ಅಂತಾರಾಷ್ಟ್ರೀಯ ಮಟ್ಟಕ್ಕೆ ದೇವರಾಜ ಅರಸು ರಸ್ತೆ ಅಭಿವೃದ್ಧಿ
ಮೈಸೂರು

ಅಂತಾರಾಷ್ಟ್ರೀಯ ಮಟ್ಟಕ್ಕೆ ದೇವರಾಜ ಅರಸು ರಸ್ತೆ ಅಭಿವೃದ್ಧಿ

February 27, 2019

ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಡಿ. ದೇವರಾಜ ಅರಸು ರಸ್ತೆಯನ್ನು ಅಂತಾರಾಷ್ಟ್ರೀಯ ಮಟ್ಟದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಮಾನ ಸದಲ್ಲಿ ಅಚ್ಚಳಿಯದೇ ಉಳಿದಿರುವ, ಮೈಸೂರು ಭಾಗದ ಪ್ರಥಮ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಿ. ದೇವರಾಜ ಅರಸು ಅವರ ಹೆಸರಿನ ಈ ರಸ್ತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲು ಮೈಸೂರು ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿರಿಸಿದೆ.

ಫುಟ್‍ಪಾತ್ ಅಭಿವೃದ್ಧಿ, ಪೇ ಅಂಡ್ ಪಾರ್ಕ್ ವ್ಯವಸ್ಥೆ ಮೂಲಕ ಡಿ. ದೇವ ರಾಜ ಅರಸು ರಸ್ತೆಯ ಸೌಂದರ್ಯ ವೃದ್ಧಿಯ ಯೋಜನೆ ಅನುಷ್ಠಾನಗೊಳಿಸಲು ಆಯ-ವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ಹಸಿರು ಮೈಸೂರು: ರಾಜ್ಯ ಸರ್ಕಾರದ ‘ಹಸಿರು ಕರ್ನಾಟಕ’ ಪರಿಕಲ್ಪನೆಯಂತೆ, ಮೈಸೂರು ನಗರದ ಪಾಲಿಕೆ ವ್ಯಾಪ್ತಿಯ ಖಾಲಿ ಜಾಗ, ರಸ್ತೆ ಬದಿಯಲ್ಲಿ 50,000 ಸಸಿಗಳನ್ನು ನೆಟ್ಟು ಬೆಳೆಸುವ ‘ಹಸಿರು ಮೈಸೂರು’ ಯೋಜನೆಯನ್ನು ಜಾರಿ ಗೊಳಿಸಲಾಗುವುದು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಪ್ರತಿ ವಾರ್ಡ್‍ಗಳಲ್ಲಿ 15 ಲಕ್ಷ ರೂ. ವೆಚ್ಚದ ಮಾದರಿ ಪಾರ್ಕ್ ನಿರ್ಮಿಸಿ ಜಾಗರ್ಸ್ ಟ್ರ್ಯಾಕ್ ನಿರ್ಮಾಣ, ಓಪನ್ ಜಿಮ್ ಹಾಗೂ ಬಯೋ ಶೌಚಾಲಯ ಸೌಲಭ್ಯ ಒದಗಿಸಲು ಪಾಲಿಕೆಯು ಮುಂದಾಗಿದೆ.

ಯೋಗ ಲಕ್ಷ್ಮಿ: ಸರ್ಕಾರದ ಭಾಗ್ಯಲಕ್ಷ್ಮಿ ಯಂತೆ ‘ಮೈಸೂರು ಯೋಗ ಲಕ್ಷ್ಮಿ’ ವಿನೂ ತನ ಯೋಜನೆಯನ್ನು ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರಲು ಮಹಾನಗರ ಪಾಲಿಕೆ ಆಯ- ವ್ಯಯದಲ್ಲಿ ಅನುದಾನ ಮೀಸಲಿರಿಸಿದೆ.

ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ ಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ತಲಾ 25,000 ರೂ.ಗಳ ಠೇವಣಿಯನ್ನು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಇರಿಸಲು ಉದ್ದೇಶಿಸಲಾಗಿದೆ.

