ನಮೂನೆ-7ರಡಿ ಸ್ವೀಕೃತ 27000 ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಡಿ.6 ಅಂತಿಮ ಗಡುವು
ಮೈಸೂರು

ನಮೂನೆ-7ರಡಿ ಸ್ವೀಕೃತ 27000 ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಡಿ.6 ಅಂತಿಮ ಗಡುವು

December 4, 2018

ಮೈಸೂರು:  ಮತ ದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಮೈಸೂರು ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರ ಗಳಲ್ಲಿ ನಮೂನೆ-7ರ ಅಡಿಯಲ್ಲಿ ಸ್ವೀಕೃತ ವಾಗಿರುವ 27,722 ಮತದಾರರನ್ನು ಪಟ್ಟಿ ಯಿಂದ ಕೈಬಿಡುವ ಸಂಬಂಧ ಸೋಮ ವಾರ ಮೈಸೂರು ಮಹಾನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿತ್ತು.

ಜೆಡಿಎಸ್‍ನ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬೋರೇಗೌಡ ಹೊರತು ಪಡಿಸಿದರೆ, ಕಾಂಗ್ರೆಸ್, ಬಿಜೆಪಿ ಸೇರಿ ದಂತೆ ಇತರೆ ಪಕ್ಷಗಳ ಮುಖ್ಯಸ್ಥರು ಸಭೆಗೆ ಗೈರು ಹಾಜರಾಗಿದ್ದರು.

ಮೈಸೂರಿನ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವಂತೆ ನಮೂನೆ-6ರಡಿ 7663 ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ಪಟ್ಟಿಗೆ ಸೇರ್ಪಡೆ ಮಾಡ ಲಾಗುತ್ತದೆ. ಆದರೆ ನಮೂನೆ 7ರಡಿ ಗುರ್ತಿ ಸಿರುವ 27722 ಮತದಾರರ ಪೈಕಿ ಕೃಷ್ಣ ರಾಜ ಕ್ಷೇತ್ರದ 9528, ಚಾಮರಾಜ ಕ್ಷೇತ್ರದ 10266 ಹಾಗೂ ನರಸಿಂಹರಾಜ ಕ್ಷೇತ್ರದ 7933 ಮತದಾರರನ್ನು ಕೈಬಿಡಬೇಕಿದ್ದು, ಇದಕ್ಕೂ ಮುನ್ನ ರಾಜಕೀಯ ಪಕ್ಷಗಳಿಂದ ಆಕ್ಷೇಪಣೆ ಮತ್ತು ಮಾಹಿತಿಯನ್ನು ಕೇಳ ಲಾಗುತ್ತಿದೆ. ಈ ಮತದಾರರ ಪೈಕಿ ಮೃತ ಹೊಂದಿದವರು, ಕ್ಷೇತ್ರದಿಂದ ಕ್ಷೇತ್ರಕ್ಕೆ ವರ್ಗಾವಣೆಗೊಂಡಿರುವವರನ್ನು ಪರಿ ಶೀಲಿಸಬೇಕಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಅಗತ್ಯ ಮಾಹಿತಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 6ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಅಯುಕ್ತ ಕೆ.ಎಚ್.ಜಗದೀಶ್ ತಿಳಿಸಿದರು.

ಈಗಾಗಲೇ ಸ್ಥಳದಲ್ಲಿ ವಾಸ ಮಾಡಿಲ್ಲ ದವರ ಮನೆಗಳಿಗೆ ನೋಟೀಸ್ ಅಂಟಿಸ ಲಾಗಿದೆ. ಇದುವರೆಗೂ ಆಕ್ಷೇಪಣೆ ಬಂದಿಲ್ಲ. ನನ್ನನ್ನು ಕೈಬಿಡಬೇಡಿ, ನಾನಿಲ್ಲೇ ವಾಸಿಸುತ್ತಿದ್ದೇನೆ ಎಂದು ದಾಖಲೆ ಒದಗಿ ಸಿದವರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳ ಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮೃತರಾದವರಿದ್ದರೆ ಅವರ ಕುಟುಂಬದವರು ದಾಖಲೆ ಸಹಿತ ಮಾಹಿತಿ ನೀಡಬೇಕು. ಡಿ.6ರೊಳಗೆ ಮಾಹಿತಿ ನೀಡಿ ದರೆ ಸರಿಪಡಿಸುವ ಕೆಲಸ ಮಾಡಲಾಗು ತ್ತದೆ. ಡಿ.6ರಂದು ಈ ಬಗ್ಗೆ ವಿಚಾರಣೆ ಇರುತ್ತದೆ. ನಿಗದಿತ ದಿನಾಂಕದ ನಂತರ ಬಂದರೆ ಅದನ್ನು ಪರಿಗಣನೆಗೆ ತೆಗೆದು ಕೊಳ್ಳಲಾಗುವುದಿಲ್ಲ. ಅನರ್ಹ ಮತದಾರ ರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಉಪ ಆಯುಕ್ತ ಶಿವಾನಂದಮೂರ್ತಿ ತಿಳಿಸಿದರು.

ಸಭೆಗೆ ಗೈರು ಹಾಜರಾದ ಕಾಂಗ್ರೆಸ್, ಬಿಜೆಪಿ ಇನ್ನಿತರ ಪಕ್ಷಗಳ ಮುಖ್ಯಸ್ಥರಿಗೆ ನಮೂನೆ -7ರ ಅಡಿಯಲ್ಲಿ ಸ್ವೀಕೃತವಾಗಿರುವ 27,722 ಮತದಾರರನ್ನು ಪಟ್ಟಿಯಿಂದ ಕೈಬಿಡುವ ಕುರಿತ ಪ್ರಸ್ತಾವವನ್ನು ಆಯಾ ಪಕ್ಷದ ಮುಖ್ಯಸ್ಥ ರಿಗೆ ಖುದ್ದಾಗಿ ತಲುಪಿಸಿ, ಅವರಿಂದ ಸಹಿ ಪಡೆಯುವಂತೆಯೂ ಪಾಲಿಕೆಯ ಚುನಾ ವಣಾ ಸಿಬ್ಬಂದಿಗೆ ಆಯುಕ್ತರು ಸೂಚಿಸಿದರು.

Translate »