ಅಕ್ರಮ ಗೋ ಸಾಗಣೆ; ಇಬ್ಬರ ಸೆರೆ, 37 ಹಸು-ಕರುಗಳ ರಕ್ಷಣೆ
ಮೈಸೂರು

ಅಕ್ರಮ ಗೋ ಸಾಗಣೆ; ಇಬ್ಬರ ಸೆರೆ, 37 ಹಸು-ಕರುಗಳ ರಕ್ಷಣೆ

March 13, 2020

ಮೈಸೂರು, ಮಾ.12(ಎಂಕೆ)- ಗೋವುಗಳ ಅಕ್ರಮ ಸಾಗಣೆ ತಂಡದ ಮೇಲೆ ಗುರುವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, 37 ಹಸು-ಕರುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೈಸೂ ರಿನ ಲಷ್ಕರ್ ಮೊಹಲ್ಲಾದ ಅಫ್ಸಾನ್ ಖಾನ್ (23), ರುಮಾನ್ ಪಾಷ (22) ಬಂಧಿತರು. ಕೆ.ಆರ್.ನಗರ ತಾಲೂಕಿನ ದೊಡ್ಡಳ್ಳಿ ಸಂತೆ ಯಿಂದ ಗೋವುಗಳನ್ನು ಖರೀದಿಸಿ ಮೈಸೂರಿನ ಕಸಾಯಿಖಾನೆಗೆ ಬೊಲೆರೋ ಪಿಕ್‍ಅಪ್ (ಕೆಎ: 51-9970) ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಕೆ.ಆರ್.ಮಿಲ್ ಕಾಲೋನಿ ಬಳಿ ಸಿಕ್ಕಿಬಿದ್ದಿದ್ದಾರೆ. ರಕ್ಷಿಸಿದ ಗೋವುಗಳನ್ನು ಮೈಸೂರಿನ ಚಾಮುಂಡಿಬೆಟ್ಟದ ಪಾದದ ಬಳಿಯಿರುವ ಪಿಂಜರಾಪೋಲ್‍ಗೆ ಹಸ್ತ್ತಾಂತರಿಸಲಾಗಿದೆ. ಬಂಧಿತರಿಂದ 4000 ರೂ. ನಗದು, 3 ಮೊಬೈಲ್‍ಫೋನ್‍ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »