ಫಸಲ್ ವಿಮೆಗೆ ನೊಂದಾವಣಿಗೆ ಜಿಲ್ಲಾಧಿಕಾರಿ ಕಾವೇರಿ ಮನವಿ
ಚಾಮರಾಜನಗರ

ಫಸಲ್ ವಿಮೆಗೆ ನೊಂದಾವಣಿಗೆ ಜಿಲ್ಲಾಧಿಕಾರಿ ಕಾವೇರಿ ಮನವಿ

June 28, 2018

ಚಾಮರಾಜನಗರ: ಪ್ರಸ್ತುತ 2018ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನ ಗೊಳಿಸುತ್ತಿದ್ದು, ಪೂರ್ವ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಬೆಳೆಯಲಾಗಿರುವ ಹೆಸರು, ಉದ್ದು ಮತ್ತು ಎಳ್ಳು ಬೆಳೆಗಳಿಗೆ ಜೂನ್ 30ರೊಳಗೆ ವಿಮಾ ಕಂತು ಪಾವತಿಸಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ.

ರೈತರು ಸಮೀಪದ ಸರ್ವಿಸ್ ಏರಿಯಾ ಬ್ಯಾಂಕ್‍ಗಳಲ್ಲಿ ಎಕರೆಗೆ ಹೆಸರು ಬೆಳೆಗೆ ರೂ. 235, ಉದ್ದು ಬೆಳೆಗೆ ರೂ. 227 ಮತ್ತು ಎಳ್ಳು ಬೆಳೆಗೆ ರೂ. 202 ವಿಮಾ ಕಂತು ಪಾವತಿಸಿ ನೊಂದಾಯಿಸಿಕೊಳ್ಳಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ , ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಹಾಗೂ ಕಂದಾಯ ರಶೀದಿಯಂತಹ ದಾಖಲೆಗಳನ್ನು ನೀಡಬೇಕಿದೆ. ಫ್ಯೂಚರ್ ಜನರಾಲಿ ಇಂಡಿಯಾ ಇನ್ಸುರೆನ್ಸ್ ಕಂಪನಿಯನ್ನು ಜಿಲ್ಲೆಗೆ ಅಧಿಸೂಚಿಸಲಾಗಿದೆ. ಬೆಳೆ ವಿಮೆ ಸಂಬಂಧ ಯಾವುದೇ ಗೊಂದಲವಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಫ್ಯೂಚರ್ ಜನರಾಲಿ ಇಂಡಿಯಾ ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿಗಳಾದ ಪ್ರಶಾಂತ್-(8951360133), ಪವನ್‍ಕುಮಾರ್-(9742161333), ಪವನ್‍ಕುಮಾರ್.ಟಿ.ಎನ್- (8197407268) ಸಂಪರ್ಕಿಸಬಹುದು.

ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ವತಿಯಿಂದ ಸಹಾಯವಾಣಿಗಳನ್ನು ತೆರೆಯಲಾಗಿದೆ. ತಾಂತ್ರಿಕ ಕೃಷಿ ಅಧಿಕಾರಿಗಳು-ಚಾಮರಾಜನಗರ (8277930773), ಗುಂಡ್ಲುಪೇಟೆ-(8277930775), ಕೊಳ್ಳೇಗಾಲ- (8277930784) ಮತ್ತು ಯಳಂದೂರು (8277930797) ಲೀಡ್ ಬ್ಯಾಂಕ್ 08226-223686, ಜಂಟಿ ಕೃಷಿ ನಿರ್ದೇಶಕರ ಕಚೇರಿ-08226-225980, ಉಪ ಕೃಷಿ ನಿರ್ದೇಶಕರ ಕಚೇರಿ- 08226-224035, ತೋಟಗಾರಿಕೆ ಉಪನಿರ್ದೇಶಕರ ಕಚೇರಿ-08226-225022 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

Translate »