ಮೈಸೂರು, ಜು.21(ಎಂಟಿವೈ)- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್.ಬೇಗೂರು ವಲಯದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, 3 ದಿನಗಳ ಹಿಂದೆಯೇ ಸಾವನ್ನಪ್ಪಿದೆ ಎಂದು ಅಂದಾಜು ಮಾಡಲಾಗಿದೆ. ಮರಣೋ ತ್ತರ ಪರೀಕ್ಷೆ ಬಳಿಕ ನಿಯಮ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ.
ಎನ್.ಬೇಗೂರು ವಲಯದ ವದಲಿ ಬೀಟ್ಗೆ ಒಳಪಡುವ ಕಡತಾಳ ಕಟ್ಟೆ ಏರಿ ಸಮೀಪದ ಪೊದೆಯಲ್ಲಿ ಹುಲಿ ಕಳೇ ಬರ ಕಂಡು ಬಂದಿದೆ. 7-8 ವರ್ಷದ ಗಂಡು ಹುಲಿ ಅನಾರೋಗ್ಯದಿಂದ ಸಾವ ನ್ನಪ್ಪಿರಬಹುದು ಎಂದು ಅಂದಾಜು ಮಾಡ ಲಾಗಿದೆ. ಹುಲಿಯ ಸಾವಿಗೆ ನಿಖರ ಕಾರಣ ತಿಳಿಯುವ ನಿಟ್ಟಿನಲ್ಲಿ ಹುಲಿಯ ಅಂಗಾಂಗ ಗಳ ಸ್ಯಾಂಪಲ್ ಸಂಗ್ರಹಿಸಿ ಬೆಂಗಳೂ ರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಹುಲಿ ಮೃತದೇಹ ದೊರೆತ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಆರ್ಎಫ್ಓ ಹೆಚ್.ಪಿ.ಚೇತನ್, ವೈಲ್ಡ್ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ, ಎನ್ಟಿಸಿಎ ಪ್ರತಿನಿಧಿ ಮತ್ತಿತರರು ಭೇಟಿ ನೀಡಿ, ಪರಿಶೀಲಿಸಿದರು.