ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

January 30, 2022

ಮೈಸೂರು,ಜ.29(ಪಿಎಂ)-ಗಣರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯ ಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿ ಕಾರ್ಜುನಗೌಡರನ್ನು ಸೇವೆಯಿಂದ ವಜಾ ಗೊಳಿಸಬೇಕು ಹಾಗೂ ನ್ಯಾಯಾಧೀಶರ ನೇಮಕಾತಿಯಲ್ಲೂ ಮೀಸಲಾತಿ ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಪ್ರತಿ ಭಟನಾ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ `ಡಾ.ಬಿ.ಆರ್.ಅಂಬೇಡ್ಕರ್ ಗೌರ ವಾರ್ಥ ಸ್ವಾಭಿಮಾನಿ ನಡಿಗೆ’ ಶೀರ್ಷಿಕೆ ಯಡಿ ಪ್ರತಿಭಟನಾ ಮೆರವಣಿಗೆ ನಡೆಸ ಲಾಯಿತು. ಬುದ್ಧ, ಬಸವ ಮತ್ತು ಅಂಬೇ ಡ್ಕರ್ ವೇಷಧಾರಿಗಳಾಗಿ ಮೂವರು ಮಕ್ಕಳು ಈ ವೇಳೆ ಗಮನ ಸೆಳೆದರು. ಗಾಂಧಿ ಪುತ್ಥಳಿ ಬಳಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸ್ವಾಭಿ ಮಾನಿ ನಡಿಗೆಗೆ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಷ್ಟ್ರಕ್ಕೆ ಪವಿತ್ರ ಗ್ರಂಥ ಭಾರತದ ಸಂವಿಧಾನ. ಅಂತಹ ಮಹಾನ್ ಗ್ರಂಥವನ್ನು ದೇಶಕ್ಕೆ ಸಮರ್ಪಿಸಿದ ಮಹನೀಯರ ವಿಚಾರದಲ್ಲಿ ಒಬ್ಬ ನ್ಯಾಯಾಧೀಶರು ನಡೆದುಕೊಂಡ ರೀತಿ ನಿಜಕ್ಕೂ ಕ್ಷಮೆಗೆ ಅರ್ಹವಲ್ಲ. ಸರ್ಕಾರ ಇಷ್ಟೊತ್ತಿಗೆ ಈ ಸಂಬಂಧ ಗಂಭೀರ ಕ್ರಮ ಕೈಗೊಳ್ಳಬೇಕಿತ್ತು. ಇದರ ಹಿಂದೆ ಯಾರದ್ದಾ ದರೂ ಪ್ರಚೋದನೆ ಇದೆಯೇ? ಎಂಬು ದನ್ನು ವಿಚಾರಣೆ ಮೂಲಕ ಬಹಿರಂಗ ಗೊಳಿಸಲು ಸರ್ಕಾರ ಮುಂದಾಗಬೇಕು. ಇದು ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ. ಇವರ ವರ್ತನೆ ವಿರುದ್ಧ ಇಡೀ ರಾಷ್ಟ್ರಾ ದ್ಯಂತ ಪ್ರತಿಭಟನೆ ನಡೆಯಲಿದೆ ಎಂದರು.

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗ ವಾನ್ ಮಾತನಾಡಿ, ನ್ಯಾಯಾಧೀಶರ ಈ ವರ್ತನೆಯಿಂದ ಇಡೀ ದೇಶವೇ ನಾಚಿಕೆ ಯಿಂದ ತಲೆತಗ್ಗಿಸಬೇಕಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಈ ರೀತಿ ಮಾಡಿದ್ದರೆ, ಇಷ್ಟು ಗಂಭೀರ ವಾಗಿ ಪರಿಗಣಿಸುವ ಅಗತ್ಯವಿರಲಿಲ್ಲ. ಆದರೆ ಇವರು ಕಾನೂನು ಬಲ್ಲ ನ್ಯಾಯಾ ಧೀಶರಾಗಿ ಈ ರೀತಿ ವರ್ತಿಸಿರುವುದು ಖಂಡನೀಯ. ಇವರ ಇನ್ನೂ ಚಾರ್ತು ವರ್ಣ ಪದ್ಧತಿಯ ಮನಸ್ಥಿತಿಯಲ್ಲೇ ಇದ್ದಾರೆ ಎಂದು ಕಿಡಿಕಾರಿದರು.

ಒಂದು ಸಂದರ್ಭದಲ್ಲಿ ಭಗವದ್ಗೀತೆಯನ್ನು ನಮ್ಮ ದೇಶದ ಧಾರ್ಮಿಕ ಗ್ರಂಥ ಎಂದು ಘೋಷಿಸಬೇಕೆಂಬ ಬೇಡಿಕೆ ಹಲವರಿಂದ ವ್ಯಕ್ತವಾಗಿತ್ತು. ಆ ವೇಳೆ ಪ್ರಧಾನಿಯವರು ನಮ್ಮ ಸಂವಿಧಾನವೇ ನಮ್ಮ ರಾಷ್ಟ್ರೀಯ ಧರ್ಮ ಗ್ರಂಥ ಎಂದು ಹೇಳಿದರು. ಅಂತಹ ಗ್ರಂಥಕ್ಕೇ ಮಾಡಿದ ಅಪಮಾನವಿದು. ಸದರಿ ನ್ಯಾಯಾಧೀಶರನ್ನು ಕೂಡಲೇ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸಂವಿಧಾನ ಕರ್ತೃ ಡಾ.ಬಿ. ಆರ್.ಅಂಬೇಡ್ಕರ್ ಫೋಟೋ ತೆಗೆಸಿ ರುವುದು ದೇಶವೇ ತಲೆತಗ್ಗಿಸುವ ಘಟನೆ. ಸದರಿ ನ್ಯಾಯಾಧೀಶರನ್ನು ಸೇವೆ ಯಿಂದ ವಜಾಗೊಳಿಸುವವರೆಗೆ ಹೋರಾಟ ನಡೆಯಲಿದೆ ಎಂದರು.

ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್ ಚಂದ್ರ ಗುರು ಮಾತನಾಡಿ, ಈ ನ್ಯಾಯಾ ಧೀಶರು ಇಷ್ಟು ವರ್ಷದಲ್ಲಿ ಕೊಟ್ಟಿರುವ ತೀರ್ಪುಗಳ ಸಂಬಂಧ ಸರ್ಕಾರ, ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ಪರಾಮರ್ಶೆ ನಡೆಸಲು ಕ್ರಮ ವಹಿಸಬೇಕು. ವಿಚಾರಣೆ ಕಾಯ್ದಿರಿಸಿ, ಇವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಅಂಬೇಡ್ಕರ್ ಫೋಟೋ ತೆಗೆಸುವ ಮೂಲಕ ಮಲ್ಲಿಕಾರ್ಜುನಗೌಡ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಇದು ಖಂಡನೀಯ. ಈ ಘಟನೆ ನಡೆದು 3 ದಿನಗಳು ಕಳೆದರೂ ಮಲ್ಲಿಕಾರ್ಜುನ ಗೌಡ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರ ಶೇಖರ್, ರಾಜ್ಯ ನಾಯಕರ ಯುವ ಸೇನೆಯ ಅಧ್ಯಕ್ಷ ದೇವರಾಜ್ ಟಿ.ಕಾಟೂರ್ ಮತ್ತಿ ತರರು ಪಾಲ್ಗೊಂಡಿದ್ದರು.

Translate »