2019ರ ಏಪ್ರಿಲ್ 1ರಿಂದ ಯೋಜನೆ ಜಾರಿಗೆ ಬರಲಿದ್ದು, ಅದಕ್ಕಾಗಿ 2.5 ಕೋಟಿ ರೂ. ಹಣ ಒದಗಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಆರ್ಥಿಕ ಸಬಲೀಕರಣವಾಗಲಿದೆ ಎಂದು ಬಜೆಟ್ ಮಂಡಿಸಿದ ಶೋಭಾ ಅವರು ತಿಳಿಸಿದರು.

ಹಸಿರು ಅಂಗಡಿ: ಪ್ಲಾಸ್ಟಿಕ್ ಮುಕ್ತ ನಗರ ವನ್ನಾಗಿಸುವ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ತಯಾರಿಸುವ ಪ್ಲಾಸ್ಟಿಕ್ ಪದಾರ್ಥಗಳಿಗೆ ಬದಲಾಗಿ ಬಟ್ಟೆ, ಪೇಪರ್ ವಸ್ತುಗಳ ಬಳಸಲು ಪ್ರೇರೇಪಣೆ ನೀಡುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆಯು ಹಸಿರು ಅಂಗಡಿ (Green Shop) ವಿಶಿಷ್ಟ ಯೋಜನೆ ರೂಪಿಸಲುದ್ದೇಶಿಸಿದೆ.

ಈಜುಕೊಳ: ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಮೈಸೂರಲ್ಲಿ ಅತ್ಯಾಧುನಿಕ ಸೌಲಭ್ಯದ ಈಜುಕೊಳವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದೆ. ಅದೇ ರೀತಿ ಒಂದು ಪ್ರಮುಖ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ರಹಿತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಆಯ- ವ್ಯಯದಲ್ಲಿ ಅನುದಾನ ಒದಗಿಸಲಾಗಿದೆ.

ಥೀಮ್ ಪಾರ್ಕ್: ಅತ್ಯಮೂಲ್ಯ ನೈಸ ರ್ಗಿಕ ಸಂಪನ್ಮೂಲವಾದ ನೀರಿನ ಸಂರ ಕ್ಷಣೆ ಹಾಗೂ ನಾಗರಿಕರಿಗೆ ಶುದ್ಧ ಕುಡಿ ಯುವ ನೀರು ಪೂರೈಸುವ ಜವಾಬ್ದಾರಿ ಹೊತ್ತಿರುವ ಪಾಲಿಕೆಯು ಮಳೆ ನೀರು ಕೊಯ್ಲು ನಿರ್ವಹಣೆಗಾಗಿ ‘ಥೀಮ್ ಪಾರ್ಕ್’ ನಿರ್ಮಾಣ ಮಾಡಲು ಯೋಜಿಸಿದೆ.

ಖಾಸಗಿ ಸಂಸ್ಥೆಗಳ ಸಿಎಸ್‍ಆರ್ ಯೋಜನೆಯಡಿ ಹಣ ಸಂಗ್ರಹಿಸಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸುವ ಮೂಲಕ ಸಾರ್ವ ಜನಿಕರಿಗೆ ಮಳೆ ನೀರು ಕೊಯ್ಲು ನಿರ್ವ ಹಣೆ ಬಗ್ಗೆ ಅರಿವು ಮೂಡಿಸಲಾಗುವುದು.

ಫೋಟೋ ಬಿಲ್ಲಿಂಗ್: ಗ್ರಾಹಕರಿಗೆ ಸರಬರಾಜಾಗುತ್ತಿರುವ ನೀರಿನ ನಿಖರ ಮಾಹಿತಿ ಹಾಗೂ ಪಾರದರ್ಶಕ ಬಿಲ್ ವಿತರಿಸುವ ದೃಷ್ಟಿಯಿಂದ ಪ್ರಸಕ್ತ ಸಾಲಿ ನಿಂದ ‘ಫೋಟೋ ಬಿಲ್ಲಿಂಗ್’ ವ್ಯವಸ್ಥೆ ಯನ್ನು ಜಾರಿಗೆ ತರಲುದ್ದೇಶಿಸಲಾಗಿದೆ.

