ಮೈಸೂರು ಮೃಗಾಲಯದ ಸಬ್ ವೇ ಸೇವೆಗೆ ಸಮರ್ಪಣೆ
ಮೈಸೂರು

ಮೈಸೂರು ಮೃಗಾಲಯದ ಸಬ್ ವೇ ಸೇವೆಗೆ ಸಮರ್ಪಣೆ

March 3, 2022

ಮೈಸೂರು,ಮಾ.2(ಎಂಟಿವೈ)- ಮೈಸೂರು ಮೃಗಾಲಯಕ್ಕೆ ನಿರ್ಮಿಸ ಲಾಗಿದ್ದ `ಸಬ್-ವೇ’ಯನ್ನು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿ, ಪ್ರವಾಸಿಗರ ಸುಗಮ, ಸುರಕ್ಷಿತ ಸಂಚಾರಕ್ಕೆ ಸಮರ್ಪಿಸಿದರು.

ಮೃಗಾಲಯ ಮುಂಭಾಗದ ರಸ್ತೆಯಲ್ಲಿ ಸದಾ ವಾಹನ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳದಿಂದ ಪ್ರವಾಸಿಗರು ಮೃಗಾಲಯ ಪ್ರವೇಶಿಸಲು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ಮೃಗಾಲಯದ ವತಿಯಿಂದ ಅಂಡರ್ ಪಾಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಮೃಗಾಲಯ ಪ್ರಾಧಿಕಾರದಿಂದ ಅನು ಮೋದನೆ ಪಡೆದು 1.95 ಕೋಟಿ ರೂ. ವೆಚ್ಚದಲ್ಲಿ ಈ ಸಬ್ ವೇ ನಿರ್ಮಾಣ ಕಾಮ ಗಾರಿಯನ್ನು 2020ರ ಜ.17ರಂದು ಆರಂ ಭಿಸಲಾಗಿತ್ತು. ಬೆಂಗಳೂರಿನ ವಿನ್ಯಾಸ್ ಬಿಲ್ಡರ್ಸ್ ಸಂಸ್ಥೆ ಗುತ್ತಿಗೆ ಪಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಕಾಮ ಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರ ಲಿಲ್ಲ. ಕಳೆದ ತಿಂಗಳಷ್ಟೇ ಸಬ್ ವೇ ಕಾಮ ಗಾರಿ ಪೂರ್ಣಗೊಂಡಿತ್ತು.

ಈ ವೇಳೆ ಸಚಿವ ಎಸ್.ಟಿ.ಸೋಮ ಶೇಖರ್ ಮಾತನಾಡಿ, ದೇಶದ ಪ್ರಮುಖ ಮೃಗಾಲಯಗಳಲ್ಲಿ ಮೈಸೂರು ಮೃಗಾಲಯ ಮುಂಚೂಣಿಯಲ್ಲಿದೆ. ಹಲವು ವಿಶೇಷ ಪ್ರಾಣಿ -ಪಕ್ಷಿಗಳನ್ನು ಹೊಂದಿರುವ ನಮ್ಮ ಮೃಗಾ ಲಯ ವೀಕ್ಷಣೆಗಾಗಿ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಮೃಗಾಲಯ ಪ್ರವೇ ಶಿಸಲು ವಾಹನ ದಟ್ಟಣೆ ನಡುವೆ ರಸ್ತೆ ದಾಟಲು ಹರಸಾಹಸ ಪಡುತ್ತಿದ್ದುದ್ದನ್ನು ಗಮನಿಸಿದ ಮೃಗಾಲಯದ ಅಧಿಕಾರಿ ಗಳು 1.95 ಕೋಟಿ ರೂ. ವೆಚ್ಚದಲ್ಲಿ ಸಬ್ ನಿರ್ಮಿಸಿದ್ದು, ಪ್ರವಾಸಿಗರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಮೃಗಾಲಯ ವೀಕ್ಷಣೆಗೆ ವಿವಿಧೆಡೆಯಿಂದ ಬರುವ ಪ್ರವಾಸಿಗರು ವಾಹನ ನಿಲುಗಡೆ ಮಾಡಿ ರಸ್ತೆ ದಾಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಆಸಕ್ತಿ ವಹಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಮುಂದಾಗಿದ್ದರು. ಕಾಮಗಾರಿ ಪೂರ್ಣ ಗೊಂಡಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿ ಸಿದ್ದಾರೆ. ಇದರ ಉಪಯೋಗ ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಆಗುತ್ತದೆ ಎಂಬ ಆಶಯವಿದೆ ಎಂದರು.
ಮೈಸೂರಿನ 3ನೇ ಸಬ್ ವೇ: ಈ ಸಬ್ ವೇ 30 ಮೀಟರ್ ಉದ್ದ, 4.75 ಮೀಟರ್ ಅಗಲ ಹಾಗೂ 3 ಮೀಟರ್ ಎತ್ತರವಿದೆ. ಅಂದಾಜು 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಪ್ರಸ್ತುತ 1.89 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ ಮೃಗಾಲಯ ಪ್ರವೇಶಿಸುವವರು ಹಾಗೂ ಮೃಗಾಲಯ ವೀಕ್ಷಣೆ ಬಳಿಕ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪ್ರತ್ಯೇಕ ಪಾಥ್(ಮಾರ್ಗ) ಇರುವುದರಿಂದ, ಜೊತೆಗೆ ವಿಸ್ತಾರವಾಗಿರುವುದರಿಂದ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲಕಾರಿಯಾಗಿದೆ. ಈ ವೇಳೆ ಶಾಸಕ ಎಸ್.ಎ.ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ, ಸಂಸದ ಪ್ರತಾಪ್‍ಸಿಂಹ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ, ಮೃಗಾಲಯ ಕಾರ್ಯನಿರ್ವಾ ಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆಎಲ್‍ಆರ್ ಅಧ್ಯಕ್ಷ ಅಪ್ಪಣ್ಣ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಮುಖಂಡರಾದ ಲ.ಜಗದೀಶ್, ಪ್ರಭಾಕರ್ ಸಿಂಧ್ಯೆ ಇದ್ದರು.

Translate »