ರಸ್ತೆಗೆ ಹಂಪ್ಸ್ ಅಳವಡಿಸಲು ಆಗ್ರಹಿಸಿ ಹೆದ್ದಾರಿ ತಡೆ
ಹಾಸನ

ರಸ್ತೆಗೆ ಹಂಪ್ಸ್ ಅಳವಡಿಸಲು ಆಗ್ರಹಿಸಿ ಹೆದ್ದಾರಿ ತಡೆ

November 16, 2018

ಬೇಲೂರು: ಬೇಲೂರು ಪಟ್ಟಣದ 12 ಮತ್ತು 13ನೇ ವಾರ್ಡಿನ ಸಾರ್ವ ಜನಿಕರು ಹಾಗೂ ಇಲ್ಲಿನ ಪ್ರಗತಿಪರ ಸಂಘ ಟನೆಗಳ ಮುಖಂಡರುಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಜೆ.ಪಿ.ನಗರದ ಮಾರ್ಗ ವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ವಿಷಯ ತಿಳಿದ ಬೇಲೂರು ಪಟ್ಟಣದ 12 ಮತ್ತು 13ನೇ ವಾರ್ಡಿನ ಸಾರ್ವಜನಿಕರು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರ ನೇತೃ ತ್ವದಲ್ಲಿ ಪೆಟ್ರೋಲ್ ಬಂಕ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಕರವೇ ಅಧ್ಯಕ್ಷ ಚಂದ್ರ ಶೇಖರ್ ಮಾತನಾಡಿ, ಪಟ್ಟಣದ ಜೆಪಿ ನಗರದಲ್ಲಿ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಶಾಲಾ ಕಾಲೇಜುಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ತೆರಳಬೇಕಾಗುತ್ತದೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ವಾಹನ ಚಾಲಕರು ವೇಗವಾಗಿ ಚಲಿಸುತ್ತಿರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಒಂದು ವರ್ಷದಲ್ಲಿ ಮೂರ್ನಾಲ್ಕು ವಾಹನ ಅಪಘಾತಗಳು ನಡೆದಿದ್ದು ಎರಡರಿಂದ ಮೂರು ವ್ಯಕ್ತಿಗಳು ಮೃತಪಟ್ಟಿದ್ದು 5 ರಿಂದ 6 ವ್ಯಕ್ತಿಗಳು ಕೈ ಕಾಲು ಕಳೆದು ಕೊಂಡ ಸನ್ನಿವೇಶ ಜರುಗಿದ್ದರೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ಗಳು ರಸ್ತೆಗೆ ಹಂಪ್ಸ್ ಹಾಕದೆ ನಿರ್ಲಕ್ಷ್ಯ ತೋರು ತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ಇದೇ ಸಂದರ್ಭ ತಾಲೂಕು ಅಂಗ ವಿಕಲರ ಸಂಘದ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಕಾಲೇಜು ಬಾಲಕನೊಬ್ಬ ವಾಹನ ಅಪ ಘಾತದಲ್ಲಿ ಮೃತಪಟ್ಟಿದ್ದು, ಕಂಡು ಅರಿ ಯದಂತೆ ಇದೆ. ಪ್ರತಿ ವಾರಕ್ಕೆ ಒಮ್ಮೆ ಇಂತಹ ಘಟನೆ ಜರುಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇಲ್ಲಿನ ವಾಹನ ಚಾಲ ಕರ ಹಾಗೂ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ವಾಹನ ಚಾಲಕರಿಗೆ 30 ಕಿಲೋ ಮೀಟರ್ ವೇಗ ಮಿತಿ ನಿಗದಿ ಗೊಳಿಸಬೇಕು ಹಾಗೂ ಈ ಸ್ಥಳದಲ್ಲಿ ಅಪಘಾತ ವಲಯ ಎಂದು ನಾಮಫಲಕ ಹಾಕಬೇಕು ಎಂದರು.

