ಸಾವಿಗೀಡಾದ ಸೋಂಕಿತರ ಅಂತ್ಯಕ್ರಿಯೆಗೆ ನಿಗದಿಪಡಿಸಿರುವ  ರುದ್ರಭೂಮಿಗಳಿಗೆ ಶಾಸಕ ರಾಮದಾಸ್ ತಂಡ ಭೇಟಿ
ಮೈಸೂರು

ಸಾವಿಗೀಡಾದ ಸೋಂಕಿತರ ಅಂತ್ಯಕ್ರಿಯೆಗೆ ನಿಗದಿಪಡಿಸಿರುವ ರುದ್ರಭೂಮಿಗಳಿಗೆ ಶಾಸಕ ರಾಮದಾಸ್ ತಂಡ ಭೇಟಿ

June 2, 2021

ಮೈಸೂರು,ಜೂ.1(ಎಂಟಿವೈ)-ಕೊರೊನಾ ಸೋಂಕಿಗೆ ತುತ್ತಾದವರ ಅಂತ್ಯಕ್ರಿಯೆ ನಡೆಸುತ್ತಿರುವ ರುದ್ರಭೂಮಿ ಗಳಿಗೆ ಮಂಗಳವಾರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಬೇಟಿ ನೀಡಿ ಪರಿಶೀಲಿಸಿದರಲ್ಲದೆ, ವಿವಿಧ ಧರ್ಮಕ್ಕೆ ಅನುಗುಣವಾಗಿ ಗೌರವಯುತವಾಗಿ ಸೋಂಕಿತರ ಅಂತ್ಯಕ್ರಿಯೆಯನ್ನು ನಡೆಸುತ್ತಿರುವ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿದರು.

ಮೈಸೂರು ನಗರದಲ್ಲಿ ಕೊರೊನಾ ಸೋಂಕಿಗೆ ಬಲಿ ಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ಮಹಾನಗರ ಪಾಲಿಕೆ ವಿವಿಧ ಧರ್ಮಕ್ಕೆ ಸೇರಿದವರ ಅಂತ್ಯಕ್ರಿಯೆಗೆ ಹೆಚ್ಚುವರಿ ರುದ್ರಭೂಮಿ ಗಳನ್ನು ಗುರುತಿಸಿತ್ತು. ಸೋಂಕಿಗೆ ಬಲಿಯಾದವರ ಅಂತ್ಯ ಕ್ರಿಯೆ ತಡವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಇಂದು ಬೆಳಿಗ್ಗೆ ಶಾಸಕರ ನೇತೃತ್ವದ ತಂಡ ಇಂತಹ ರುದ್ರಭೂಮಿಗಳಿಗೆ ತೆರಳಿ ಸಿಬ್ಬಂದಿಗಳಿಗೆ ಆತ್ಮ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಿತು.

ಮೈಸೂರಿನ ವಿಜಯನಗರದ 4ನೇ ಹಂತ, ಜಯ ನಗರ, ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಮುಕ್ತಿಧಾಮಗಳು, ಗೌರಿಶಂಕರನಗ ರದ ಖಬರ್‍ಸ್ತಾನ್‍ಗಳಲ್ಲಿ ಸೋಂಕಿತರ ಶವಗಳ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ಎಲ್ಲರೂ ಪಿಪಿಇ ಕಿಟ್ ಧರಿಸಿ ಸೋಂಕಿತ ವ್ಯಕ್ತಿಯ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

