ಬಿಎಸ್‍ವೈ ಸÀರ್ಕಾರ ಸತ್ತುಹೋಗಿದೆ
ಮೈಸೂರು

ಬಿಎಸ್‍ವೈ ಸÀರ್ಕಾರ ಸತ್ತುಹೋಗಿದೆ

July 10, 2021

ಮೈಸೂರು, ಜು.9(ಎಂಟಿವೈ)- ಸಾವಿರಾರು ಕೋಟಿ ರೂ. ಟೆಂಡರ್ ಕರೆಯಲು ಹಾಗೂ ಕಿಕ್‍ಬ್ಯಾಕ್ ಪಡೆ ಯಲು ಆಸಕ್ತಿ ವಹಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕನ್ನಡನಾಡಿನ ಹೆಮ್ಮೆಯ ಸಂಕೇತವಾದ ಕೆಆರ್‍ಎಸ್ ಅಣೆಕಟ್ಟೆ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್, ಕನ್ನಂಬಾಡಿ ಕಟ್ಟೆಗೆ ಸಂಬ ಂಧಿಸಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾದಿರಂಪ-ಬೀದಿರಂಪ ಮಾಡುತ್ತಿದ್ದಾರೆ. ಕಾವೇರಿ ಮತ್ತು ಕನ್ನಂಬಾಡಿ ನಾಡಿನ ಆಸ್ತಿ, ಹೆಮ್ಮೆಯ ಸಂಕೇತ. ರಾಜ-ಮಹಾರಾಜರು ಹಾಗೂ ಪ್ರಜೆಗಳ ನಡುವಿನ ನಂಟಿನ ಸಂಕೇತ. ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ನಡುವಿನ ಬಾಂಧವ್ಯದ ಪ್ರತೀಕ. ಹಲವು ಜನರ ಪರಿಶ್ರಮ, ತ್ಯಾಗದಿಂದಾಗಿ ಮೈದಳೆ ದಿರುವ ಅಣೆಕಟ್ಟೆ ಇದಾಗಿದೆ. ರಾಜಮನೆ ತನದ ಹೆಣ್ಣು ಮಕ್ಕಳು ತಮ್ಮ ಆಭರಣವನ್ನು ಮಾರಿ ಆ ಕಾಲದಲ್ಲಿಯೇ 70 ಲಕ್ಷ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ ಅಣೆಕಟ್ಟೆ ಬಗ್ಗೆ ಬೀದಿಯಲ್ಲಿ ಚರ್ಚೆಯಾಗುತ್ತಿದ್ದರೂ ಸರ್ಕಾರ `ಸತ್ತಿರುವಂತೆ’ ಸುಮ್ಮನಿದೆ ಎಂದು ಕಿಡಿಕಾರಿದರು.

ಅಣೆಕಟ್ಟೆ ಸುಭದ್ರ: ಪ್ರಜಾಪ್ರಭುತ್ವದ ಕಾಲದಲ್ಲಿ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ್ದರೆ ಬಿರುಕು ಬಿಡುವ ಸಂಭವವಿತ್ತು. ಆದರೆ ಕೆಆರ್‍ಎಸ್ ಜಲಾಶಯ ನಿರ್ಮಾಣವಾಗಿ ರುವುದು ರಾಜಪ್ರಭುತ್ವದಲ್ಲಿ. ಅದು ಅಷ್ಟು ಸುಲಭವಾಗಿ ಬಿರುಕು ಬಿಡುವುದಿಲ್ಲ. ದೇಶ-ವಿದೇಶದ ಇಂಜಿನಿಯರ್‍ಗಳು, ತಂತ್ರಜ್ಞರು ಬಂದು ಅಣೆಕಟ್ಟೆ ನಿರ್ಮಾಣಕ್ಕೆ ಸಲಹೆ-ಸೂಚನೆ ನೀಡಿದ್ದಾರೆ. ಸರ್ ಎಂ.ವಿಶ್ವೇಶ್ವರಯ್ಯ ಹಲವು ತಂತ್ರಜ್ಞರ ಸಲಹೆಯನ್ನು ಪಡೆದು, ಅಷ್ಟೇ ಸುಭದ್ರವಾಗಿ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಕ್ರಸ್ಟ್‍ಗೇಟ್ ಸೇರಿದಂತೆ ಅಣೆಕಟ್ಟೆ ನಿರ್ಮಾಣಕ್ಕೆ ಅಗತ್ಯ ವಾದ ಬಹಳಷ್ಟು ಪರಿಕರಗಳನ್ನು ವಿದೇಶದಿಂದ ತರಿಸಲಾಗಿದೆ. ಇನ್ನೂ ಹಲವು ವರ್ಷ ಅಣೆಕಟ್ಟೆಗೆ ಯಾವುದೇ ತೊಂದರೆಯಾಗದು. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ತಜ್ಞರ ಕಳಿಸದ ಸರ್ಕಾರ: `ಕನ್ನಂಬಾಡಿ ಅಣೆಕಟ್ಟೆ ಬಿರುಕು ಬಿಟ್ಟಿದೆ’ ಎಂದಿರುವುದು ಸಂಸದೆ ಸುಮಲತಾ ಅಂಬರೀಶ್, `ಬಿರುಕು ಬಿಟ್ಟಿಲ್ಲ’ ಎಂದಿರುವುದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ. ಇವರಿ ಬ್ಬರೂ ತಂತ್ರಜ್ಞರೂ ಅಲ್ಲ, ಪರಿಣಿತರೂ ಅಲ್ಲ. ಅಪ್ಪಟ ರಾಜಕಾರಣಿಗಳು ಎಂಬುದನ್ನು ಗಮನಿಸಬೇಕು. ಡ್ಯಾಂ ಸುರಕ್ಷೆ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ಸರ್ಕಾರ. ಆದರೆ, ರಾಜ್ಯದಲ್ಲಿ ಸರ್ಕಾರ ಜೀವಂತವಿಲ್ಲ. ಆದ್ದರಿಂದ ಡ್ಯಾಂ ವಿಚಾರ ಬೀದಿರಂಪವಾಗಿದ್ದರೂ ಸಿಎಂ ಯಡಿಯೂರಪ್ಪ ಮಾತನಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಂತೂ ಉಸಿರಾ ಡುತ್ತಿಲ್ಲ. ಅಣೆಕಟ್ಟೆಯ ಮುಖ್ಯ ಇಂಜಿನಿಯರ್ ಸ್ಪಷ್ಟನೆ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ವೇನಾದರೂ ಉಸಿರಾಡುತ್ತಿದ್ದರೆ `ಅಣೆಕಟ್ಟೆ ಬಿರುಕು ಬಿಟ್ಟಿದೆ’ ಎಂದು ಹೇಳಲಾದ ಸ್ಥಳಕ್ಕೆ ತಜ್ಞರ ತಂಡ ಕಳಿಸಿ ಪರಿಶೀಲಿಸುತ್ತಿತ್ತು. ಆದರೆ ಸರ್ಕಾರ ಮೌನವಾಗಿರುವುದು ನೋಡಿದರೆ ಸರ್ಕಾರ ಇದೆಯೋ, ಇಲ್ಲವೋ? ಎಂಬ ಪ್ರಶ್ನೆ ಮೂಡುತ್ತದೆ ಎಂದು ಕುಟುಕಿದರು.

