ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಾಹನ ಚಾಲಕರ ಪ್ರತಿಭಟನೆ

September 3, 2020

ಮೈಸೂರು, ಸೆ.2(ಪಿಎಂ)- ನೇರ ವೇತನ ಪಾವತಿಗೆ ಆಗ್ರಹಿಸಿ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾ ಯಿತಿಯ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಮೈಸೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಬುಧ ವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ, ಮೈಸೂರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಹೊರ ಗುತ್ತಿಗೆ ಆಧಾರದ ವಾಹನ ಚಾಲಕರಿದ್ದೇವೆ. ತ್ಯಾಜ್ಯದ ವಾಹನಗಳನ್ನು ಚಾಲನೆ ಮಾಡುವ ಮೂಲಕ ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿದ್ದೇವೆ. ಆದರೆ ಕನಿಷ್ಠ ವೇತನ ಇಲ್ಲದೆ ಬದುಕು ದೂಡುವುದು ಕಷ್ಟವಾಗಿದೆ. ಮತ್ತೊಂದೆಡೆ ಸಕಾಲಕ್ಕೆ ವೇತನ ನೀಡÀದ ಕೆಲ ಗುತ್ತಿಗೆದಾರರು ಮತ್ತಷ್ಟು ಸಂಕಷ್ಟ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಣ್ಣಪುಟ್ಟ ಸಮಸ್ಯೆಗಳಿಗೂ ಚಾಲಕ ರನ್ನೇ ಹೊಣೆ ಮಾಡಿ ಕೆಲಸದಿಂದಲೇ ವಜಾಗೊಳಿಸುವ ಯತ್ನ ನಡೆಯುತ್ತಿವೆ. ಯಾವುದೇ ಸೇವಾ ಭದ್ರತೆ ಇಲ್ಲವಾಗಿದ್ದು, ಇಎಸ್‍ಐ-ಪಿಎಫ್ ಸೌಲಭ್ಯವನ್ನೂ ಸಮ ರ್ಪಕವಾಗಿ ಕಲ್ಪಿಸುತ್ತಿಲ್ಲ. ತ್ಯಾಜ್ಯದ ವಾಹನ ಚಾಲನೆ ಮಾಡುವ ನಮ್ಮನ್ನೂ ಪೌರಕಾರ್ಮಿ ಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳ ಪಡಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾದಂತಹ ಈ ಆತಂಕದ ಸಮಯ ದಲ್ಲಿ ವೈಯಕ್ತಿಕ ಬದುಕನ್ನು ಲೆಕ್ಕಿಸದೇ ದುಡಿ ಯುತ್ತಿದ್ದು, ಸಕಾಲದಲ್ಲಿ ಕೆಲ ಗುತ್ತಿಗೆದಾರರು ವೇತನ ಪಾವತಿ ಮಾಡುತ್ತಿಲ್ಲ. ಇದರಿಂದ ಸಕಾಲಕ್ಕೆ ವೇತನ ಬಾರದ ಪರಿಣಾಮ ಸಾಲದ ಸುಳಿಗೆ ಸಿಲುಕುತ್ತಿದ್ದೇವೆ. ಮೊದಲ ಹಂತ ದಲ್ಲಿ ಸಕಾಲದಲ್ಲಿ ವೇತನ ಪಾವತಿ ಮಾಡಲು ಕ್ರಮ ವಹಿಸಬೇಕು. ಬಳಿಕ ಶೀಘ್ರದಲ್ಲಿ ನೇರ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ರಕ್ಷಣೆ ಪರಿಕರಗಳನ್ನು ಸಮರ್ಪಕವಾಗಿ ಒದಗಿಸ ಬೇಕು. ಜೊತೆಗೆ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಟರ್‍ಮೆನ್‍ಗಳನ್ನೂ ನೇರ ವೇತನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೌರ ಕಾರ್ಮಿಕರ ಮುಖಂಡರೂ ಆದ ಮಾಜಿ ಮೇಯರ್ ನಾರಾಯಣ್ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿ, ಪೌರ ಕಾರ್ಮಿಕರು, ತ್ಯಾಜ್ಯದ ವಾಹನ ಚಾಲ ಕರು ಹಾಗೂ ಒಳಚರಂಡಿ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಹೋರಾಟ ನಡೆಸ ಲಿದ್ದು, ಮುಂದಿನ ತಿಂಗಳು ಬೆಂಗಳೂ ರಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಈ ಬೇಡಿಕೆ ಈಡೇರಿಸುವ ಕುರಿತಂತೆ ನ್ಯಾಯಾ ಲಯದ ಮೂಲಕವೂ ಹೋರಾಟ ನಡೆ ಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ಮಾತನಾಡಿ, ನಮ್ಮ ಬೇಡಿಕೆ ಈಡೇ ರಿಸದೇ ಹೋದಲ್ಲಿ ಇದೇ ತಿಂಗಳು ನಡೆ ಯುವ ವಿಧಾನಸಭಾ ಅಧಿವೇಶನದ ವೇಳೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಮನವಿ ಸ್ವೀಕರಿ ಸಿದ ಎಡಿಸಿ ಮಂಜುನಾಥಸ್ವಾಮಿ ಮಾತನಾಡಿ, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು. ಅಲ್ಲದೆ, ಬೇಡಿಕೆಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದಲ್ಲಿ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು. ಅಗತ್ಯ ವಿದ್ದರೆ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ರಾಜ್ಯ ಪೌರಕಾರ್ಮಿಕ ಮಹಾಸಂಘದ ಉಪಾಧ್ಯಕ್ಷ ಆರ್.ಶಿವ, ನಂಜನಗೂಡು ಪುರಸಭೆ ಮಾಜಿ ಅಧ್ಯಕ್ಷ ಚೆಲುವರಾಜು ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ಹೊರಗುತ್ತಿಗೆ ತ್ಯಾಜ್ಯ ವಾಹನ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »