ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗದ ಬಗ್ಗೆ ಪ್ರಶಿಕ್ಷಣ ಶಿಬಿರ
ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗದ ಬಗ್ಗೆ ಪ್ರಶಿಕ್ಷಣ ಶಿಬಿರ

December 25, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗ ಸಂಬಂಧ ಪ್ರಶಿಕ್ಷಣ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕೆ.ಆರ್.ನಗರ ಐ.ಎಂ.ಎ.ಶಾಖೆಯ ಮಾಜಿ ಅಧ್ಯಕ್ಷ ಡಾ.ಎನ್.ಡಿ.ಜಗನ್ನಾಥ್ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿ, ಹೃದ್ರೋ ಗದ ಬಗ್ಗೆ ಸುಯೋಗ್ ಆಸ್ಪತ್ರೆ ಹಮ್ಮಿಕೊಂಡಿ ರುವ ಈ ಶಿಬಿರವು ವೈದ್ಯರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ವೈದ್ಯರುಗಳು ಹೃದ್ರೋಗ ವನ್ನು ಬಹುಬೇಗ ಗುರುತಿಸಿ ಅತ್ಯಾಧುನಿಕ ಮಾಹಿತಿಗಳನ್ನು ಪಡೆಯಲು ಅನುಕೂಲ ವಾಗಲಿದ್ದು, ಈ ನಿಟ್ಟಿನಲ್ಲಿ ಸುಯೋಗ್ ಆಸ್ಪತ್ರೆಯ ಈ ಕಾರ್ಯ ಪ್ರಶಂಸನೀಯ ಎಂದರು.

ಸುಯೋಗ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಸಂತೋಷ್, ಹೃತ್ ಶುದ್ಧ ರಕ್ತ ನಾಳೇತರ ಕಾಯಿಲೆಗಳ ಬಗ್ಗೆ ಮಾತನಾಡಿ, ಕೃತಕ ಕವಾಟಗಳ ಜೋಡಣೆ, ಹೊರ ರಕ್ತ ನಾಳಗಳ ಅಡಚಣೆಯ ನಿವಾರಣೆ ಇತ್ಯಾದಿ ಗಳನ್ನು ಸುಲಭವಾಗಿ ಮಾಡುವುದರ ಬಗ್ಗೆ ವೈದ್ಯರುಗಳಿಗೆ ಮಾಹಿತಿ ನೀಡಿದರು.
ಸುಯೋಗ್ ಆಸ್ಪತ್ರೆಯ ಮತ್ತೋರ್ವ ಹೃದ್ರೋಗ ತಜ್ಞ ಡಾ. ಸಚಿನ್‍ರಾವ್, ಹೃದ ಯಾಘಾತದ ಬಗ್ಗೆ ಮಾತನಾಡಿ, ಗ್ರಾಮೀಣ ಪ್ರದೇಶದ ವೈದ್ಯರು ತಕ್ಷಣ ಹೃದಯಾ ಘಾತವನ್ನು ತಡೆಯುವುದು ಹೇಗೆ ಮತ್ತು ತಕ್ಷಣ ಮಾಡಬೇಕಾದ ಚಿಕಿತ್ಸಾ ಕ್ರಮಗಳೇನು ಎಂದು ವಿವರಿಸಿದರು. ಹೃದಯಾಘಾತ ವಾದ 4-24 ಗಂಟೆಯೊಳಗೆ ಆ್ಯಂಜಿಯೋ ಪ್ಲಾಸ್ಟಿ ಚಿಕಿತ್ಸೆಯನ್ನು ಮಾಡುವುದರಿಂದ ಹೃದಯಾಘಾತದ ಗಂಭೀರ ಪರಿಣಾಮ ಗಳನ್ನು ತಡೆಯಬಹುದೆಂದರು.
ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಹಾಗೂ ಸುಯೋಗ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಸಂದರ್ಶಕ ಮುಖ್ಯಸ್ಥ ಡಾ. ಸದಾ ನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಸುಯೋಗ್ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಎಸ್.ಪಿ.ಯೋಗಣ್ಣ ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗದ ಚಿಕಿತ್ಸೆಗಳನ್ನು ಜಯದೇವ ಹೃದ್ರೋಗ ಸಂಸ್ಥೆಯ ದರ ದಲ್ಲಿಯೇ ಎಲ್ಲರಿಗೂ ನೀಡಲಾಗುತ್ತಿದೆ ಎಂದರು.

ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ವೈದ್ಯರು ಶಿಬಿರದಲ್ಲಿ ಭಾಗ ವಹಿಸಿದ್ದರು. ಸುಯೋಗ್ ಆಸ್ಪತ್ರೆಯ ವೈದ್ಯ ಕೀಯ ನಿರ್ದೇಶಕ ಡಾ.ಆರ್. ರಾಜೇಂದ್ರ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಯೋಗ್ ಎಸ್.ವೈ ಹಾಗೂ ನಿರ್ದೇ ಶಕರಾದ ಡಾ.ಸೀಮಾ ಯೋಗಣ್ಣ ಇದ್ದರು.

Translate »