ಕೈಗಾರಿಕೆಗಳಿಗೆ ಸ್ಮಾರ್ಟ್ ಮೀಟರ್: ಪ್ರಸಕ್ತ ಸಾಲಿನಿಂದ ಎಲ್ಲಾ ಕೈಗಾರಿಕಾ ಬಳಕೆ ದಾರರಿಗೆ ಸ್ಮಾರ್ಟ್ ಮೀಟರ್ (Automated Metre Reading) ಅಳವಡಿಸಿಕೊಳ್ಳು ವಂತೆ ಸೂಚಿಸಲಾಗುವುದು. ನೀರಿನ ಮಾಹೆ ಯಾನ ಬಿಲ್‍ನಲ್ಲಿ ಇದಕ್ಕೆ ತಗಲುವ ವೆಚ್ಚ (ಸುಮಾರು 40,000 ರೂ.)ವನ್ನು ಕಂತು ರೂಪ ದಲ್ಲಿ ಕಟಾಯಿಸಲು ಉದ್ದೇಶಿಸಲಾಗಿದೆ.

ಇ-ಪಾವತಿ: ವಾಣಿವಿಲಾಸ ವಾಟರ್ ವಕ್ರ್ಸ್‍ನ 16 ಸೇವಾ ಕೇಂದ್ರಗಳು ಹಾಗೂ ಮೈಸೂರು ಒನ್ ಮೂಲಕ ಪಾವತಿಸು ತ್ತಿರುವ ನೀರಿನ ತೆರಿಗೆಯನ್ನು ಇ-ಪೇಮೆಂಟ್ ಮೂಲಕ ಆನ್‍ಲೈನ್‍ನಲ್ಲಿ ಪಾವತಿಸಲು ಅನುಕೂಲವಾಗುತ್ತದೆ.

ಮಲ್ಟಿಲೆವೆಲ್ ಪಾರ್ಕಿಂಗ್: ಶರ ವೇಗದಲ್ಲಿ ಬೆಳೆಯುತ್ತಿರುವ ಮೈಸೂರಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿರುವುದ ರಿಂದ ವಾಹನ ನಿಲುಗಡೆ ಸಮಸ್ಯೆಯನ್ನು ಎದುರಿಸಲು ಸಬರ್ಬನ್ ಬಸ್ ನಿಲ್ದಾಣ ಹಾಗೂ ಗಾಡಿ ಚೌಕದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿಪಡಿ ಸಲು ನಗರಪಾಲಿಕೆ ಮುಂದಾಗಿದೆ.

3 ಕೋಟಿ ರೂ. ವೆಚ್ಚದಲ್ಲಿ ಅಲ್ ಬ್ರದರ್ ವೃತ್ತ, ನಂಜು ಮಳಿಗೆ ಸರ್ಕಲ್ ಹಾಗೂ ಮಾತೃಮಂಡಳಿ ವೃತ್ತಗಳನ್ನು ಅಭಿವೃದ್ಧಿಪಡಿಸಿ ಸೌಂದರ್ಯೀಕರಣ ಗೊಳಿಸುವುದು, 1 ಕೋಟಿ ರೂ. ವೆಚ್ಚದಲ್ಲಿ ಕಾರಂಜಿ ಕೆರೆ ಬಂಡ್ ರಸ್ತೆ ಅಭಿವೃದ್ಧಿ, ದೇವಸ್ಥಾನ, ಉದ್ಯಾನವನ ಹಾಗೂ ಸಾರ್ವಜನಿಕ ಖಾಲಿ ಜಾಗಗಳಲ್ಲಿ ತ್ಯಾಜ್ಯ ಸಂಸ್ಕರಿಸಲು ಕಾಂಪೋಸ್ಟ್ ಘಟಕಗಳ ಸ್ಥಾಪನೆಗೂ ಪಾಲಿಕೆ ಮುಂದಾಗಿದೆ.

Translate »