ಅಭಿನಂದನ್ ತಕ್ಷಣ ಬಿಡುಗಡೆ ಮಾಡಿ
ಮೈಸೂರು

ಅಭಿನಂದನ್ ತಕ್ಷಣ ಬಿಡುಗಡೆ ಮಾಡಿ

February 28, 2019

ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವ ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ. “ಭಾರತೀಯ ವಾಯುಪಡೆಯ ಗಾಯಗೊಂಡ ಪೈಲಟ್ ಅನ್ನು ಅಸಭ್ಯ ರೀತಿಯಲ್ಲಿ ನಡೆಸಿಕೊಳ್ಳ ಬೇಡಿ” ಎಂದು ಪಾಕ್‍ಗೆ ಭಾರತ ಎಚ್ಚರಿ ಸಿದೆ. ಅಲ್ಲದೆ ಪಾಕ್ ತಮ್ಮ ಪೈಲಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಸಮನ್ ಮಾಡಿದ್ದ ಭಾರತ ವಿದೇಶಾಂಗ ಸಚಿವಾಲ ಯವು, ಭಾರತೀಯ ವಾಯುಪಡೆಯ ಪೈಲಟ್‍ನೊಡನೆ “ಅಸಭ್ಯ ವರ್ತನೆ” ತೋರುವ ಮೂಲಕ ಅಂತಾರಾಷ್ಟ್ರೀಯ ಮಾನ ವೀಯ ಕಾನೂನು ಮತ್ತು ಜಿನೀವಾ ಒಪ್ಪಂದದ ನಿಯಮವನ್ನು ಪಾಕ್ ಉಲ್ಲಂಘಿಸಿದೆ ಎಂದು ಹೇಳಿದೆ.

ಭಾರತದ ಪೈಲಟ್‍ಗೆ ಯಾವ ಹಾನಿಯಾಗುವುದಿಲ್ಲ, ಅವರು ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಪಾಕ್‍ಗೆ ಸೂಚನೆ ನೀಡಿದೆ.

ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಎಫ್-16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ತಮ್ಮ ರಾಯಭಾರಿಗಳಿಗೆ ಕದನ ವಿರಾಮ ಉಲ್ಲಂಘನೆ ಕುರಿತು ವಿವರಿಸಿದೆ. ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಸಮನ್ಸ್ ನೀಡಿದ್ದು, ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿದೆ. ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಡೈರಕ್ಟರ್ ಜನರಲ್ ಆಗಿರುವ ಡಾ. ಮೊಹಮ್ಮದ್ ಫೈಸಲ್ ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ “2003 ರ ಕದನ ವಿರಾಮ ನಿಯಮವನ್ನು ಗೌರವಿಸಿ, ಭಾರತದ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ. ನೀಡಿದ ಹೇಳಿಕೆ ತಿಳಿಸಿದೆ.

ಶತ್ರುಗಳೆದುರು ಸೇನಾ ಮಾಹಿತಿ ಬಹಿರಂಗಪಡಿಸದ ಅಭಿನಂದನ್

ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದ್ದ ಪಾಕಿ ಸ್ತಾನದ ಎಫ್-16 ಮೇಲೆ ಪ್ರತಿ ದಾಳಿ ಕಾರ್ಯಾಚರಣೆ ಯಲ್ಲಿ ಪಾಕ್ ಗಡಿಯಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದೆ.

ಈ ಕಾರ್ಯಾಚರಣೆಯಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದೂ ಅಲ್ಲದೇ ಈಗ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ವಶದಲ್ಲಿರುವುದು ಆತಂಕ ಮೂಡಿಸಿದೆ. ತನ್ನ ಸೆರೆಯಲ್ಲಿರುವ ಯೋಧನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪಡೆಯಲು ಪಾಕಿಸ್ತಾನ ಯತ್ನಿಸಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹೆಚ್ಚಿನ ಮಾಹಿತಿ ಕೇಳಿದಾಗ, ಜೀವ ಭಯ ಇದ್ದರೂ ಸಹ ನಾನು ನೀವು ಕೇಳಿದ ಮಾಹಿತಿಯನ್ನು ಹೇಳುವಂತಿಲ್ಲ ಎಂದು ಹೇಳಿದ್ದಾರೆ. ಜೀವಭಯ ಇದೆ ಯಾದರೂ ಈ ವರೆಗೂ ಸಹ ಅಭಿನಂದನ್ ಸುರಕ್ಷಿತ ವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿನಂದನ್ ನಿವೃತ್ತ ಏರ್ ಮಾರ್ಷೆಲ್‍ರ ಪುತ್ರ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ವಾಯು ಪಡೆಯ ಮಿಗ್-21 ಯುದ್ಧ ವಿಮಾನ ಬುಧವಾರ ಪತನಗೊಂಡ ನಂತರ ನಾಪತ್ತೆಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು, ಪರಮ ವಿಶಿಷ್ಟ ಸೇವಾ ಪದಕ ಪುರಸ್ಕೃತ ನಿವೃತ್ತ ಏರ್ ಮಾರ್ಷೆಲ್ ಸಿಂಹಕುಟ್ಟಿ ವರ್ತಮಾನ್ ಅವರ ಪುತ್ರ.

ಈ ಮಧ್ಯೆ, ಮಿಗ್-21 ವಿಮಾನ ವನ್ನು ಹೊಡೆದುರುಳಿಸಿ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪಾಕ್, ಇದೊಂದು ಅಭೂತಪೂರ್ವ ಯಶಸ್ಸು ಎಂದು ಹೇಳಿಕೊಂಡಿದೆ. ರಕ್ತಸಿಕ್ತ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಕಾರಿನಲ್ಲಿ ಕರೆದೊಯ್ಯುವ ದೃಶ್ಯ ಇದರಲ್ಲಿದೆ. ಭಾರತದ ಪೈಲಟ್ ನಾಪತ್ತೆಯಾಗಿರುವುದಾಗಿ ವಿದೇ ಶಾಂಗ ಸಚಿವಾಲಯ ಖಚಿತಪಡಿಸಿದ್ದು, ಅಭಿನಂದನ್ ತನ್ನ ವಶದಲ್ಲಿರುವು ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಆ ಕುರಿತು ತನಿಖೆ ನಡೆಯು ತ್ತಿದೆ ಎಂದು ವಿದೇಶಾಂಗ ಸಚಿವಾಲ ಯದ ವಕ್ತಾರ ರವೀಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Translate »