀಡಾಂಗಣ ದಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ ಮೆರವಣ ಗೆಯಲ್ಲಿ ತಂದು, ಅವರ ಕುಟುಂಬದ ಇಚ್ಛೆಯಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದರು. ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ದಿನವೂ ಸಾವಿರಾರು ಅಭಿಮಾನಿಗಳು ಪುನೀತ್ ದರ್ಶನ ಪಡೆದರು. ರಾಜ್ಯದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಪುನೀತ್ ಅವರ ದರ್ಶನ ಪಡೆದರು.

ಅಂತಿಮ ಯಾತ್ರೆ ರೂಟ್ ಮ್ಯಾಪ್
ಅಂತಿಮ ಯಾತ್ರೆಯು ಕಂಠೀರವ ಸ್ಟೇಡಿ ಯಂನಿAದ ಹಡ್ಸನ್ ಸರ್ಕಲ್, ಕೆ.ಜಿ.ರೋಡ್, ಮೈಸೂರು ಬ್ಯಾಂಕ್ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣ ಮೇಲ್ಸೇತುವೆ, ಚಾಲುಕ್ಯ ವೃತ್ತ, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಲ್ಲೇಶ್ವರಂ ೧೮ನೇ ಕ್ರಾಸ್, ಮಾರಮ್ಮ ಸರ್ಕಲ್, ಯಶವಂತಪುರ ಸರ್ಕಲ್, ಗೊರಗುಂಟೆ ಪಾಳ್ಯ ಮಾರ್ಗವಾಗಿ ಕಂಠೀರವ ಸ್ಟುಡಿಯೋ ತಲುಪಲಿದೆ.

ಅಮೆರಿಕಾದಿಂದ ಬಂದ ಪುತ್ರಿಯ ಆಕ್ರಂದನ
ಮೈಸೂರು, ಅ. ೩೦- ಅಮೆರಿಕದಿಂದ ಇಂದು ಸಂಜೆ ಬೆಂಗಳೂರಿಗೆ ಆಗಮಿಸಿದ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಪುತ್ರಿ ಧೃತಿ ತಂದೆಯ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು. ವಿಶೇಷ ವಿಮಾನದಲ್ಲಿ ದೆಹಲಿ ಮಾರ್ಗವಾಗಿ ಇಂದು ಬೆಂಗಳೂರಿಗೆ ಆಗಮಿಸಿ, ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿರುವ ತಂದೆಯ ಪಾರ್ಥಿವ ಶರೀರದ ಮುಂದೆ ಕಂಬನಿ ಮಿಡಿದರು. ಈ ವೇಳೆ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರ ಸಂರಕ್ಷಿಸಿ ಇಡಲಾಗಿರುವ ಫೀಜûರ್ ಬಾಕ್ಸ್ನ ಮೇಲ್ಭಾಗದ ಮುಚ್ಚಳವನ್ನು ತೆಗೆದು, ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಆಗ ಪುತ್ರಿ ಧೃತಿ ತಂದೆಯ ತಲೆಯನ್ನು ನೇವರಿಸಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ತಾಯಿ ಮತ್ತು ತಂಗಿ, ಧೈರ್ಯ ತುಂಬಿದರು. ಅಮೆರಿಕದ ನ್ಯೂಯಾರ್ಕ್ನಲ್ಲಿ ವ್ಯಾಸಂಗ ಮಾಡಲು ಮೂರು ತಿಂಗಳ ಹಿಂದೆಯಷ್ಟೇ ತೆರಳಿದ ಧೃತಿ ತಂದೆಯ ಸಾವಿನ ಸುದ್ದಿ ತಿಳಿದು ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಿ, ಅಲ್ಲಿಂದ ಸಂಜೆ ೪.೧೫ಕ್ಕೆ ಬೆಂಗಳೂರಿಗೆ ಆಗಮಿಸಿದರು. ಜಿûÃರೊ ಟ್ರಾಫಿಕ್ ಮತ್ತು ವಿಶೇಷ ಭದ್ರತೆಯೊಂದಿಗೆ ಧೃತಿ ಅಲ್ಲಿಂದ ನೇರವಾಗಿ ಸದಾಶಿವನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು.

ಸದ್ಯ ಅಮೆರಿಕದಲ್ಲಿ ಕೋವಿಡ್ ರೂಪಾಂತರಿ ವೈರಸ್ ಹಾವಳಿ ಇರುವ ಹಿನ್ನೆಲೆ, ನೇರವಾಗಿ ಮನೆಗೆ ತೆರಳಿ ಸ್ವಚ್ಛತಾ ಎಚ್ಚರಿಕಾ ಕ್ರಮ ಅನುಸರಿಸಿ, ಕಂಠೀರವ ಸ್ಟೇಡಿಯಂಗೆ ಆಗಮಿಸಿದರು. ಮನೆಗೆ ಬಂದ ಧೃತಿಯನ್ನು ತಾಯಿ ಮತ್ತು ತಂಗಿ ಬರಮಾಡಿಕೊಂಡು, ನಿನ್ನೆ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಮಾಹಿತಿ ನೀಡಿದರು.
ಸ್ಟೇಡಿಯಂನಲ್ಲಿ ನಿಸ್ತೇಜರಾಗಿ ಮಲಗಿರುವ ತಂದೆಯನ್ನು ಕಂಡು ದುಃಖಿಸಿದ ಪುನೀತ್ ರಾಜ್‌ಕುಮಾರ್ ಅವರ ಇಬ್ಬರು ಪುತ್ರಿಯರು, ತಾಯಿಯ ಅಕ್ಕ-ಪಕ್ಕ ಕುಳಿತು ತಾಯಿ ಹೆಗಲ ಮೇಲೆ ತಲೆಯಿಟ್ಟು ಕಣ ್ಣÃರು ಸುರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Translate »