ಲಾಕ್‍ಡೌನ್ ನಿರ್ಬಂಧ ಧಿಕ್ಕರಿಸಿ  ಕೆಆರ್‍ಎಸ್ ಹಿನ್ನೀರಲ್ಲಿ ಮೋಜು-ಮಸ್ತಿ ಮೈಸೂರಿನ ನಾಲ್ವರು ಯುವತಿಯರು  ಸೇರಿ 8 ಮಂದಿ ವಿರುದ್ಧ ಪ್ರಕರಣ
ಮೈಸೂರು

ಲಾಕ್‍ಡೌನ್ ನಿರ್ಬಂಧ ಧಿಕ್ಕರಿಸಿ ಕೆಆರ್‍ಎಸ್ ಹಿನ್ನೀರಲ್ಲಿ ಮೋಜು-ಮಸ್ತಿ ಮೈಸೂರಿನ ನಾಲ್ವರು ಯುವತಿಯರು ಸೇರಿ 8 ಮಂದಿ ವಿರುದ್ಧ ಪ್ರಕರಣ

June 2, 2021

ಮೈಸೂರು, ಜೂ. 1(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿ ದ್ದರೂ, ಮಾರ್ಗಸೂಚಿ ಉಲ್ಲಂಘಿಸಿ ಕೆಆರ್‍ಎಸ್ ಹಿನ್ನೀರಲ್ಲಿ ಮೋಜು-ಮಸ್ತಿ ಮಾಡು ತ್ತಿದ್ದ ನಾಲ್ವರು ಯುವತಿ ಯರೂ ಸೇರಿ ಮೈಸೂ ರಿನ 8 ಮಂದಿ ವಿರುದ್ಧ ಕೆಆರ್‍ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಒಂಟಿ ಕೊಪ್ಪಲು ನಿವಾಸಿ ರವಿ ಅವರ ಮಗ ಆದಿತ್ಯ, ವಿಜಯನಗರ 2ನೇ ಹಂತದ ಪವನ್‍ಕುಮಾರ್ ಪುತ್ರ ಶೋಬಿತ್ ಚಂದನ್, ಜಯಲಕ್ಷ್ಮೀಪುರಂ ನಿವಾಸಿಗಳಾದ ಶಿವಕುಮಾರ್ ಪುತ್ರಿ ಸನಿಹಾ, ತಿಮ್ಮಯ್ಯರ ಪುತ್ರಿ ಗಂಗಾ, ಅರುಣ್‍ಕುಮಾರ್ ಪುತ್ರಿ ಅಕ್ಷತಾ, ಶಿವಕುಮಾರ್ ಪುತ್ರಿ ಸಾನಿಧ್ಯ, ಕೆ.ಆರ್.ನಗರದ ಲೇಟ್ ವಿ.ಎಸ್.ಇಂದ್ರೇಶ್ ಅವರ ಪುತ್ರರಾದ ಗಗನ್ ಇಂದ್ರೇಶ್ ಹಾಗೂ ಭೂಮಿಕ ಇಂದ್ರೇಶ್ ಲಾಕ್‍ಡೌನ್ ನಿರ್ಬಂಧ ಆದೇಶ ಉಲ್ಲಂಘಿಸಿದವರು.

ಕೆಆರ್‍ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದ ಬಳಿ ಹಿನ್ನೀರಿನಲ್ಲಿ ಇಂದು ಬೆಳಗ್ಗೆ 8 ಮಂದಿ ಅತಿಕ್ರಮ ಪ್ರವೇಶ ಮಾಡಿ ಮದ್ಯಪಾನ ಮಾಡುತ್ತಿದ್ದು, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಕಾನೂನು ಉಲ್ಲಂಘಿಸಿದ್ದರಿಂದ ಕೆಎಸ್‍ಐಎಸ್‍ಎಫ್ ಇನ್ಸ್‍ಪೆಕ್ಟರ್ ಎಸ್.ಪಿ.ಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿಚಾ ರಣೆ ನಡೆಸಿದರು. ವಿಪತ್ತು ನಿರ್ವಹಣಾ ಕಾಯ್ದೆ 2005, ಅಬಕಾರಿ ಕಾಯ್ದೆ 1965 ಹಾಗೂ ಐಪಿಸಿ ಕಲಂ 269 ರೀತ್ಯಾ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿ ರುವ ಕೆಆರ್‍ಎಸ್ ಠಾಣೆ ಪೊಲೀಸರು, ಮೋಜು-ಮಸ್ತಿಗೆ ಬಳಸಿದ್ದ 1 ಕಿಯಾ ಮತ್ತು 1 ವೋಲ್ಸ್ ವ್ಯಾಗನ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಯುವತಿಯರೊಂದಿಗೆ ತೆರಳಿ ಮುಂಜಾನೆ 6 ಗಂಟೆಯಲ್ಲೇ ಮದ್ಯಪಾನ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಯುವಕರು, ಪ್ರತಿಷ್ಠಿತ ಕುಟುಂಬದವರಾಗಿದ್ದು, ಮೈಸೂರಿನ ಗಣ್ಯ ವ್ಯಕ್ತಿಗಳ ಮೂಲಕ ಪ್ರಕರಣ ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದರು ಎನ್ನಲಾಗಿದೆ.

Translate »