ಶಿಷ್ಯ ದೀಪಕ್ ವಿಲನ್ ಆಗಿ ರೀಎಂಟ್ರಿ
ಸಿನಿಮಾ

ಶಿಷ್ಯ ದೀಪಕ್ ವಿಲನ್ ಆಗಿ ರೀಎಂಟ್ರಿ

March 13, 2020

ಶಿಷ್ಯ ದೀಪಕ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಭೆಯಿಂದಲೇ ಗುರುತಿಸಿಕೊಂಡವರು. ಹದಿನೈದು ವರ್ಷಗಳ ಹಿಂದೆ ಶಿಷ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದೀಪಕ್ ತನ್ನ ಮೊದಲ ಚಿತ್ರದಲ್ಲೇ ಒಬ್ಬ ಪ್ರತಿಭಾವಂತ ಕಲಾವಿದ ಎಂದು ಉದ್ಯಮ ಹಾಗೂ ಪ್ರೇಕ್ಷಕರಿಂದ ಗುರುತಿಸಿಕೊಂಡರು. ಜ್ಯೂನಿಯರ್ ಶಂಕರ್‍ನಾಗ್ ಅಂತಲೇ ಹೆಸರಾದ ದೀಪಕ್, ನಂತರದಲ್ಲಿ ಚೆನ್ನ, ಬಾ ಬೇಗ ಚಂದಮಾಮ, 18ನೇ ಕ್ರಾಸ್, ಮಾಗಡಿ, ತ್ಯಾಗು, ದೀನ ಹೀಗೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದರು. ಇದಲ್ಲದೆ ಶಿವಣ್ಣ ಜೊತೆ ಬೆಳ್ಳಿ ಎಂಬ ಚಿತ್ರದಲ್ಲೂ ಸಹ ನಟಿಸಿದರು. ಸುಮಾರು 15 ವರ್ಷ ಕನ್ನಡ ಚಿತ್ರರಂಗದಲ್ಲಿ ನಟಿಸಿದ ದೀಪಕ್ ಹಲವಾರು ಏಳು-ಬೀಳುಗಳನ್ನು ಸಂಕಷ್ಟಗಳನ್ನು ಸಹ ಅನುಭವಿಸಿ ದ್ದಾರೆ. ಈಗ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯೂ ಚಿತ್ರದಲ್ಲಿ ಒಬ್ಬ ಖಡಕ್ ಪೆÇಲೀಸ್ ಆಗಿ ಕಾಣಿಸಿಕೊಳ್ಳುತ್ತಿರುವ ದೀಪಕ್, ಈಗ ಖದರ್ ಕುಮಾರ್ ನಿರ್ದೆಶನದ ವೀರಂ ಚಿತ್ರದಲ್ಲಿ ಮುಖ್ಯ ಖಳನಾಯಕ ನಾಗಿ ಬಣ್ಣ ಹಚ್ಚಲಿದ್ದಾರೆ. ಇಲ್ಲಿ ಪ್ರಜ್ವಲ್ ದೇವರಾಜ್ ನಾಯಕ. ಹೀರೋಗೆ ಸರಿಸಮನಾದ ಪಾತ್ರ ದೀಪಕ್‍ಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿಲನ್ ಪಾತ್ರಗಳಲ್ಲೇ ಮುಂದುವರೆಯಲು ನಟ ದೀಪಕ್ ನಿರ್ಧರಿಸಿದ್ದಾರೆ.

Translate »