ಪಾಕ್ ಪ್ರಚೋದಿತ ಉಗ್ರರಿಗೆ ತಕ್ಕ ಶಾಸ್ತಿ
ಮೈಸೂರು

ಪಾಕ್ ಪ್ರಚೋದಿತ ಉಗ್ರರಿಗೆ ತಕ್ಕ ಶಾಸ್ತಿ

February 27, 2019

ಮೈಸೂರು: ಬಾಲಕೋಟ್‍ನಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ವಿರುದ್ಧ ಭಾರ ತೀಯ ಯೋಧರು ನಡೆಸಿದ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣ ದಲ್ಲಿ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿ ಯಿಂದ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಸೇರಿದ ಜನಸ್ತೋಮ ಭಾರತೀಯ ಯೋಧರು ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುತ್ತ, ಕುಣಿದು ಕುಪ್ಪಳಿಸಿದರು.
‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಕೆಲ ವರು ಘೋಷಣೆ ಕೂಗಿದರೆ, ಮತ್ತೆ ಕೆಲವರು ಪಾಕಿಸ್ತಾನ್ ಪುಡಿ ಪುಡಿ ಎಂದರು. ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂದು ಸಾರುತ್ತ ಕಾಶ್ಮೀರ ಭಾರತದ ಅವಿ ಭಾಜ್ಯ ಅಂಗ ಎಂಬುದನ್ನು ಸಾರಿ ಹೇಳಿದರು.
ಈ ವೇಳೆ ಸಂಸದ ಪ್ರತಾಪಸಿಂಹ ಮಾತನಾಡಿ, ಪುಲ್ವಾಮಾ ದಾಳಿಯ ಬಳಿಕ ದೇಶದಾದ್ಯಂತ ಜನತೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮೋದಿಯವರೇ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎಂಬ ಆಕ್ರೋಶ ಇತ್ತು. ದೇಶದ ಮೂಲೆ ಮೂಲೆ ಯಿಂದ ಇದೇ ಭಾವನೆ ವ್ಯಕ್ತವಾಗಿತ್ತು. ಮೈಸೂ ರಿನ ಮೂಲೆ ಮೂಲೆಯಲ್ಲೂ ಕ್ಯಾಂಡಲ್ ಲೈಟ್ ಜಾಥಾಗಳು ನಡೆದಿದ್ದವು ಎಂದರು.

ಪ್ರಧಾನಿ ಮೋದಿ ಅವರು ಯೋಧರ ಕಣ್ಣೀರಿಗೆ ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇಂದು ಬೆಳಿಗ್ಗೆ ಎದ್ದು ಟಿವಿ ನೋಡುವಷ್ಟರಲ್ಲಿ ನಮ್ಮ ವಾಯುಪಡೆಯವರು ಪಾಕಿಸ್ತಾನದ ಒಳಗೆ ಹೋಗಿ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಆರ್ಮಿ, ಏರ್‍ಫೋರ್ಸ್ ಸಾಕಷ್ಟು ಎಚ್ಚರಿಕೆ ಯಿಂದ ಇದ್ದ ಸಂದರ್ಭದಲ್ಲಿಯೇ ದಾಳಿ ನಡೆಸಿ ಯೋಧರಿಗೆ ಯಾವುದೇ ಹಾನಿ ಇಲ್ಲದೇ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಕನಿಷ್ಠ ಎಂದರೂ 200 ರಿಂದ 300 ಮಂದಿ ಉಗ್ರರು ಬಲಿಯಾಗಿರ ಬಹುದು ಎಂಬ ವರದಿ ಇದೆ ಎಂದು ತಿಳಿಸಿದರು.

ಒಂದೇ ಕಡೆ ದಾಳಿ ಮಾಡಿರುವುದಾಗಿ ಸೇನೆ ಹೇಳಿದ್ದು, ಪಾಕಿಸ್ತಾನ ಮಾಧ್ಯಮಗಳು ಮೂರು ಕಡೆ ದಾಳಿ ನಡೆದಿರುವುದಾಗಿ ಹೇಳಿವೆ. ದೇಶ ವಾಸಿಗಳಿಗೆ ಮೋದಿಯವರ ಮೇಲೆ ಇದ್ದ ಭರವಸೆಯನ್ನು ಈಡೇರಿಸಿದ್ದಾರೆ. ಇದು ಖುಷಿಯ ವಿಷಯ. 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿ 189 ಮಂದಿಯನ್ನು ಬಲಿ ತೆಗೆದು ಕೊಂಡಾಗಲೇ ಸರಿಯಾದ ಪ್ರಧಾನಿ ಇದ್ದಿದ್ದರೆ ದಾಳಿ ನಡೆಸಬೇಕಿತ್ತು. ಆಗ ಮೋದಿಯಂತಹ ಪ್ರಧಾನಿ ಇರಲಿಲ್ಲ. ಈಗ ಇದ್ದಾರೆ. ಆದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡಿದ್ದಾರೆ ಎಂದರು.

ಬಿಜೆಪಿ ಯುವ ಮೋರ್ಚಾ ಮುಖಂಡ ಗಿರಿ ಧರ್, ನಗರ ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ಬಿ.ವಿ.ಮಂಜುನಾಥ್, ಮೈ.ಕಾ. ಪ್ರೇಮ ಕುಮಾರ್, ಬ್ರಹ್ಮಾಚಾರ್, ಅಜಯ್‍ಶಾಸ್ತ್ರಿ, ಆನಂದ್, ಜಯಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಅಗ್ರಹಾರದ ವೃತ್ತದ ಬಳಿ ಸಂಭ್ರಮಾಚರಣೆ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ಜೈಷ್ ಉಗ್ರ ಸಂಘಟನೆ ಮೇಲೆ ವೈಮಾನಿಕ ದಾಳಿ ನಡೆಸಿ ಸೇಡು ತೀರಿಸಿ ಕೊಂಡು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕ ವೇದಿಕೆ ವತಿ ಯಿಂದ ಅಗ್ರಹಾರ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಕಡಕೊಳ ಜಗದೀಶ್, ಬಿಜೆಪಿಯ ಯುವಮೋರ್ಚಾ ನಗರಾಧ್ಯಕ್ಷರಾದ ಗೋಕುಲ್ ಗೋವರ್ಧನ್, ಜಯಸಿಂಹ, ಪ್ರಶಾಂತ್, ಸುಚೀಂದ್ರ, ಸಂದೇಶ್ ಪವಾರ್, ಪ್ರಮೋದ್ ಗೌಡ, ಶರವಣ್, ಚಕ್ರಪಾಣಿ, ರಂಗನಾಥ್, ನಿಶಾಂತ್, ರವಿ, ಗೋಪಾಲ್, ಚಂದನ್, ಮತ್ತಿತರರು ಸಂಭ್ರಮಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »