ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್  ಎ.ಬಿ.ಬೆಂಗೇರಿ ಅವರಿಗೆ ಸನ್ಮಾನ
ಮೈಸೂರು

ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್ ಎ.ಬಿ.ಬೆಂಗೇರಿ ಅವರಿಗೆ ಸನ್ಮಾನ

December 25, 2018

ಮೈಸೂರು: ಹಿರಿಯ ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್ ಎ.ವಿ.ಬೆಂಗೇರಿ ಅವರನ್ನು ಕರ್ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ.ಎಂ. ರಾಮಚಂದ್ರ ಗೌರವಿಸಿದರು. ಕುವೆಂಪುನಗರದ ಗಾನಭಾರತಿಯ ರಮಾಭಾಯಿ ಗೋವಿಂದ ರಾವ್ ಮೆಮೋರಿಯಲ್ ಸಭಾಮಂಟಪದಲ್ಲಿ ನಂದನಾ ಪ್ರದರ್ಶಕ ಕಲೆಗಳ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 18ನೇ ನೃತ್ಯನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.

ನಂತರ ಮಾತನಾಡಿದ ಬಿ.ಎಂ.ರಾಮಚಂದ್ರ, ಇತ್ತೀಚೆಗೆ ಗುರು-ಶಿಷ್ಯರ ಸಂಬಂಧಕ್ಕೆ ಕಂದಕ ತರುವ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದು ಮಕ್ಕಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಹಲವು ವರ್ಷಗಳಿಂದ ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್ ಎ.ಬಿ.ಬೆಂಗೇರಿ ಅವರು ಕಲಾ ಸೇವೆಯನ್ನು ಗುರುತಿಸಿ, ಸನ್ಮಾನ ಮಾಡುವುದು ಮೆಚ್ಚುಗೆ ವಿಷಯ ಎಂದರು.

ವಿದುಷಿ ಎಂ.ಎಲ್.ವಾರಿಜಾ ನಲಿಗೆ ಹಾಗೂ ಡಾ.ವಸುಂಧರ ದೊರೆಸ್ವಾಮಿ ಅವರ ಬಳಿ ನೃತ್ಯಾಭ್ಯಾಸ ಮಾಡಿದ ನೂರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೆಲೆಯೂರಿದ್ದಾರೆ. ಇಂತಹ ಸಾಧಕಿಯಿಂದಲೇ ನಮ್ಮ ಕಲೆ ಇಂದಿಗೂ ಜೀವಂತಿಕೆ ಉಳಿಸಿಕೊಂಡಿದೆ ಎಂದರು. ವೇದಿಕೆಯಲ್ಲಿ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್, ರಾಮಲಿಂಗು ಉಪಸ್ಥಿತರಿದ್ದರು. ಭುವನ ನಿರೂಪಿಸಿದರು.

Translate »