ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಜೆಟ್‍ನಲ್ಲಿ ಅನುದಾನ ಕೋರಿ ಸಿಎಂ ಬಳಿ ನಿಯೋಗ
ಮೈಸೂರು

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಜೆಟ್‍ನಲ್ಲಿ ಅನುದಾನ ಕೋರಿ ಸಿಎಂ ಬಳಿ ನಿಯೋಗ

November 5, 2022

ಮೈಸೂರು, ನ. 4(ಆರ್‍ಕೆ)- ಶಿಥಿಲಾವಸ್ಥೆಯಲ್ಲಿರುವ ಮೈಸೂರಿನ ಪಾರಂಪರಿಕ ಕಟ್ಟಡಗಳ ದುರಸ್ತಿ ಮತ್ತು ಸಂರಕ್ಷಣೆಗಾಗಿ ರಾಜ್ಯ ಬಜೆಟ್‍ನಲ್ಲಿ ಅನು ದಾನ ಮೀಸಲಿಡುವಂತೆ ಕೋರಲು ಸದ್ಯದಲ್ಲೇ ಪಾಲಿಕೆ ಸದಸ್ಯರು, ತಜ್ಞರು ಹಾಗೂ ಅಧಿಕಾರಿಗಳ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗು ವುದು ಎಂದು ಮೇಯರ್ ಶಿವ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರು ಮಹಾನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯ ರೊಂದಿಗೆ ಮೈಸೂರಿನ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳ ರಿಪೇರಿ ಮತ್ತು ಸಂರಕ್ಷಣೆ ಕುರಿತಂತೆ ಸಭೆ ನಡೆಸಿದ ಅವರು, ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಬಿಲ್ಡಿಂಗ್, ವಾಣಿವಿಲಾಸ ಮಾರು ಕಟ್ಟೆ, ಅಗ್ನಿಶಾಮಕ ಠಾಣೆ, ಮಹಾರಾಣಿ ವಿಜ್ಞಾನ ಕಾಲೇಜು, ಪಾಲಿಕೆ ಪ್ರಧಾನ ಕಚೇರಿ, ವಿಶ್ವೇಶ್ವರಯ್ಯ ಬಿಲ್ಡಿಂಗ್, ದೊಡ್ಡ ಗಡಿಯಾರ, ಪುರಭವನ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಅವುಗಳ ದುರಸ್ತಿ ಮಾಡಿ ಸುಸ್ಥಿತಿಗೆ ತಂದು ಸಂರಕ್ಷಿಸಲು ತ್ವರಿತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಪಾರಂಪರಿಕ ಕಟ್ಟಡಗಳ ನಿರ್ವಹಣೆ, ರಿಪೇರಿಗೆ ಹಣಕಾಸಿನ ಕೊರತೆ ಇರು ವುದು ದೊಡ್ಡ ಸವಾಲಾಗಿರುವುದರಿಂದ ರಾಜ್ಯ ಬಜೆಟ್‍ನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅನುದಾನ ಮೀಸಲಿರಿಸುವಂತೆ ನಿಯೋಗ ಕರೆ ದೊಯ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿ ಸುತ್ತೇವೆ ಎಂದು ತಿಳಿಸಿದರು.

ಪಾಲಿಕೆ ಪ್ರಧಾನ ಕಚೇರಿ, ದೊಡ್ಡಗಡಿ ಯಾರ, ವಿವಿ ಮಾರ್ಕೆಟ್, ವಿಶ್ವೇಶ್ವರಯ್ಯ ಬಿಲ್ಡಿಂಗ್, ಟೌನ್‍ಹಾಲ್ ಅನ್ನು ಆದ್ಯತೆ ಮೇಲೆ ತುರ್ತಾಗಿ ರಿಪೇರಿ ಮಾಡಬೇಕಾಗಿ ರುವುದರಿಂದ ಸರ್ಕಾರದ ಅನುದಾನಕ್ಕೆ ಒತ್ತಾಯಿಸಲಾಗುವುದು. ಒಂದು ವೇಳೆ ತಡವಾದಲ್ಲಿ ಪಾಲಿಕೆ ಅನುದಾನದಲ್ಲೇ ಶೀಘ್ರ ಈ ಪಾರಂಪರಿಕ ಕಟ್ಟಡಗಳನ್ನು ದುರಸ್ತಿಗೊಳಿಸಿ ಸಂರಕ್ಷಿಸುತ್ತೇವೆ ಎಂದು ಮೇಯರ್ ಇದೇ ವೇಳೆ ನುಡಿದರು.

ಪಾರಂಪರಿಕ ತಜ್ಞ ಪ್ರೊ. ಎನ್.ಎಸ್. ರಂಗರಾಜು ನೀಡಿದ ಸಲಹೆ, ಮಾರ್ಗ ದರ್ಶನದಂತೆ ಪಾರಂಪರಿಕ ಕಟ್ಟಡಗಳ ದುರಸ್ತಿ ಮತ್ತು ಸಂರಕ್ಷಣಾ ವಿಧಾನದ ಬಗ್ಗೆ ಶೀಘ್ರ ಪಾಲಿಕೆ ಇಂಜಿನಿಯರ್‍ಗಳಿಗೆ ತರಬೇತಿ ಇಂಜಿನಿಯರ್‍ಗಳಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲು ಶಿವಕುಮಾರ್ ಪಾಲಿಕೆ ಸೂಪರಿಂಟೆಂಡೆಂಟ್ ಇಂಜಿನಿ ಯರ್ ಮಹೇಶ್ ಅವರಿಗೆ ಸೂಚಿಸಿದರು.

ಕೈಗಾರಿಕೋದ್ಯಮಿಗಳಿಂದ ಸಿಎಸ್‍ಆರ್ ಅಡಿ ಅನುದಾನ, ಪ್ರಾಯೋಜಕತ್ವ ಪಡೆಯುವುದು, ಸರ್ಕಾರೇತರ ಸಂಘ-ಸಂಸ್ಥೆಗಳ ನೆರವು ಪಡೆಯುವುದು, ನಮ್ಮ ಮೈಸೂರು ಫೌಂಡೇಷನ್ ಸಂಸ್ಥೆಗೆ ಪ್ರಮುಖ ರಸ್ತೆ ನಿರ್ವಹಣೆ ಜವಾಬ್ದಾರಿ, ಪಾರಂಪರಿಕ ಕಟ್ಟಡಗಳ ನಿರ್ವಹಣೆಗಾಗಿ ಪಾಲಿಕೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸುವುದೂ ಸೇರಿದಂತೆ ಶೀಘ್ರ ಹಲವು ಕ್ರಮಗಳನ್ನು ಕೈಗೊಳ್ಳು ವುದಾಗಿಯೂ ಮೇಯರ್ ಇದೇ ವೇಳೆ ಭರವಸೆ ನೀಡಿದರು.

ಉಪಮೇಯರ್ ಡಾ. ರೂಪಾ, ಪಾಲಿಕೆ ಅಡಿಷನಲ್ ಡಿಸಿ ಎಂ.ಜಿ. ರೂಪಾ, ಸೂಪರಿಂಟೆಂಡೆಂಟ್ ಇಂಜಿ ನಿಯರ್ ಮಹೇಶ್, ನಗರ ಯೋಜನಾ ಜಂಟಿ ನಿರ್ದೇಶಕ ವೇಣುಗೋಪಾಲ್, ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯ ಪ್ರೊ. ಎನ್.ಎಸ್. ರಂಗರಾಜು, ನಮ್ಮ ಮೈಸೂರು ಫೌಂಡೇಷನ್ ಸಂಚಾಲಕ ದಶರಥ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »