ಸುಯೋಗ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

December 4, 2018

ಮೈಸೂರು:  ವೈದ್ಯಕೀಯ ಸೇವೆ ಸಮಾಜಮುಖಿಯಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ (ಕೆಬಿಜಿ) ಅಭಿಪ್ರಾಯಪಟ್ಟರು.

ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ 18 ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಹೊರ ರೋಗಿ ತಪಾಸಣಾ ಸೇವಾ ಶಿಬಿರಕ್ಕೆ ಆಸ್ಪತ್ರೆ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆಸ್ಪತ್ರೆಗಳು ನಾಗರಿಕ ಸಮಾಜದ ಮೊಟ್ಟಮೊದಲ ಲಕ್ಷಣ. ಇಂತಹ ಆಸ್ಪತ್ರೆಗಳು ಸಮಾಜಮುಖಿಯಾಗಿ, ಅನಾರೋಗ್ಯ ಪೀಡಿತರಿಗೆ ಸ್ಪಂದಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ವೈದ್ಯಕೀಯ ಶಿಕ್ಷಣ ಪೂರೈಸಿದವರು ಹಣದ ಆಸೆಗೆ ಬಲಿಯಾ ಗದೆ ನಿಸ್ವಾರ್ಥ ಸೇವೆ ಸಲ್ಲಿಸುವುದಾಗಿ ವೈದ್ಯಶಾಸ್ತ್ರ ಪಿತಾಮಹ ಹಿಪೋಕ್ರೇಟಿಸ್ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ. ಆದರೆ ಅದಕ್ಕೆ ಅನುಗುಣವಾಗಿ ನಡೆದು ಕೊಳ್ಳುವವರು ವಿರಳ ಎಂದು ವಿಷಾದಿಸಿದರು.

ಮಂತ್ರಿಗಳೂ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಪಾಲಿಸುವವರು ಬಹುತೇಕ ಕಡಿಮೆ. ಆದಾಗ್ಯೂ ಸಮಾಜದ ಎಲ್ಲಾ ಕ್ಷೇತ್ರಗಳೂ ಸಂಪೂರ್ಣ ಕೆಟ್ಟಿವೆ ಎಂದರೆ ಅದು ತಪ್ಪಾಗುತ್ತದೆ. ಸಮಾಜದಲ್ಲಿ ಸಾಕಷ್ಟು ಒಳ್ಳೆಯ ವ್ಯಕ್ತಿಗಳು, ಸಂಸ್ಥೆಗಳು ಇವೆ. ಕೇವಲ 5ರಿಂದ 10ರಷ್ಟು ಪ್ರಮಾಣದಲ್ಲಿ ಸಮಾಜ ಕೆಟ್ಟಿರಬಹುದು. ಆದರೆ ನಮ್ಮ ನಡುವೆ ಸಾಕಷ್ಟು ಒಳ್ಳೆಯತನದ ವ್ಯಕ್ತಿತ್ವಗಳನ್ನು ಕಾಣಬಹುದು ಎಂದರು.

ಹಿಪೋಕ್ರೇಟಿಸ್ ತನ್ನ ಕಾಲದಲ್ಲೇ ವೈದ್ಯಕೀಯ ಕ್ಷೇತ್ರ ದಲ್ಲಿ ಕೆಲವು ವೈದ್ಯರಿಂದ ಆಗುವ ಎಡವಟ್ಟು ಬಗ್ಗೆ ಊಹಿ ಸಿದ್ದ. `ವೈದ್ಯರಿಂದ ಕಾಯಿಲೆ ಗುಣಪಡಿಸಲಾಗದು, ಇವ ರಿಂದ ಇನ್ನು ಕಾಯಿಲೆ ಉಲ್ಭಣವಾಗುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಅದರಿಂದ ತಪ್ಪಿಸಿಕೊಳ್ಳಬೇಕು’ ಎಂದು ಎಚ್ಚರಿಸಿದ್ದಾನೆ. ಇದು ಕೇವಲ ರೋಗಿಗಳಿಗೆ ಮಾತ್ರವಲ್ಲ, ವೈದ್ಯರ ಜವಾಬ್ದಾರಿ ಉದ್ದೇಶಿಸಿ ಹೇಳಿದ ಮಾತು ಕೂಡ ಆಗಿದೆ. ಹೀಗಾಗಿ ವೈದ್ಯರು ತಮ್ಮ ಹೊಣೆ ಯನ್ನು ಅರಿಯಬೇಕು ಎಂದು ಕೆಬಿಜಿ ಸಲಹೆ ನೀಡಿದರು.

