ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
ಹಾಸನ

ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

May 23, 2019

ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ, ವಾರದೊಳಗೆ ಸಮಸ್ಯೆ ಪರಿಹರಿಸುವಂತೆ ತಾಕೀತು
ಅರಸೀಕೆರೆ” ನಗರದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ದಿಢೀರ್ ಭೇಟಿ ನೀಡಿ ಕರ್ತವ್ಯದ ಸಮಯದಲ್ಲಿ ವೈದ್ಯರ ಗೈರು ಮತ್ತು ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅರಸೀಕೆರೆ ನಗರಸಭೆ ಆಡಳಿತದಲ್ಲಿ ಕೆಲವು ನಿರ್ಣಯ ಮತ್ತು ಅನುಮೋದನೆ ಗಳನ್ನು ಮಾಡಲು ಆಗಮಿಸಿದ್ದ ಜಿಲ್ಲಾಧಿ ಕಾರಿ ಅವರು ನಗರದ ಜಯಚಾಮ ರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಅವ್ಯವ ಸ್ಥೆಯ ಬಗ್ಗೆ ಸಾರ್ವಜನಿಕರು ಮತ್ತು ರೋಗಿ ಗಳು ಪದೇ ಪದೆ ದೂರನ್ನು ಸಲ್ಲಿಸುತ್ತಿದ್ದ ಪರಿಣಾಮ ಸಭೆಯ ನಂತರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿ ಗಳ ವಿರುದ್ಧ ಕೆಂಡಾಮಂಡಲರಾದರು.

ಆಸ್ಪತ್ರೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ಜಿಲ್ಲಾಧಿಕಾರಿಗಳಿಗೆ ಕಂಡಿದ್ದು ಧೂಳು ತುಂಬಿದ ಆವರಣ, ಅಲ್ಲಲ್ಲಿ ಗೋಡೆ ಮತ್ತು ನೆಲಗಳ ಮೇಲೆ ಬಿದ್ದಂತಹ ಹಳೆಯ ಕಲೆ ಗಳು, ಗಲೀಜು ತುಂಬಿದ ನೆಲ, ಹೆರಿಗೆ ಹಾಗೂ ಇತರೆ ವಾರ್ಡ್‍ಗಳಲ್ಲಿ ಹರಿದ ಹಾಸಿಗೆ, ಬೆಡ್‍ಶೀಟ್‍ಗಳು, ಕೊಳಕಾದ ಶೌಚಾಲಯ, ನೀರಿನ ಸರಬರಾಜು ವ್ಯವಸ್ಥೆ ಹದಗೆಟ್ಟಿದೆ, ನೀರು ಸರಬರಾಜು ಮಾಡುವ ಪಂಪ್‍ಸೆಟ್ ಕೆಟ್ಟು ವಾರವೇ ಕಳೆದಿದೆ. ಜೊತೆಗೆ ಕರ್ತವ್ಯದ ಸಮಯವಾದರೂ ವೈದ್ಯರಿಲ್ಲದೆ ಖಾಲಿ ಇದ್ದ ವೈದ್ಯರ ಕೊಠಡಿ, ಚಿಕಿತ್ಸೆಗಾಗಿ ಕಾಯುತ್ತಿದ್ದ ನೂರಾರು ಹೊರ ರೋಗಿಗಳು, ನೆಲದ ಮೇಲೆ ಕುಳಿತು ವೈದ್ಯರಿ ಗಾಗಿ ಕಾಯುತ್ತಿದ್ದ ಬಾಣಂತಿಯರು ಒಂದೇ ಎರಡೇ ಹತ್ತಾರು ಸಮಸ್ಯೆಗಳ ದೃಶ್ಯಗಳನ್ನು ಕಂಡ ಅವರು, ಆಡಳಿತ ವೈದ್ಯಾಧಿಕಾರಿ ಡಾ.ಷಡಾಕ್ಷರಿ ಹಾಗೂ ತಾಲೂಕು ಆರೋಗ್ಯಾ ಧಿಕಾರಿ ನಾಗಪ್ಪ ವಿರುದ್ಧ ಹರಿಹಾಯ್ದರು.

