ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ನಿರ್ಧಾರ
ಹಾಸನ

ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ನಿರ್ಧಾರ

July 6, 2019

ಬೇಲೂರು, ಜು.5- ಪರಿಶಿಷ್ಟ ಜಾತಿ, ವರ್ಗದ ಕುಂದು ಕೊರತೆಗಳನ್ನು ನಿವಾರಿ ಸಲು ಹಿತರಕ್ಷಣಾ ಸಮಿತಿ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು.

ಪಟ್ಟಣದ ಶಾಸಕರ ಕಚೇರಿ ಸಭಾಂ ಗಣದಲ್ಲಿ ಗುರುವಾರ ಆಯೋಜಿಸಿದ್ದ ಪರಿ ಶಿಷ್ಟ ಜಾತಿ, ವರ್ಗದ ಹಿತ ರಕ್ಷಣಾ ಸಮಿತಿಯ ಪೂರ್ವಬಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಬಾರಿಯೂ ಹಿತರಕ್ಷಣಾ ಸಮಿತಿ ಸಭೆ ಕರೆದ ಸಂದರ್ಭ ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಗಳೂ ಬಗೆಹರಿಯುತ್ತಿರಲಿಲ್ಲ. ಸಭೆಯಲ್ಲಿ ನೂರಾರು ಜನರು ಸೇರುತ್ತಾರೆ. ಎಲ್ಲರೂ ಒಟ್ಟಿಗೆ ಮಾತನಾಡುವುದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿ ಸಭೆಯು ಗೊಂದಲ ದಲ್ಲೇ ಮುಗಿಯುತ್ತಿತ್ತು. ಯಾವುದೇ ಇಲಾ ಖೆಯ ವಿಚಾರ ಪೂರ್ಣವಾಗಿ ಚರ್ಚೆಗೆ ಬರುತ್ತಿರಲಿಲ್ಲ. ಆನಂತರ, ಪರಿಶಿಷ್ಟ ಜಾತಿ, ವರ್ಗದವರ ಸಮಸ್ಯೆಗೆ ಶಾಸಕರು ಸ್ಪಂದಿಸ ಲಿಲ್ಲ ಎಂಬ ಆರೋಪ ಕೇಳಿ ಬರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ಈ ಬಾರಿ ಸ್ವಲ್ಪ ಬದಲಾ ವಣೆ ತಂದು ತಾಲೂಕು ಮಟ್ಟದ ಸಮಿತಿ ಮಾಡಿ, ಸಮಿತಿಗೆ ಎಲ್ಲ ರಾಜಕೀಯ ಪಕ್ಷ ಗಳ ದಲಿತ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ದಲಿತ ಪರ ಸಂಘಟನೆಗಳ ಆಯ್ದ ಎಲ್ಲ ಹೋಬಳಿಗಳ ಜವಾಬ್ದಾರಿಯುತ ಮುಖಂಡರನ್ನು ಸೇರಿಸಿ ಸಾವಧಾನವಾಗಿ ಸಭೆ ನಡೆಸಿ ಕುಂದುಕೊರತೆ ಗಳ ಬಗ್ಗೆ ಅರಿವಿರುವ ಮುಖಂಡರೊಂ ದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿ ಸೋಣ ಎಂದುಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಮೊದಲು ದಿನಾಂಕ ನಿಗದಿಪಡಿಸಿ ಸಭೆ ನಡೆಸೋಣ. ಆ ಮೂಲಕ ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಪ್ರಯತ್ನಿಸೋಣ ಎಂದರು.

ಸಭೆಯಲ್ಲಿದ್ದ ದಲಿತ ಮುಖಂಡರು, ಶಾಸಕರ ಈ ಪ್ರಸ್ತಾವನೆಗೆ ಸಮ್ಮತಿಸಿದರು. ಹಿತರಕ್ಷಣಾ ಸಮಿತಿ ಸಭೆ ಕರೆಯಲು ದಿನ ನಿಗದಿಗೊಳಿಸುವಂತೆಯೂ, ಸಭೆಗೆ ಹಾಜ ರಾಗಬೇಕಾದ ಸಂಘಟನೆಗಳ ಮುಖಂ ಡರ ಹೆಸರುಗಳನ್ನು ಪಟ್ಟಿ ಮಾಡುವಂ ತೆಯೂ ಸಲಹೆ ನೀಡಿದರು.

ತಾಪಂ ಉಪಾಧ್ಯಕ್ಷೆ ಜಮುನ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸದಸ್ಯರಾದ ಸೋಮಯ್ಯ, ಕಮಲಮ್ಮ, ಸಂಗೀತಾ, ಜಿಪಂ ಮಾಜಿ ಅಧ್ಯಕ್ಷೆ ಜಿ.ಟಿ.ಇಂದಿರಾ, ದಲಿತ ಮುಖಂಡ ರಾದ ಮರಿಯಪ್ಪ, ಗಂಗಾಧರ್ ಬಹುಜನ, ಎನ್.ಯೋಗೀಶ್, ಲಕ್ಷ್ಮಣ್, ಕುಮಾರ್, ಲಿಂಗರಾಜು, ದೊರೆಸ್ವಾಮಿ, ನಿಂಗರಾಜು, ತಹಸಿಲ್ದಾರ್ ಮೇಘನಾ, ತಾಪಂ ಇಒ ರವಿಕುಮಾರ್, ಸಮಾಜ ಕಲ್ಯಾಣಾಧಿಕಾರಿ ಬರಮಪ್ಪ ಮತ್ತಿತರರಿದ್ದರು.

Translate »