ಸುಯೋಗ್ ಆಸ್ಪತ್ರೆಯನ್ನು ಇದೇ ಮೊದಲ ಬಾರಿಗೆ ನೋಡಿದ್ದು, ಒಬ್ಬ ಮಹಾನ್ ವ್ಯಕ್ತಿ ಒಂದು ಊರಿಗೆ ಹೋಗುವ ಮುನ್ನವೇ ಆ ವ್ಯಕ್ತಿಯ ಉನ್ನತ ವ್ಯಕ್ತಿತ್ವ ಅಲ್ಲಿ ಪರಿಚಿತವಾಗಿರುತ್ತದೆ. ಅದೇ ರೀತಿ ಈ ಆಸ್ಪತ್ರೆ ಯನ್ನು ಇದೀಗಷ್ಟೆ ನೋಡುತ್ತಿದ್ದರೂ ಇದನ್ನು ಕಟ್ಟುವ ಹಂತದಲ್ಲೇ ಉತ್ತಮ ಆಸ್ಪತ್ರೆಯಾಗಿ ಹೊರಹೊಮ್ಮುವ ಬಗ್ಗೆ ಆಲೋಚಿಸಿದ್ದೆ. ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಅವರು ಯುವಕರಾಗಿದ್ದಾಗಿನಿಂದಲೂ ನನಗೆ ಪರಿಚಿತರು. ಆಗಿನಿಂದಲೂ ಸಮಾಜಮುಖಿ ಯಾಗಿ ಸೇವೆ ಮಾಡುತ್ತ ಬಂದಿದ್ದಾರೆ ಎಂದು ಶ್ಲಾಘಿಸಿದರು.

ಆಸ್ಪತ್ರೆ ನಿವೇಶನ ಸಂಬಂಧ ಎದುರಾಗಿದ್ದ ತೊಡಕು ಗಳನ್ನು ಸಮರ್ಥವಾಗಿ ನಿಭಾಯಿಸಿ ಡಾ.ಯೋಗಣ್ಣ ಯಶಸ್ಸು ಕಂಡಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯ ಕೀಯ ಸಲಕರಣೆಗಳು ಇದ್ದು, ನುರಿತ ತಜ್ಞ ವೈದ್ಯರಿರು ವುದಾಗಿ ಡಾ.ಯೋಗಣ್ಣ ಹೇಳಿದರು. ಇಂದಿನಿಂದ ಹಮ್ಮಿಕೊಂಡಿರುವ ಉಚಿತ ತಪಾಸಣೆ ಶಿಬಿರ ಜನತೆಗೆ ಸದುಪಯೋಗವಾಗಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಅಧ್ಯಕ್ಷರೂ ಆದ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‍ಗೌಡ ಮಾತನಾಡಿ, ನಮ್ಮ ಸಂಸ್ಕøತಿ ಯಲ್ಲಿ ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಇದನ್ನು ಉಳಿಸಿಕೊಂಡು, ಬೆಳೆಸುವ ಹೊಣೆಗಾರಿಕೆ ವೈದ್ಯ ಸಮುದಾಯದ ಮೇಲಿದೆ ಎಂದು ನುಡಿದರು.

ಡಿ.3ರಿಂದ 20ರವರೆಗೆ ಎಲ್ಲಾ ಕಾಯಿಲೆಗಳಿಗೂ ಸಂಬಂ ಧಿಸಿದಂತೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಯನ್ನು ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಪಡೆದುಕೊಳ್ಳಬಹುದಾಗಿದೆ. ಎಸ್‍ಜೆಬಿ ಮತ್ತು ಬಿಜಿಎಸ್ ಸಮೂಹ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ದ್ದರು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್, ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ವೈದ್ಯ ಕೀಯ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ನಿರ್ದೇಶಕಿ ಡಾ.ಸೀಮಾ ಯೋಗಣ್ಣ ಮತ್ತಿತರರು ಹಾಜರಿದ್ದರು.

Translate »