ವಾರ್ಡ್‍ಗಳಲ್ಲಿ ರೋಗಿಗಳು ದೂರು ಗಳನ್ನು ಹೇಳಿಕೊಂಡಿದ್ದಲ್ಲದೆ ವಿದ್ಯುತ್ ಅಡಚಣೆಯಾದರೆ ಡಯಾಲಿಸಿಸ್ ಯುನಿಟ್‍ಗೆ ಜನರೇಟರ್ ವ್ಯವಸ್ಥೆ ಮಾಡದೇ ರೋಗಿಗಳು ತಾಸುಗಟ್ಟಲೆ ಕಾಯುವ ಪರಿ ಸ್ಥಿತಿಯನ್ನು ಅವರ ಮುಂದೆ ಅಲವತ್ತು ತೋಡಿಕೊಂಡರು. ಜೊತೆಗೆ ಹೊರ ರೋಗಿಗಳಿಗೆ ಕೂರಲು ಆಸನಗಳಿಲ್ಲದೆ, ಮಹಿಳೆಯರು ಮಕ್ಕಳು ವೃದ್ಧರು ನೆಲದ ಮೇಲೆ ಕೂತು ವೈದ್ಯರಿಗಾಗಿ ಕಾಯುವ ಸ್ಥಿತಿ ಕಂಡು ಮತ್ತಷ್ಟು ಕೋಪಗೊಂಡ ಜಿಲ್ಲಾಧಿಕಾರಿ, ಬರುವ ಅನುದಾನವನ್ನೆಲ್ಲಾ ಏನು ಮಾಡುತ್ತೀರಾ, ಇನ್ನೊಂದು ವಾರ ದೊಳಗೆ ಎಲ್ಲಾ ವ್ಯವಸ್ಥಿತವಾಗಿರಬೇಕು, ವೈದ್ಯರು ಸರಿಯಾದ ಸಮಯಕ್ಕೆ ಬರಬೇಕು ಎಂದು ಸೂಚನೆ ನೀಡಿದರು. ಡಿಸಿ ಭೇಟಿ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್, ತಾಲೂಕು ಪಂಚಾಯಿತಿ ಇಒ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಛಲಪತಿ ಇನ್ನಿತರೇ ಅಧಿಕಾರಿಗಳು ಉಪಸ್ಥಿತರಿದ್ದರು.

ಹೋರಾಟಗಳನ್ನು ಮಾಡಿದರೂ ಫಲವಿಲ್ಲ
ಕಳೆದ ವರ್ಷ ಡಿಸೆಂಬರ್‍ನಲ್ಲಿ ತಾಲೂಕು ಬಿಜೆಪಿ, ಕರವೇ, ವಿವಿಧ ಸಂಘ ಸಂಸ್ಥೆಗಳಿಂದ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಧರಣಿನಿರತರನ್ನು ಉದ್ದೇಶಿ ಮಾತನಾಡಿದ ಡಿಹೆಚ್‍ಓ, ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ, 6 ತಿಂಗಳು ಕಳೆದರೂ ಯಾವುದೇ ಸುಧಾರಣೆಯಾಗದಿರುವುದು ವಿಪರ್ಯಾಸವೇ ಸರಿ.

ಪಿಹೆಚ್‍ಸಿ ವೈದ್ಯರುಗಳು ಸೇರಿದಂತೆ ಯಾರೊಬ್ಬರೂ ಆಸ್ಪತ್ರೆಗೆ ಸರಿಯಾಗಿ ಬರುವುದಿಲ್ಲ. ಕರ್ತವ್ಯ ಸಮಯದಲ್ಲಿ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಆಸ್ಪತ್ರೆಯೊಳಗೆ ಖಾಸಗಿ ಲ್ಯಾಬ್‍ನವರದ್ದೇ ದಂಧೆ ಶುರುವಾಗಿದೆ. ಕುಡಿಯುವ ನೀರಿಲ್ಲ, ಕೂರಲು ಆಸನಗಳಿಲ್ಲ, ಸಿಬ್ಬಂದಿ ಕೊರತೆ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ತಮಗೆ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ.

ಇನ್ನು ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರವಂತೂ ಅಕ್ಷರಶಃ ನರಕವೇ ಸರಿ. ಕಟ್ಟಡ ಸಂಪೂರ್ಣ ಹದಗೆಟ್ಟಿದೆ. ಹೊಸ ಕಟ್ಟಡ ನಿರ್ಮಾಣ ಆಗುವವರೆಗೆ ತಾತ್ಕಾಲಿಕ ಬದಲೀ ಕಟ್ಟಡದ ವ್ಯವಸ್ಥೆ ಮಾಡುವುದಾಗಿ 6 ತಿಂಗಳ ಹಿಂದೆ ವೈದ್ಯಾ ಧಿಕಾರಿಗಳು ನೀಡಿದ ಭರವಸೆ ಇನ್ನೂ ಈಡೇರಿಲ್ಲ.