ಇದೇ ವೇಳೆ ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿ ಸಿದ ಜಿಲ್ಲಾ ಮಂತ್ರಿಗಳು ನಿಗಮ ಮಂಡಳಿಗಳ ಅಧ್ಯಕ್ಷ ರಿಗೆ ವಿವಿಧ ಜವಾಬ್ದಾರಿಯನ್ನು ಹಂಚಿಕೆ ಮಾಡಿ ದ್ದರು. ತಮಗೆ ನೀಡಿದ್ದ ಜವಾಬ್ದಾರಿಯನ್ನು ಎಲ್ಲರೂ ಯಶಸ್ವಿಯಾಗಿ ನಿಭಾಯಿಸುತ್ತಿರುವುದರಿಂದ ಮೈಸೂ ರಲ್ಲಿ ಯಾವುದೇ ಲೋಪವಾಗಿಲ್ಲ. ಅದರಲ್ಲೂ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಗೆ ವಿಶೇಷ ಕಾಳಜಿ ವಹಿಸ ಲಾಗಿದೆ. ಜೆಎಲ್‍ಆರ್ ಅಧ್ಯಕ್ಷ ಎಂ.ಅಪ್ಪಣ್ಣ ಸೋಂಕಿ ತರ ಅಂತ್ಯಕ್ರಿಯೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಜೀವನದ ಎಲ್ಲಾ ಮಜಲನ್ನು ಅನುಭವಿಸಿದ ಬಳಿಕ ಅಂತಿಮ ಯಾತ್ರೆ ಶಿವನ ಕಾರ್ಯ ಮಾಡಿದಂತೆ ಪವಿತ್ರವಾದುದು. ಆ ಕೆಲಸವನ್ನು ಆಯಾ ಧರ್ಮಕ್ಕೆ ಅನುಗುಣವಾಗಿ ಸಂಪ್ರದಾಯದಂತೆ ಕಿಂಚಿತ್ತೂ ಲೋಪವಾಗದಂತೆ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಸೋಂಕಿಗೆ ಬಲಿಯಾದವರ ಮೃತದೇಹವನ್ನು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಮೂರು ಧರ್ಮಗಳ ರುದ್ರಭೂಮಿ ಸಿಬ್ಬಂದಿಯೂ ಮೃತರ ಕುಟುಂಬದ ನೋವಿನಲ್ಲಿ ಭಾಗಿಯಾಗುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ತಮ್ಮದೇ ಕುಟುಂಬದ ಸದಸ್ಯರಂತೆ ಭಾವಿಸಿ ಅಂತ್ಯಕ್ರಿಯೆ ನಡೆಸು ತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತ್ಯಕ್ರಿಯೆ ಸಮಿತಿ ಉಸ್ತುವಾರಿ, ಜೆಎಲ್‍ಆರ್ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ಕೊರೊನಾ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆ ವಿಳಂಬವಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಂತ್ಯಕ್ರಿಯೆ ಸಮಿತಿಗೆ ಉಸ್ತುವಾರಿ ಯನ್ನಾಗಿ ಜಿಲ್ಲಾ ಮಂತ್ರಿಗಳು ನನ್ನನ್ನು ನಿಯೋಜಿ ಸಿದರು. ಆರಂಭದಲ್ಲಿ ನನಗೂ ಭಯ ಕಾಡುತ್ತಿತ್ತು. ಅಂತ್ಯಕ್ರಿಯೆ ಮಾಡುವುದು ಪುಣ್ಯದ ಕೆಲಸವೆಂದು ಭಾವಿಸಿ, ಸ್ವಯಂಸೇವಕನಾಗಿ ನಿಷ್ಠೆಯಿಂದ ಕೆಲಸ ಮಾಡು ತ್ತಿದ್ದೇನೆ. ಎಲ್ಲಾ ರುದ್ರಭೂಮಿಗಳ ಸಿಬ್ಬಂದಿ ಅತ್ಯುತ್ತಮ ವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಜೀವ ವಿಮೆ ಮಾಡಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸುತ್ತೂರು ಕ್ಷೇತ್ರದ ಸ್ವಾಮೀಜಿ ಹಾಗೂ ಜೈನ ಸಮುದಾಯದವರು ಈಗಾಗಲೇ ಸೌದೆ ನೀಡಿದ್ದಾರೆ. ದಾನಿಗಳು ಸಹ ಕೊರೊನಾ ಸೋಂಕಿಗೆ ಮೃತಪಟ್ಟವರ ಅಂತ್ಯಕ್ರಿಯೆಗೆ ಸೌದೆ ನೀಡುವಂತೆ ಮನವಿ ಮಾಡಿದರು.

ಬೆಡ್ ಮ್ಯಾನೇಜ್‍ಮೆಂಟ್ ಉಸ್ತುವಾರಿ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಮೂರು ಧರ್ಮಕ್ಕೆ ಸೇರಿದವರು ಸೋಂಕಿನಿಂದ ಮೃತಪಟ್ಟರೆ ಅವರ ಧರ್ಮಕ್ಕೆ ಅನುಗುಣವಾಗಿ, ಮೃತರ ಕುಟುಂಬ ಸದಸ್ಯರ ಭಾವನೆಗೆ ಗೌರವ ಕೊಟ್ಟು ಅಂತ್ಯಕ್ರಿಯೆ ನಡೆಸ ಲಾಗುತ್ತಿದೆ. ಅಂತ್ಯಕ್ರಿಯೆ ಸಮಿತಿ ಉಸ್ತುವಾರಿ ವಹಿಸಿ ಕೊಂಡಿರುವ ಅಪ್ಪಣ್ಣ ಅವರ ಜನ್ಮದಿನವಾದ ಇಂದು ಸೋಂಕಿಗೆ ಬಲಿಯಾದ ಹಿರಿಯ ನಾಗರಿಕರೊಬ್ಬರ ಮೃತದೇಹಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಈ ಹಿಂದೆ ಒಂದೇ ದಿನ 48 ಮೃತದೇಹವನ್ನು ಅಂತ್ಯಕ್ರಿಯೆ ಮಾಡಿರುವ ದಾಖಲೆಯಿದೆ. ಇಲ್ಲಿನ ಸಿಬ್ಬಂದಿ ಬೇಸರ ವ್ಯಕ್ತಪಡಿಸದೆ ಮುಂಜಾನೆ 2 ಗಂಟೆವರೆಗೂ ಅಂತ್ಯಕ್ರಿಯೆ ಮಾಡು ವುದರಲ್ಲಿ ತಲ್ಲೀನರಾಗಿರುವುದು ಸೇವಾ ಬದ್ಧತೆಯನ್ನು ತೋರಿಸುತ್ತದೆ. ಪ್ರತಿದಿನ 25-35 ಮೃತದೇಹ ಅಂತ್ಯಕ್ರಿಯೆ ಮಾಡುವ ಶ್ರದ್ಧೆ ಇಲ್ಲಿನ ಸಿಬ್ಬಂದಿಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ನೋಡಲ್ ಅಧಿಕಾರಿ ಅನಿಲ್ ಕ್ರಿಸ್ಟಿ, ಶವ ಸಾಗಿಸುವ ಅಯೂಬ್ ಹಾಗೂ ಇನ್ನಿತರೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜೋಡಿ ತೆಂಗಿನ ಮರ ರಸ್ತೆ ಶಾಂತಿಧಾಮದಲ್ಲಿ ಮೃತರ ಅಂತ್ಯಕ್ರಿಯೆಗೆ ಬರುವ ಕುಟುಂಬ ಸದಸ್ಯರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಯಿತು.
ಆಂಬುಲೆನ್ಸ್ ಉಪಸಮಿತಿ ಉಸ್ತುವಾರಿಯೂ ಆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

Translate »