ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ
ಮೈಸೂರು

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ

July 8, 2021

ಮೈಸೂರು, ಜು.7(ಎಂಟಿವೈ)- ಕೃಷಿ ಕ್ಷೇತ್ರದ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಯೋಜನೆ ಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡು ವಂತೆ ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಉತ್ತೇಜಿಸಿದರು.

ಮೈಸೂರು ತಾಲೂಕಿನ ವರುಣಾ ಗ್ರಾಪಂ ಕಚೇರಿ ಬಳಿ `ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಶೀರ್ಷಿಕೆಯಲ್ಲಿ ರೈತರು ಹಾಗೂ ಕೃಷಿ ಸಂಬಂಧಿತ ಮಾಹಿತಿ ಒದಗಿಸುವ `ಕೃಷಿ ರಥ’ಕ್ಕೆ ಚಾಲನೆ ನೀಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಹಲವು ಸವಾ ಲನ್ನು ಎದುರಿಸುತ್ತಿವೆ. ಅತಿವೃಷ್ಟಿ, ಅನಾ ವೃಷ್ಟಿ, ಬೆಲೆ ಕುಸಿತ, ಕೃಷಿ ಚಟುವಟಿಕೆಗೆ ಬೇಕಾದ ವಸ್ತುಗಳ ಬೆಲೆ ಏರಿಕೆ, ರಸ ಗೊಬ್ಬರದ ಬೆಲೆ ಹೆಚ್ಚಳದಿಂದಾಗಿ ರೈತ ಸಮು ದಾಯ ಸಂಕಷ್ಟಕ್ಕೀಡಾಗಿದೆ. ಆದರೂ ಕೃಷಿ ಚಟುವಟಿಕೆ ನಡೆಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿ ಜಾರಿ ಗೊಳಿಸಿರುವ ಯೋಜನೆಗಳ ಸದ್ಬಳಕೆ ಮಾಡಿ ಕೊಳ್ಳಬೇಕು. ಸವಲತ್ತು ಪಡೆಯುವ ಮೂಲಕ ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವತ್ತ ಗಮನ ಕೇಂದ್ರಿಕರಿಸುವಂತೆ ಸೂಚಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ವೀರಣ್ಣ ಮಾತನಾಡಿ, ಬೆಳೆ ಸಮೀಕ್ಷೆ, ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ, ಕೃಷಿ ಯಾಂತ್ರೀಕರಣ, ಲಘು ನೀರಾವರಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಆತ್ಮ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ಬಗ್ಗೆ ವಿವರಿಸಿದರು.

ಕೃಷಿ ರಥ ಸಂಚಾರ: ಕೃಷಿ ತಜ್ಞರೊಂ ದಿಗೆ ಕೃಷಿ ರಥವು ವರುಣಾ, ವಾಜ ಮಂಗಲ, ವರಕೋಡು, ಮೆಲ್ಲಹಳ್ಳಿ, ಕೀಳನ ಪುರ, ಯಡಕೊಳ, ದೇವಲಾಪುರ, ಸೋಮೇ ಶ್ವರಪುರ, ಹಾರೋಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿ ರೈತರಿಗೆ ಕೃಷಿ ಹಾಗೂ ಬೇಸಾಯ ಸಂಬಂಧಿ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಲಿದೆ. ರೈತರು-ಇಲಾಖೆ ನಡುವೆ ಸಮನ್ವಯ ಸಾಧಿಸುವುದು ಈ ಅಭಿಯಾನದ ಉದ್ದೇಶ ಎಂದರು.

ವರುಣಾ ಗ್ರಾಪಂ ಅಧ್ಯಕ್ಷ ರಾಜೇಶ್, ಸದಸ್ಯರು, ಕೃಷಿ ವಿಸ್ತರಣಾ ಶಿಕ್ಷಣ ಘಟಕ ಸಹ ಪ್ರಾಧ್ಯಾಪಕ ಶಿವಸ್ವಾಮಿ, ಸಹಾಯಕ ರೇಷ್ಮೆ ನಿರ್ದೇಶಕ ಮಹೇಶ್ ಕುಮಾರ್, ಸಹಾಯಕ ತೋಟಗಾರಿಕೆ ನಿರ್ದೇಶಕಿ ಮಮತಾ, ಕೃಷಿ ಅಧಿಕಾರಿ ವಿನಯ್ ಕುಮಾರ್, ತಾಂತ್ರಿಕ ಅಧಿಕಾರಿ ಜೀವನ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹೇಮಂತ್, ಸಹಾಯಕ ತೋಟಗಾರಿಕಾ ಅಧಿಕಾರಿ ವಿದ್ಯಾಸಾಗರ್, ಯುವ ಮುಖಂಡ ವರುಣಾ ಮಹೇಶ್, ಗ್ರಾಮದ ಮುಖಂಡರು, ಪ್ರಗತಿಪರ ರೈತರು-ರೈತ ಮಹಿಳೆಯರು ಪಾಲ್ಗೊಂಡಿದ್ದರು.

Translate »