ದಂಪತಿ ಸೆಲ್ಫಿ ಕ್ರೇಜ್‍ಗೆ ಮಗು ಬಲಿ
ಮೈಸೂರು

ದಂಪತಿ ಸೆಲ್ಫಿ ಕ್ರೇಜ್‍ಗೆ ಮಗು ಬಲಿ

December 25, 2018

ಮಂಗಳೂರು: ಬೆಂಗಳೂರಿನ ಬನಶಂಕರಿಯ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ಬೀಚ್‍ಗೆ ತೆರಳಿದ್ದು ಈ ವೇಳೆ ದಂಪತಿಯ ಸೆಲ್ಫಿ ಕ್ರೇಜ್‍ನಿಂದಾಗಿ ಮಗು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ನಡೆದಿದೆ. 4 ವರ್ಷದ ಮೈತ್ರಿ ಕೇದ್ಕಾರ್ ಸಮುದ್ರ ಪಾಲಾದ ಮಗು ಎಂದು ತಿಳಿದುಬಂದಿದೆ. ಚಿಂತಾ ಮಣಿ ಹಾಗೂ ಶ್ರದ್ಧಾ 6 ವರ್ಷದ ಗಾರ್ಗಿ ಹಾಗೂ ಮೈತ್ರಿ ಜೊತೆ ಪ್ರವಾಸಕ್ಕೆ ತೆರಳಿದ್ದರು.

ಉಳ್ಳಾಲದ ಸೋಮೇಶ್ವರ ಬೀಚ್‍ನಲ್ಲಿ ಮಕ್ಕಳೊಂದಿಗೆ ಇಳಿದು ಸೆಲ್ಫಿ ತೆಗೆದುಕೊ ಳ್ಳಲು ಮುಂದಾಗಿದ್ದಾರೆ. ಈ ವೇಳೆ ರಕ್ಕಸ ಅಲೆಗಳು ಬಂದಿದ್ದರಿಂದ ಎಲ್ಲರೂ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಈಜು ರಕ್ಷಕ ಮೋಹನ್ ಎಂಬುವರು ಚಿಂತಾಮಣಿ- ಶ್ರದ್ಧಾ ಹಾಗೂ ಗಾರ್ಗಿಯನ್ನು ರಕ್ಷಿಸಿದ್ದಾರೆ. ಆದರೆ ಮೈತ್ರಿ ರಕ್ಕಸ ಅಲೆಗಳ ಮುಂದೆ ಮರೆಯಾಗಿದ್ದಾಳೆ. ಸದ್ಯ ಎಲ್ಲರಿಗೂ ಕೇದ್ರಾರ್ಗೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಆದರೆ ಮೈತ್ರಿ ಮಾತ್ರ ಸಮುದ್ರಪಾಲಾಗಿದ್ದಾಳೆ.

Translate »