ಭಯ ನಿವಾರಿಸಿ: ಕನ್ನಂಬಾಡಿ ಕಟ್ಟೆ ಕರ್ನಾಟಕ ಮಾತ್ರವಲ್ಲದೆ ನೆರೆಯ 3 ರಾಜ್ಯಗಳಿಗೂ ಮಹತ್ವದ್ದಾಗಿದೆ. ದಕ್ಷಿಣ ಭಾರತದಲ್ಲಿ ಕೋಟ್ಯಾಂತರ ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದೆ. ಬೆಂಗ ಳೂರಿನ ಜನತೆ, ಮಂಡ್ಯ, ಮೈಸೂರು ಜಿಲ್ಲೆಯವರೂ ಸೇರಿದಂತೆ ಕೋಟ್ಯಾಂತರ ಜನರು ಕುಡಿಯುವ ನೀರಿಗಾಗಿ, ಕೃಷಿಗಾಗಿ ಈ ಅಣೆಕಟ್ಟೆಯನ್ನೇ ನೆಚ್ಚಿಕೊಂಡಿದ್ದಾರೆ. ಅಣೆಕಟ್ಟೆಯಲ್ಲಿ ಬಿರುಕುಂಟಾಗಿದೆ ಎಂಬ ಮಾತು ಕೇಳಿ ಅಣೆಕಟ್ಟೆಯ ತಗ್ಗು ಪ್ರದೇಶ ದಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು ಸೇರಿದಂತೆ ಮೂರೂ ಜಿಲ್ಲೆಗಳ ಜನತೆ ಗಾಬರಿಗೊಂಡಿದ್ದಾರೆ. ಹಾಗಾಗಿ, ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಗಳು ಕೂಡಲೇ ಸಭೆ ನಡೆಸಿ ಡ್ಯಾಂ ಕುರಿತ ವದಂತಿಗಳಿಗೆ ತೆರೆ ಎಳೆಯಬೇಕು, ಜನರ ಆತಂಕ ದೂರ ಮಾಡಬೇಕು ಎಂದು ಮನವಿ ಮಾಡಿದರು.

ಸಂಸದೆ ಸುಮಲತಾ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬೆಂಬಲಿಗರು ಕೆಆರ್‍ಎಸ್ ಅಣೆಕಟ್ಟೆ ವಿಚಾರವಾಗಿ ಬೀದಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಅಂಬರೀಶ್ ಒಳ್ಳೆ ಹೆಸರು ಗಳಿಸಿದ್ದರು. ಸಾವಿನ ನಂತರ ಅವರ ಹೆಸರನ್ನು ಬೀದಿಗೆ ತಂದಿದ್ದು ನೋವಿನ ಸಂಗತಿ. ಅಂಬರೀಶ್ ನಿಧನರಾದಾಗ ಮಂಡ್ಯಕ್ಕೆ ಮೃತದೇಹ ತಂದ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಮೆಚ್ಚುವಂಥದ್ದು ಎಂದರು.

ಅಹಿಂದ ಸರ್ಕಾರ: ಕೇಂದ್ರ ಸರ್ಕಾರದ ಈಗಿನ ವಿಸ್ತರಣೆಯಿಂದ ಇದು `ನೈಜ ಅಹಿಂದ ಸರ್ಕಾರ’ ಎಂಬುದು ಸಾಬೀತಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಪ್ರಥಮ ಪ್ರಧಾನಿ ಮೋದಿ, ಸಂಪುಟದ 77 ಸಚಿವರಲ್ಲಿ 52 ಸಚಿವರನ್ನು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಸಣ್ಣ ಸಮುದಾಯದವರಿಂದಲೇ ಆಯ್ದು ಕೊಂಡಿದ್ದಾರೆ. ಮುಂದೆ ಹಿಂದುಳಿದ ವರ್ಗ ದವರು ಪ್ರಧಾನಿಯಾಗುವುದು ಅನುಮಾನ ಎಂದು ಎ.ಹೆಚ್.ವಿಶ್ವನಾಥ್ ವಿಶ್ಲೇಷಿಸಿದರು.

Translate »