ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡನೆ
News

ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡನೆ

January 31, 2022

ಹೊಸದಿಲ್ಲಿ, ಜ.30- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿದ್ದಾರೆ. ಫೆ.1ರಂದು 2022-23ನೇ ಆರ್ಥಿಕ ವರ್ಷದ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಪ್ರತಿಗಳನ್ನು ಮುದ್ರಣ ಮಾಡದೇ ಇರಲು ತೀರ್ಮಾನಿಸಲಾಗಿದೆ.

ಕಳೆದ ವರ್ಷ ಕೂಡ ಕೋವಿಡ್‍ನಿಂದಾಗಿ ಸಂಪೂರ್ಣ ಪೇಪರ್ ಲೆಸ್ ಬಜೆಟ್ ಮಂಡನೆ ಮಾಡಲಾಗಿತ್ತು. ಇದು ಭಾರತದ ಇತಿಹಾಸ ದಲ್ಲೇ ಮೊದಲ ಪೇಪರ್ ಲೆಸ್ ಬಜೆಟ್ ಎಂಬ ಹೆಗ್ಗಳಿಕೆ ಹೊಂದಿತ್ತು. ಇದೀಗ ವಿತ್ತ ಸಚಿವರು ಎರಡನೇ ಬಾರಿಗೆ ಪೇಪರ್‍ಲೆಸ್ ಬಜೆಟ್ ಮಂಡನೆ ಮಾಡಲಿದ್ದಾರೆ.

ತಡೆರಹಿತ ಸಂಪರ್ಕಕ್ಕೆ ಬಜೆಟ್ ಆ್ಯಪ್: ಕಾಗದ ರಹಿತ ಬಜೆಟ್ ಮಂಡನೆ ಮಾಡುತ್ತಿರುವ ಕಾರಣ, ಸಂಸತ್ ಸದಸ್ಯರಿಗೆ ಮತ್ತು ಜನಸಾಮಾನ್ಯರಿಗೆ ಬಜೆಟ್ ದಾಖ ಲಾತಿ ಒದಗಿಸಲು ಮತ್ತು ತಡೆರಹಿತ ಸಂಪರ್ಕ ಕಲ್ಪಿಸಲು ಯೂನಿಯನ್ ಬಜೆಟ್ ಆ್ಯಪ್ ಆರಂಭಿಸಲಾಗಿದೆ. ಸಂಸತ್‍ನಲ್ಲಿ ಫೆಬ್ರವರಿ 1ರಂದು ಬಜೆಟ್ ಮಂಡನೆಯಾದ ನಂತರ ಕೇಂದ್ರ ಬಜೆಟ್ ಪ್ರತಿಯು ಮೊಬೈಲ್ ಆ್ಯಪ್‍ನಲ್ಲಿ ದೊರೆಯಲಿದೆ ಎಂದು ಹೇಳಲಾಗಿದೆ.

ಬಜೆಟ್ ಆ್ಯಪ್‍ನಲ್ಲಿ ಕಳೆದ 14 ವರ್ಷಗಳ ಕೇಂದ್ರ ಬಜೆಟ್‍ನ ದಾಖಲಾತಿಗಳು ದೊರೆ ಯುತ್ತವೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವೂ ಒಳಗೊಂಡಿರುತ್ತದೆ. ಇದರ ಜತೆಗೆ ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್ (ಸಾಮಾನ್ಯ ವಾಗಿ ಬಜೆಟ್ ಎಂದು ಕರೆಯಲಾಗುತ್ತದೆ). ಅನುದಾನದ ಬೇಡಿಕೆ (ಆಉ), ಹಣಕಾಸು ಮಸೂದೆ ಮತ್ತು ಇತರೆ ಮಾಹಿತಿ ಗಳು ಲಭ್ಯವಿರಲಿದೆ. ಮೊಬೈಲ್ ಆ್ಯಪ್ ದ್ವಿಭಾಷೆ (ಇಂಗ್ಲಿಷ್ ಮತ್ತು ಹಿಂದಿಯಲ್ಲಿ) ಇದ್ದು ಮತ್ತು ಆಂಡ್ರಾಯಿಡ್ ಹಾಗೂ ಐಒಎಸ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲಭ್ಯ ಇದೆ. ಆ್ಯಪ್ ಅನ್ನು ಕೇಂದ್ರ ಬಜೆಟ್ ವೆಬ್ ಪೆÇೀರ್ಟಲ್ (ತಿತಿತಿ.iಟಿಜiಚಿ buಜgeಣ.gov.iಟಿ) ಮೂಲಕ ಡೌನ್‍ಲೋಡ್ ಮಾಡ ಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Translate »