ಯೋಧರ ಪ್ರಾಣ ತ್ಯಾಗದಿಂದಲೇ ಪ್ರಜಾಪ್ರಭುತ್ವ ಉಳಿದಿದೆ
ಕೊಡಗು

ಯೋಧರ ಪ್ರಾಣ ತ್ಯಾಗದಿಂದಲೇ ಪ್ರಜಾಪ್ರಭುತ್ವ ಉಳಿದಿದೆ

August 19, 2021

ಮಡಿಕೇರಿ, ಆ.18- ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಯೋಧರಿಂ ದಲೇ ದೇಶದ ಪ್ರಜಾಪ್ರಭುತ್ವ ಇಂದಿಗೂ ಸುಭದ್ರವಾಗಿ ಉಳಿದಿದ್ದು ಯೋಧರ ಪ್ರಾಣ ತ್ಯಾಗವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ದಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಕೊಡಗು ಬಿಜೆಪಿ ಯಿಂದ ಆಯೋಜಿತ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಮುಂದಿನ 25 ವರ್ಷಗಳು ಕೂಡ ಅತ್ಯಂತ ಮಹತ್ವದ್ದಾ ಗಿದೆ. ಹೀಗಾಗಿ ದೂರದೃಷ್ಟಿಯಿಂದ ಭಾರ ತದ ಸಂರಕ್ಷಣೆಗಾಗಿ ಬಿಜೆಪಿಯನ್ನು ಅಧಿ ಕಾರದಲ್ಲಿ ಮುಂದುವರೆಸಲು ಕಾರ್ಯಕರ್ತರು, ಭಾರತೀಯರು ಪಣ ತೊಡಬೇಕಾಗಿದೆ. 60 ವರ್ಷ ಕಾಲ ಭಾರತವನ್ನು ವಂಶ ಪಾರಂಪರ್ಯದ ಮೂಲಕ ಆಳಿದವ ರಿಂದ ಭಾರತ ಎಷ್ಟೊಂದು ಹಿಂದುಳಿದಿತ್ತು. ಬಿಜೆಪಿ ಆಡಳಿತದ 7 ವರ್ಷಗಳಲ್ಲಿ ಯಾವ ರೀತಿ ಪ್ರಗತಿಯ ಹಾದಿಯಲ್ಲಿ ಬದಲಾವಣೆಯಾ ಯಿತು ಎಂಬುದನ್ನು ಪ್ರತಿಯೋರ್ವರಿಗೂ ಮನಗಾಣುವಂತೆ ಮಾಡಬೇಕಾಗಿದೆ ಎಂದರು.

7 ವರ್ಷಗಳ ಅಧಿಕಾರಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳಿ ಲ್ಲದೇ ಆಡಳಿತ ನಡೆಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಹೀಗಾಗಿ ಮುಂದಿನ 25 ವರ್ಷ ಗಳ ಅಭಿವೃದ್ಧಿಗೂ ಈಗಿನಿಂದಲೇ ಚಿಂತನೆ ಹರಿಸಬೇಕಾದ ಅನಿವಾರ್ಯತೆಯಿದೆ. ಮುಂದಿನ ಪೀಳಿಗೆಗೆ ಸುಂದರ ಭಾರತ ವನ್ನು ನೀಡುವುದು ಈಗಿನ ಜನರ ಹೊಣೆ ಯಾಗಬೇಕಾಗಿದೆ ಎಂದು ರಾಜೀವ್ ಚಂದ್ರಶೇಖರ್ ನುಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸದನದಲ್ಲಿ ಕೇಂದ್ರದ ಹೊಸ ಸಚಿವರನ್ನು ಪರಿಚಯಿಸಲು ಕಾಂಗ್ರೆಸ್ ಸೇರಿದಂತೆ ವಿಪಕ್ಷ ಗಳು ಅವಕಾಶ ಮಾಡಿಕೊಡದೇ ಇರುವ ಸಂದರ್ಭ ಪ್ರಧಾನಿ ಮೋದಿ ಸೂಚನೆ ಮೇರೆಗೆ ಸಚಿವರು ಜನಾಶೀರ್ವಾದ ಯಾತ್ರೆ ಮೂಲಕ ದೇಶವ್ಯಾಪಿ ಸಂಚರಿಸಿ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಮೂಲಕ ಜನರ ಸಮ ಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ಸಂಜೀವ್ ಮುತ್ತೋಡು, ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ, ಕೊಡಗು ಬಿಜೆಪಿ ಜಿಲ್ಲಾ ಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಭಾರತೀಶ್, ಮಾಜಿ ಶಾಸಕ ಎಸ್.ಜಿ. ಮೇದಪ್ಪ, ವೇದಿಕೆಯಲ್ಲಿದ್ದರು. ಕೊಡವ ಸಾಂಪ್ರದಾಯಿಕ ಪೀಚೆಕತ್ತಿ ನೀಡಿ ಪೇಟ ತೊಡಿಸಿ ರಾಜೀವ್ ಚಂದ್ರಶೇಖರ್ ಅವ ರನ್ನು ಇದೇ ಸಂದರ್ಭ ಗೌರವಿಸಲಾಯಿತು.

ಪುಷ್ಪ ನಮನ: ಜನಾಶೀರ್ವಾದ ಯಾತ್ರೆಯ ಅಂಗವಾಗಿ ಮಡಿಕೇರಿಗೆ ಆಗಮಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಜಿಲ್ಲಾ ಬಿಜೆಪಿ ಮುಖಂಡರು ಆತ್ಮೀಯ ವಾಗಿ ಬರ ಮಾಡಿಕೊಂಡರು. ಬಳಿಕ ಸಚಿ ವರು ಮತ್ತು ಗಣ್ಯರು ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಹುತಾತ್ಮ ಗುಡ್ಡೇಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆ ಗಳಿಗೆ ಪುಷ್ಪ ನಮನ ಸಲ್ಲಿಸಿದರು.

Translate »