ರೈತ ಕುಟುಂಬಗಳ ಸಮೀಕ್ಷೆ ನಡೆಸಲು ನಿರ್ಧಾರ
News

ರೈತ ಕುಟುಂಬಗಳ ಸಮೀಕ್ಷೆ ನಡೆಸಲು ನಿರ್ಧಾರ

January 31, 2022

Éಂಗಳೂರು, ಜ.30- ರೈತರ ಆದಾಯ ದ್ವಿಗುಣಗೊಳಿ ಸಲು ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ರೈತ-ಕುಟುಂಬಗಳ ಬೃಹತ್ ಸಮೀಕ್ಷೆ ಯನ್ನು ನಡೆಸಲು ನಿರ್ಧರಿಸಿದೆ.

ಪ್ರತಿಯೊಂದಕ್ಕೂ ಸೂಕ್ತವಾದ ಕಾರ್ಯ ಕ್ರಮವನ್ನು ರೂಪಿಸಿ, ಸಮೀಕ್ಷೆಯ ದತ್ತಾಂ ಶದ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ.

ಮಾಧ್ಯಮಿಕ ಕೃಷಿ ನಿರ್ದೇಶನಾಲಯದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮೀಕ್ಷೆಯ ನಂತರ ಪ್ರತಿಯೊಬ್ಬ ರೈತನ ಕುಟುಂಬದಲ್ಲಿ ಲಭ್ಯವಿರುವ ಭೂಮಿ ಮತ್ತು ಮಾನವ ಸಂಪ ನ್ಮೂಲವನ್ನು ಆಧರಿಸಿ ಯೋಜನೆ ರೂಪಿಸಬೇಕು. ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತಿತರ ಇಲಾಖೆಗಳ ಅಧಿಕಾರಿಗಳಿಂದ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಬೇಕೆಂದು ಸೂಚಿಸಿದರು.
ಕೃಷಿ ಇಲಾಖೆಗೆ ಹೊಂದಿಕೊಂಡಿದ್ದರೂ ಸೆಕೆಂಡರಿ (ಅಧೀನ) ಕೃಷಿ ನಿರ್ದೇಶನಾಲಯ ಸ್ವತಂತ್ರವಾಗಿ ಕಾರ್ಯನಿರ್ವಹಿ ಸಬೇಕು. ಮೀನುಗಾರಿಕೆ, ಪಶು ಸಂಗೋಪನೆ, ಪಶುವೈದ್ಯಕೀಯ ಸೇರಿದಂತೆ ಸಮಗ್ರ ಕೃಷಿ ಹಾಗೂ ನೂತನ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ನಿರ್ದೇಶನಾಲಯ ಹೊಂದಿರಬೇಕು. ಇತರೆ ಚಟುವಟಿಕೆಗಳನ್ನು ಗುರು ತಿಸಿ ಅವುಗಳಿಗೆ ಬಂಡ ವಾಳ ತೆರಬೇಕೆಂದರು.

ಶ್ರಮದಾಯಕವಲ್ಲದ, ಆದರೆ ತಂತ್ರಜ್ಞಾನ ಅವ ಲಂಬಿತ ಭೂಮಿ ಮತ್ತು ಕೃಷಿ ಪದ್ಧತಿಗಳ ಸಮರ್ಥ ಬಳಕೆಗೆ ಗಮನ ನೀಡಬೇಕು. ಹೊಸ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕಲು ಸ್ಥಳೀಯ ರೈತ ಉತ್ಪನ್ನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ರಫ್ತು ಉತ್ತೇಜಿಸಲು ಮತ್ತು ರೈತರಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಡಿಜಿಟಲ್ ವೇದಿಕೆ ಪ್ರಾರಂಭಿ ಸಲು ಅಧಿಕಾರಿಗಳಿಗೆ ಸೂಚಿಸಿದರು. ರೈತರು ಕೃಷಿಯನ್ನು ಹೊಸ ಮತ್ತು ಕ್ರಿಯಾತ್ಮಕ ರೀತಿಯಲ್ಲಿ ನೋಡಲು ಸಹಾಯ ಮಾಡಲು, ‘ರೈತರ ಮನಸ್ಥಿತಿಯನ್ನು ಬದಲಾಯಿಸುವ’ ನಿಟ್ಟಿನಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ತಿಳಿಸಿದರು. ರೈತರಿಗೆ ಉತ್ತಮ ಉತ್ಪಾದಕತೆ ಮತ್ತು ಮಾರುಕಟ್ಟೆಯನ್ನು ತೆರೆಯಲು ಸಹಾಯ ಮಾಡುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಕೃಷಿ ವಿಶ್ವವಿದ್ಯಾನಿಲಯಗಳ ನೆರವು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಬಳಿಕ ರಾಜ್ಯ ಸರ್ಕಾರ ಪ್ರಾಯೋಜಿಸಿರುವ ಫುಡ್ ಪಾರ್ಕ್‍ಗಳ ಪರಿಣಾಮ ಮೌಲ್ಯಮಾಪನ ನಡೆಸುವಂತೆ ಫುಡ್ ಕರ್ನಾಟಕ ಲಿಮಿಟೆಡ್ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ನಾಲ್ಕು ಫುಡ್ ಪಾರ್ಕ್‍ಗಳನ್ನು ಹೊಂದಿದೆ. ಭೂಸ್ವಾಧೀನ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಬಾಗಲಕೋಟೆ, ಹಿರಿಯೂರು, ಮಾಲೂರು ಮತ್ತು ಜೇವರ್ಗಿಯಲ್ಲಿ ಕೈಗಾರಿಕಾ ವಲಯಗಳ ಸ್ಥಾಪನೆಗೆ ಮಾರ್ಗ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಫುಡ್ ಪಾರ್ಕ್‍ಗಳಿಗಾಗಿ ಫುಡ್ ಕರ್ನಾಟಕ ಲಿಮಿಟೆಡ್‍ಗೆ 26 ಕೋಟಿ ರೂ. ಮಂಜೂರು ಮಾಡುವ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಹೇಳಿದರು.

Translate »