ನಂತರ ಕರವೇ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಬೋಜೇಗೌಡ ಮಾತನಾಡಿ, ಈ ಸ್ಥಳದಲ್ಲಿ ನಾಲ್ಕೈದು ಕೂಡು ರಸ್ತೆಗಳು ಹೆದ್ದಾರಿ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ ವಾಹನ ಚಾಲಕರಿಗೆ ಹಾಗೂ ಸಾರ್ವಜನಿ ಕರಿಗೆ ಮಾಹಿತಿ ಕೊರತೆ ಎದ್ದುಕಾಣುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳನ್ನು ಕೇಳಿದರೆ ಇದು ನಮಗೆ ಸಂಬಂಧ ಪಡು ವುದಿಲ್ಲ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಪಡುತ್ತದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಪ್ರತಿನಿತ್ಯ ದೇವಾ ಲಯವನ್ನು ವೀಕ್ಷಿಸಲು ಬೇಲೂರಿಗೆ ಸಹ ಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ರಸ್ತೆ ಯಲ್ಲಿ ಚಲಿಸುತ್ತಾರೆ. ಹಾಗಾಗಿ ಈ ಸ್ಥಳ ದಲ್ಲಿ ಶೀಘ್ರವಾಗಿ ರಸ್ತೆ ಉಬ್ಬುಗಳನ್ನು ಹಾಕಬೇಕು ಹಾಗೂ ಒಂದು ಮಾರ್ಗ ದರ್ಶಿಯ ನಾಮಫಲಕ ಕೊರತೆ ಎದ್ದು ಕಾಣುತ್ತಿದ್ದು, ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಲು ಬರುವಂತಹ ವಾಹನ ಚಾಲಕ ರಿಗೆ ಸಾಕಷ್ಟು ಅಪಘಾತಗಳು ನಡೆಯುವ ಸಂಭವವಿದ್ದು, ಈ ಕೂಡಲೇ ಪೆಟ್ರೋಲ್ ಬಂಕ್ ಮಾಲೀಕರು ಮಾರ್ಗ ಸೂಚಿ ಸುವ ಒಂದು ನಾಮಫಲಕ ಹಾಕಬೇಕು ಮತ್ತು ಇಲ್ಲಿನ ಪೆÇಲೀಸರು ಬ್ಯಾರಿಕೇಡ್ ಅಳವಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಪುರಸಭಾ ಮಾಜಿ ಅಧ್ಯಕ್ಷ ಉಮಾ ಮುದ್ದಮ್ಮ, ಟಿಪ್ಪು ಸೇನೆಯ ಅಧ್ಯಕ್ಷ ನೂರ್ ಅಹಮದ್ ಮಾತನಾಡಿ ದರು. ಕರವೇ ಗೌರವಾಧ್ಯಕ್ಷ ಮಾಳೆಗೆರೆ ತಾರಾನಾಥ್, ಜೆಡಿಎಸ್ ಮುಖಂಡ ಮಾರುತಿ ಚಂದ್ರು, ಕನ್ನಡ ಸೇನೆಯ ಕಾರ್ಯದರ್ಶಿ ಲೋಕೇಶ್, ಪುರಸಭೆ ಮಾಜಿ ಸದಸ್ಯ ಸಂಗೀತಕುಮಾರ್, ಜೆಡಿಎಸ್ ಮುಖಂಡ ರಿಜ್ವಾನ್ ಪಾಷಾ, ಕರವೇ ನಗರ ಅಧ್ಯಕ್ಷ ಎಸ್.ಜಿ.ಪ್ರಸನ್ನ, ನಾಗರಾಜು, ಹನೀಫ್ ಹಾಗೂ 12 ಮತ್ತು 13ನೇ ವಾರ್ಡಿನ ಸಾರ್ವ ಜನಿಕರು ಸೇರಿದಂತೆ ಇತರರು ಇದ್ದರು.

Translate »