ಸುಯೋಗ್ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 7 ಮಕ್ಕಳು ಬಿಡುಗಡೆ
ಮೈಸೂರು

ಸುಯೋಗ್ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 7 ಮಕ್ಕಳು ಬಿಡುಗಡೆ

December 21, 2018

ಮೈಸೂರು: ಸುಳವಾಡಿ ಮಾರಮ್ಮ ದೇವಾಲಯದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂ ರಿನ ರಾಮಕೃಷ್ಣನಗರದಲ್ಲಿರುವ ಸುಯೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಮಕ್ಕಳಲ್ಲಿ ಗುರುವಾರ 7 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಗುಣಮುಖರಾದ ಮಕ್ಕಳಿಗೆ ಚಾಮ ರಾಜನಗರದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಸುಯೋಗ್ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ, ಚಾಮರಾಜ ನಗರ ಜಿಲ್ಲಾ ಸರ್ಜನ್ ಡಾ.ರಘುರಾಮ್, ಜಿಲ್ಲಾ ಆರೋಗ್ಯಾಧಿಕಾರಿ(ಚಾ.ನಗರ) ಡಾ. ಪ್ರಸಾದ್ ಸೇರಿದಂತೆ ಇನ್ನಿತರರು ಮಕ್ಕಳಿಗೆ ಶುಭ ಕೋರಿ, ಬೀಳ್ಕೊಟ್ಟರು. ಇದೇ ವೇಳೆ ಸುಯೋಗ ಆಸ್ಪತ್ರೆ ವತಿಯಿಂದ ಎಲ್ಲಾ ಮಕ್ಕಳಿಗೂ ಹಣ್ಣು-ಹಂಪಲು ಹಾಗೂ ಚಾಕಲೇಟ್ ನೀಡಲಾಯಿತು.

ಇದಕ್ಕೂ ಮುನ್ನ ಆಸ್ಪತ್ರೆ ಆವರಣದಲ್ಲಿ ಸುಯೋಗ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಎಸ್.ಪಿ. ಯೋಗಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಳವಾಡಿ ಮಾರಮ್ಮ ದೇವಾಲಯ ವಿಷ ಪ್ರಸಾದ ಸೇವನೆ ಸುದ್ದಿ ತಿಳಿಯುತ್ತಿದ್ದಂತೆ ಸುಯೋಗ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವನ್ನು ರಚಿಸಲಾಯಿತು. ಈ ತಂಡದಲ್ಲಿ ಮಕ್ಕಳ ತಜ್ಞರು, ಶ್ವಾಸಕೋಶದ ತಜ್ಞ ವೈದ್ಯರ ಸೇರಿ ದಂತೆ ವಿವಿಧ ವಿಭಾಗಗಳ ತಜ್ಞರಿದ್ದರು. ಈ ತಂಡವನ್ನು ಐಸಿಯು ಸೌಲಭ್ಯವುಳ್ಳ ಆಂಬ್ಯು ಲೆನ್ಸ್‍ನೊಂದಿಗೆ ಚಾಮರಾಜನಗರ ಜಿಲ್ಲೆಯ ಕಾಮಗೆರೆಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ಬಂದ ನಮ್ಮ ವೈದ್ಯರು ನಂತರ ಸಂಜೆ ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರ ಚಿಕಿತ್ಸೆಗೆ ಸಹ ಕರಿಸಿದರು. ಅಲ್ಲದೆ, ಕೆ.ಆರ್. ಆಸ್ಪತ್ರೆಗೆ ಕರೆತರ ಲಾದ 9 ಅಸ್ವಸ್ಥ ಮಕ್ಕಳನ್ನು ನಮ್ಮ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಲಾಯಿತು. ಇದರೊಂದಿಗೆ ಐವರು ವಯಸ್ಕರೂ ನಮ್ಮಲ್ಲಿ ದಾಖಲಾಗಿದ್ದರು ಎಂದು ಹೇಳಿದರು.

ನಮ್ಮ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಐಸಿಯು ಇರುವುದರಿಂದ ತಕ್ಷಣವೇ ಮಕ್ಕಳ ತಜ್ಞೆ ಡಾ.ಶೃತಿ ನೇತೃತ್ವದ ತಂಡ ಚಿಕಿತ್ಸೆ ಆರಂಭಿಸಿತು. ಮೊದಲ 2 ದಿನ ಎಲ್ಲಾ 9 ಮಕ್ಕಳಿಗೂ ಕೃತಕ ಉಸಿ ರಾಟದ ವ್ಯವಸ್ಥೆ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಮಕ್ಕಳ ಆರೋಗ್ಯದಲ್ಲಿ ಸುಧಾ ರಣೆ ಕಂಡಿತು. 7 ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನೂ ಎರಡು ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಅಗತ್ಯ ವಾಗಿರುವುದರಿಂದ ಇನ್ನೆರಡು ದಿನ ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದರು.

ಐವರು ವಯಸ್ಕರಲ್ಲಿ ಎಲ್ಲರೂ ವೆಂಟಿ ಲೇಟರ್‍ನಲ್ಲಿಯೇ ಇದ್ದರು. ಇಂದು ಓರ್ವ ಅಸ್ವಸ್ಥರನ್ನು ವಾರ್ಡ್‍ಗೆ ವರ್ಗಾಯಿಸಲಾಗಿದೆ. ಉಳಿದ ನಾಲ್ವರಿಗೆ ವೆಂಟಿಲೇಟರ್‍ನಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಎಲ್ಲರೂ ಗುಣ ಮುಖರಾಗುವ ವಿಶ್ವಾಸವಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಚಾಮರಾಜನಗರದ ಡಿಹೆಚ್‍ಒ ಡಾ.ಪ್ರಸಾದ್, ಜಿಲ್ಲಾ ಸರ್ಜನ್ ಡಾ.ರಘು ರಾಮ್, ಸುಯೋಗ್ ಆಸ್ಪತ್ರೆಯ ವೈದ್ಯ ರಾದ ಡಾ.ಸುಯೋಗ್, ಡಾ.ಮಹೇಶ್, ಡಾ.ಶೃತಿ, ಡಾ.ಸುರೇಶ್, ಡಾ.ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »