ಉಕ್ರೇನ್‍ನ ಕನ್ನಡಿಗ ವಿದ್ಯಾರ್ಥಿಗಳ   ಸುಲಭ ಮಾಹಿತಿಗಾಗಿ ವಾಟ್ಸಾಪ್ ಗ್ರೂಪ್
ಮೈಸೂರು

ಉಕ್ರೇನ್‍ನ ಕನ್ನಡಿಗ ವಿದ್ಯಾರ್ಥಿಗಳ ಸುಲಭ ಮಾಹಿತಿಗಾಗಿ ವಾಟ್ಸಾಪ್ ಗ್ರೂಪ್

March 3, 2022

ಮೈಸೂರು,ಮಾ.2(ಎಂಟಿವೈ)-ಉಕ್ರೇನ್ ನಲ್ಲಿ ಭಾರತೀಯ ರಕ್ಷಣೆ ಗಾಗಿ ಕೇಂದ್ರ ಸರ್ಕಾರ ಶಕ್ತಿ ಮೀರಿ ಶ್ರಮಿಸು ತ್ತಿದ್ದು, ಕನ್ನಡಿಗ ವಿದ್ಯಾ ರ್ಥಿಗಳ ವಾಟ್ಸಾಪ್ ಗ್ರೂಪ್ ಮಾಡಿ, ಅಗತ್ಯ ಸಲಹೆಯೊಂದಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಉಕ್ರೇನ್‍ನಲ್ಲಿ 10 ಸಾವಿರಕ್ಕಿಂತ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆಂಬ ಶಂಕೆಯಿದೆ. ಅಲ್ಲಿರುವ ಭಾರತೀಯರನ್ನು ಸುರಕ್ಷಿತ ವಾಗಿ ಕರೆತರಲು ಭಾರತ ಪಣ ತೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ಭಾರತೀಯರನ್ನು ಉಕ್ರೇನ್‍ನಿಂದ ಕರೆತರಲು ಏನೇನು ಮಾಡಬಹುದೋ, ಅದೆಲ್ಲವನ್ನೂ ಮಾಡುತ್ತಿದ್ದಾರೆ. ವಿದೇಶಾಂಗ ಸಚಿವರು, ರಾಯಬಾರಿಗಳು ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಹಿತಕಾಯಲು ಮುಂದಾಗಿದ್ದಾರೆ. ಯಾವುದೇ ಕಾರ ಣಕ್ಕೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತಾಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಾಟ್ಸಾಪ್ ಗ್ರೂಪ್: ಉಕ್ರೇನ್‍ನಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಕನ್ನಡಿಗ ವಿದ್ಯಾರ್ಥಿ ಗಳ ಪಟ್ಟಿ ಮಾಡಲಾಗುತ್ತಿದೆ. ಅಲ್ಲದೆ, ಈಗಾಗಲೇ ಸಂಪರ್ಕಕ್ಕೆ ಸಿಕ್ಕಿರುವ ಕನ್ನಡಿಗ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚಿಸ ಲಾಗಿದ್ದು, ಆ ಮೂಲಕ ಕೆಲವು ಸಂದೇಶ, ಸಲಹೆ ರವಾನಿಸಲಾಗುತ್ತಿದೆ ಎಂದರು.

ಆ ವಾಟ್ಸಾಪ್ ಗ್ರೂಪ್‍ನಲ್ಲಿ ನಾನು ಹಾಗೂ ಸಂಸದ ತೇಜಸ್ವಿ ಸೂರ್ಯ ಉಕ್ರೇನ್‍ನಲ್ಲಿ ರುವ ಕನ್ನಡಿಗರು ಯಾವ ಯಾವ ನಗರ ದಲ್ಲಿದ್ದಾರೆ ಎಂಬುದರ ಮಾಹಿತಿ ಪಡೆದು ಕೊಳ್ಳುತ್ತಿದ್ದೇವೆ. ಅವರು ಸುರಕ್ಷಿತವಾಗಿ ಮರಳಲು ಇರುವ ಮಾರ್ಗ, ವಾಹನ ಅಥವಾ ರೈಲು ಸೌಲಭ್ಯದ ಮಾಹಿತಿ ಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಉಕ್ರೇನ್ ಪಕ್ಕದÀ ನಾಲ್ಕು ದೇಶಗಳಲ್ಲಿ ರುವ ಭಾರತೀಯ ರಾಯಬಾರಿ ಕಚೇ ರಿಯ ನೊಡಲ್ ಅಧಿಕಾರಿಗಳ ನಂಬರ್ ಅನ್ನು ವಿದ್ಯಾರ್ಥಿಗಳಿಗೆ ಕೊಟ್ಟಿದ್ದೇವೆ. ಬಂಕರ್, ಅಪಾರ್ಟ್‍ಮೆಂಟ್‍ಗಳಲ್ಲಿ ಎಷ್ಟು ಮಂದಿ ಇದ್ದಾರೆಂದು ಚೆಕ್ ಮಾಡಲಾಗುತ್ತಿದೆ. ಇದಕ್ಕೆ ಕಾಲಾವಕಾಶ ಬೇಕಾಗಿದೆ. ಎಲ್ಲರನ್ನು ಸುರಕ್ಷಿ ತವಾಗಿ ಕರೆತರಲು ಪ್ರಯತ್ನ ಸಾಗಿದೆ. ಉಕ್ರೇನ್‍ನಲ್ಲಿ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಬೇರೆ ದೇಶಗಳು ನಮ್ಮಂತೆ ಅವರ ಪ್ರಜೆ, ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾ ಗಿಲ್ಲ. ನಾವು ಮಾತ್ರ ಆ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ 9 ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಮೊದಲು ವಿದ್ಯಾರ್ಥಿಗಳ ಸಂಪರ್ಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ವಾಟ್ಸಾಪ್ ಗ್ರೂಪ್ ಮಾಡಿ ವಿದ್ಯಾರ್ಥಿ ಗಳಿಗೆ ಅಗತ್ಯ ಮಾರ್ಗದರ್ಶನ ಮಾಡಲಾಗುತ್ತಿದೆ. ಸುರಕ್ಷಿತ ತಾಣಗಳಿಗೆ ಹೋಗಲು, ಅಲ್ಲದೆ ಭಾರತಕ್ಕೆ ಯಾವ ದೇಶದಿಂದ ಮರಳ ಬಹುದು ಎಂದು ವಿದ್ಯಾರ್ಥಿಗಳಿಗೆ ರಿಯಲ್ ಟೈಮ್ ಡೇಟಾ ನೀಡಲಾಗುತ್ತಿದೆ. ಉಕ್ರೇನ್ ವಿಚಾರದಲ್ಲಿ ಭಾರತ ತೆಗೆದುಕೊಂಡ ತಟಸ್ಥ ನಿಲುವಿನಿಂದಲೂ ವಿದ್ಯಾರ್ಥಿಗಳಿಗೆ ಆತಂಕ ವಿತ್ತು. ಆದರೆ, ಹಲವು ಸವಾಲುಗಳ ನಡು ವೆಯೂ ನಾವು ನಮ್ಮ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಉಕ್ರೇನ್‍ನಲ್ಲಿ ಕನ್ನಡಿಗ ನವೀನ್ ಮೃತ ಪಟ್ಟಿರುವುದು ನೋವಿನ ಸಂಗತಿ. ಈ ಹಿಂದೆ ಕತಾರ್ ಹಾಗೂ ಆಫ್ಘಾನಿಸ್ಥಾನದಿಂದ ಭಾರ ತೀಯರನ್ನು ಸುರಕ್ಷಿತವಾಗಿ ಏರ್‍ಲಿಫ್ಟ್ ಮಾಡ ಲಾಗಿತ್ತು. ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದರೆ ಉಕ್ರೇನ್‍ನಲ್ಲಿ ನವೀನ್ ಸಾವಿಗೀಡಾಗಿರುವುದು ದುಖಃ ಕರ ಸಂಗತಿ ಎಂದು ವಿಷಾದಿಸಿದರು

Translate »