ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ

May 29, 2019

ಕೆಎಸ್‍ಆರ್‍ಟಿಸಿ ಕಚೇರಿ ಮುಂದೆ ನೌಕರರÀ ಪ್ರತಿಭಟನೆ
ಹಾಸನ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್‍ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇ ಷನ್ ವತಿಯಿಂದ ನಗರದ ಬಿ.ಎಂ.ರಸ್ತೆ ಬಳಿಯ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಮುಂದೆ ನೌಕರರು ಧರಣಿ ನಡೆಸಿದರು.

ಕಳೆದ ತಿಂಗಳು ಬೆಂಗಳೂರಿನಲ್ಲಿ ಫೆಡರೇ ಷನ್ ಕೇಂದ್ರಿಯ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಕಲಬುರಗಿ ಸಮ್ಮೇಳನದ ತೀರ್ಮಾನ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರ ಮತ್ತು ಸಾರಿಗೆ ನಿಗಮ ಗಳ ಆಡಳಿತ ವರ್ಗಗಳ ಮೇಲೆ ಒತ್ತಡ ತರಲು ಮುಂದಾಗಿದ್ದೇವೆ. ಚಾಲಕ ಮತ್ತು ನಿರ್ವಾಹಕರ ಕೆಲಸದ ಭಾರ ಹೆಚ್ಚಾಗಿದ್ದು, ಕೆಲಸಗಾರರನ್ನು ಹಿಂಸಿಸುವ ನಿಟ್ಟಿನಲ್ಲಿ ಇಲ್ಲ ಸಲ್ಲದ ಸುಳ್ಳು ಮೊಕದ್ದಮೆಗಳನ್ನು ಅವರ ಮೇಲೆ ಹಾಕಿ ನೆಮ್ಮದಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲ. 4 ಸಾರಿಗೆ ನಿಗಮಗಳಲ್ಲಿ ಒಂದು ಲಕ್ಷ ಹದಿನೈದು ಸಾವಿರಕ್ಕ್ಕೂ ಹೆಚ್ಚು ಕಾರ್ಮಿ ಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒದ ಗಿಸಿರುವ ವೈದ್ಯಕೀಯ ವ್ಯವಸ್ಥೆ ಬಹಳ ಅಸ ಮರ್ಪಕವಾಗಿದೆ ಎಂದು ದೂರಿದರು.

ಕೆಲಸಗಾರರ ಹಾಗೂ ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸಲು ಸಮಗ್ರ ಯೋಜನೆ ಸಿದ್ಧಪಡಿಸಬೇಕು. ಹಾಗೂ ಇಎಸ್‍ಐ ಕಾಯಿದೆ ಸೌಲಭ್ಯ ಒದಗಿಸ ಬೇಕು. ಜೊತೆಗೆ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು 200 ರೂ.ಗಳಂತೆ ಮನೆಯ ಲ್ಲಿಯೇ ತೆಗೆದುಕೊಳ್ಳುವ ಚಿಕಿತ್ಸೆಗಾಗಿ ಹಣ ಕೊಡಬೇಕು. ಸಾರಿಗೆ ನಿಗಮಗಳಲ್ಲಿ ಕೈಗಾ ರಿಕಾ ಬಾಂಧವ್ಯ ಸಂಪೂರ್ಣ ಕುಸಿದಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಯಾವ ಸಕಾರಾತ್ಮಕ ಕ್ರಮ ತೆಗೆದು ಕೊಂಡಿಲ್ಲ. 1999 ಫೆ.18 ರಂದು ಸುಪ್ರಿಂ ಕೋರ್ಟ್ ಫೆಡರೇಷನ್‍ಗೆ ಮಾನ್ಯತೆ ಇದೆ ಎಂದು ತಿಳಿಸಿದರೂ, ಆಡಳಿತ ವರ್ಗ ಅದಕ್ಕೆ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 1987ರ ಡಿಸೆಂಬರ್‍ಗೂ ಮೊದಲು ನಿಗಮ ಮಟ್ಟದಲ್ಲಿ 2 ಕಾರ್ಮಿಕ ಫೆಡರೇ ಷನ್‍ಗಳಿಗೆ ಮಾನ್ಯತೆ ಕೊಡಲಾಗಿತ್ತು. ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಸತತವಾಗಿ ಹೋರಾಟ ನಡೆಸಿದ ಕಾರಣ ಆಡಳಿತ ವರ್ಗವು ಒಂದು ಕೈಗಾರಿಕೆಗೆ ಒಂದೇ ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆ ಇರಬೇಕು ಎಂಬ ತತ್ವದ ಆಧಾರದ ಮೇಲೆ ಗುಪ್ತ ಮತ ದಾನದ ಮೂಲಕ ಕಾರ್ಮಿಕರ ಅಭಿ ಪ್ರಾಯ ಪಡೆದಿದೆ. ಎರಡು ಚುನಾ ವಣೆಯು ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಗೆದ್ದು ಮಾನ್ಯತೆ ಪಡೆಯಿತು ಎಂದು ಸಮಸ್ಯೆ ತಿಳಿಸಿದರು.

ಸಾರಿಗೆ ನಿಗಮಗಳಲ್ಲಿ ಹಿಂಸೆ, ಕಿರುಕುಳ ತಾಳಲಾರದೇ ಅನೇಕ ನೌಕರರು ತಮ್ಮ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ. ಇಂತಹ ಅಮಾನುಷ ಪರಿಸ್ಥಿತಿಯನ್ನು ಆಡಳಿತ ವರ್ಗ ತಪ್ಪಿಸಬೇಕು. ಪ್ರಕರಣ ದಾಖಲಾದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸ ಬೇಕು. ಆತ್ಮಹತ್ಯೆಗೆ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ನಾಲ್ಕು ನಿಗಮಗಳ ಹಣಕಾಸಿನ ಪರಿ ಸ್ಥಿತಿ ಶೋಚನೀಯವಾಗಿರುವುದರಿಂದ ಈ ನಿಗಮಗಳಿಗೆ ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ಕೊಡಬೇಕು. ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಬೇಕು. ಹೆದ್ದಾರಿ ಟೋಲ್ ಸುಂಕ ಕಡಿಮೆ ಮಾಡ ಬೇಕು. ಸರ್ಕಾರದಿಂದ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ. ಅನುದಾನ ನೀಡ ಬೇಕು, ವಿದ್ಯಾರ್ಥಿಗಳ ಮತ್ತು ಹಿರಿಯ ನಾಗರಿಕರ ರಿಯಾಯಿತಿ ಪಾಸ್ ಮೊದ ಲಾದ ಬೇಡಿಕೆ ಈಡೇರಿಸಬೇಕು. ನಾಲ್ಕು ನಿಗಮಗಳ ಸಾರಿಗೆ ನೌಕರರ ವೇತನ ಸರ್ಕಾರವೇ ಭರಿಸಬೇಕು ಹಾಗೂ ಖಾಸಗಿ ಬಸ್ ಮಾಲೀಕರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದರು.

ಕೆಎಸ್‍ಆರ್‍ಟಿಸಿ ನಾಲ್ಕು ನಿಗಮಗಳಾಗಿ ವಿಭಜನೆಯಾದ ಮೇಲೆ ನಷ್ಟದ ಪ್ರಮಾಣ ಹಾಗೂ ಭ್ರಷ್ಟ್ಟಾಚಾರದ ಪ್ರಮಾಣ ಹೆಚ್ಚಾ ಗಿದೆ. ಇಲ್ಲಿ ದುಡಿಯುವ ಕಾರ್ಮಿಕರಿ ಗಾಗಲಿ, ಪ್ರಯಾಣಿಕರಿಗಾಗಲಿ ವಿಶೇಷ ಅನುಕೂಲಗಳಾಗಿಲ್ಲ. ಜನರಲ್ ಶಿಫ್ಟ್ ಮತ್ತು ಬಾರ್ ಡ್ಯೂಟಿಗಳಿಂದ, ಘಟಕ ಮಟ್ಟದಲ್ಲಿ ಹಿಂಸೆ ಕಿರುಕುಳಗಳಿಂದ ಸ್ಫೋಟಕ ಪರಿಸ್ಥಿತಿ ಉಂಟಾಗಿದೆ. ಕೂಡಲೇ 4 ನಿಗಮಗಳನ್ನು ಒಂದು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲ್ಲಿ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ಜಿ.ಟಿ. ರಂಗೇಗೌಡ, ಪ್ರಧಾನ ಕಾರ್ಯದರ್ಶಿ ಶಿವನಂಜೇಗೌಡ, ಎಐಟಿಯುಸಿ ಅಧ್ಯಕ್ಷ ಎಂ.ಸಿ.ಡೋಂಗ್ರೆ, ಕಾರ್ಯದರ್ಶಿ ಧರ್ಮ ರಾಜು, ಸುಬ್ರಮಣ್ಯ, ಹೊನ್ನೇಗೌಡ, ಶೈಲೇಶ್, ಕೃಷ್ಣೇಗೌಡ ಇತರರಿದ್ದರು.

Translate »