ಬಡರೋಗಿಗಳಿಗೆ ಆಶ್ರಯವಾಗಬೇಕಾದ ಸರ್ಕಾರಿ ಆಸ್ಪತ್ರೆ ಸÀರ್ಕಾರ ಸವಲತ್ತುಗಳನ್ನು ಕೊಟ್ಟರೂ ಅದರ ಸದುಪಯೋಗ ಸಾಮಾನ್ಯರಿಗೆ ಲಭಿಸದೇ ಅವ್ಯವಸ್ಥೆಯ ಆಗರವಾಗಿ, ಮನಿ ಮಾರ್ಕೆಟ್ ಆಗಿರುವುದು ನಿಜಕ್ಕೂ ದುರಾದೃಷ್ಟಕರ. ಜಿಲ್ಲಾ ಮಟ್ಟದ ಅಧಿಕಾರಿ ಗಳಿಂದಲೂ ಬದಲಾಯಿಸಲಾಗದ ಡಾಕ್ಟರ್‍ಗಳು, ಸರಿಪಡಿಸಲಾ ಗದ ಈ ಅವ್ಯವಸ್ಥೆಗೆ ಇಲಾಖೆಯ ಆಯುಕ್ತರು, ಸಚಿವಾಲಯದಿಂ ದಲೇ ಮುಕ್ತಿ ಸಿಗಬೇಕಿದೆ. ಇನ್ನಾದರೂ ಸಂಬಂಧಿಸಿದವರು ಈ ಕುರಿತು ಗಂಭೀರ ಕ್ರಮಗಳನ್ನು ತೆಗೆದುಕೊಂಡು ಬಡವರ ಜೀವ ಉಳಿಸಲು ಯತ್ನಿಸಬೇಕು ಎಂಬುದು ನಾಗರಿಕರ ಅಳಲು.

ನಮ್ಮ ತಾಯಿಯವರನ್ನು ಡಯಾಲಿಸಿಸ್‍ಗೆ ಕರೆದುಕೊಂಡು ಬರುತ್ತೇನೆ. ಪ್ರತೀ ಬಾರಿ ಡಯಾಲಿಸಿಸ್ ನಡೆಯುವಾಗ ಕರೆಂಟ್ ಹೋದರೆ ಮತ್ತೆ ಬರುವವರೆಗೆ ಕಾಯಬೇಕು. ಜನರೇಟರ್ ಇದ್ದರೂ ಡಯಾಲಿಸಿಸ್ ಯುನಿಟ್ ಕೆಲಸ ಮಾಡಲು ಸಾಧÀ್ಯವಾಗುವುದಿಲ್ಲ. ಇಲ್ಲಿ ನೀರಿನ ಸಮಸ್ಯೆ ಕೂಡಾ ಇದೆ. – ಸುಬ್ರಮಣ್ಯ, ಬಾಣಾವರ

ಡಯಾಲೀಸಿಸ್ ಇರುವ ದಿನ ಬೆಳಿಗ್ಗೆ ಕರೆ ಮಾಡಿ ಡಯಾಲಿಸಿಸ್‍ಗೆ ಬರಬೇಡಿ, ಯುನಿಟ್ ಕಾರ್ಯ ನಿರ್ವಹಿಸುತ್ತಿಲ್ಲ, ಬಡ ಕುಟುಂಬದಿಂದ ಬಂದಿರುವ ನಾವು ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಸೇವೆ ಪಡೆಯಲು ಸಾಧÀ್ಯವಿಲ್ಲ, ಸಣ್ಣಪುಟ್ಟ ಕಾರಣಗಳನ್ನು ಹೇಳಿ ಇಲ್ಲಿ ಸರಿಯಾದ ಸೇವೆ ಕೊಡುವುದಿಲ್ಲ. ದೂರನ್ನು ನೀಡಲೂ ಹೋದರೆ ನಮಗೇ ಸಿಬ್ಬಂದಿಯು ಧಮಕಿ ಹಾಕುತ್ತಾರೆ.  – ಸಿದ್ದೇಶ್, ಡಯಾಲಿಸಿಸ್ ರೋಗಿ

Translate »