ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಸ್ವಾಗತ, ಸಂತಸ
ಮೈಸೂರು

ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಸ್ವಾಗತ, ಸಂತಸ

June 9, 2020

ಮೈಸೂರು, ಜೂ. 8- ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪರ್ಧಿಸಲು ನಿರ್ಧರಿಸಿರುವುದನ್ನು ಮೈಸೂರು ನಗರದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಮುಖಂಡರು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ನಿವಾಸದಲ್ಲಿ ಸಭೆ ಸೇರಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಹಿರಿಯ ಮುತ್ಸದ್ಧಿ ರಾಜಕಾರಣಿಯಾದ ಮಾಜಿ ಪ್ರಧಾನಿ ದೇವೇಗೌಡರ ಅವಶ್ಯಕತೆ ದೇಶದ ಅಭಿವೃದ್ಧಿಗಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ದೇವೇಗೌಡರು ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಭೆಯಲ್ಲಿ ಜೆಡಿಎಸ್ ರಾಜ್ಯ ಮುಖಂಡ ಸೈಯ್ಯದ್ ರಹಮತ್‍ಉಲ್ಲಾ, ಪಕ್ಷದ ನಗರ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಲಿಯಾಸ್ ಅಹಮದ್ (ಬಾಬು) ಕಾರ್ಯಾಧ್ಯಕ್ಷ ತನ್ವೀರ್ ಅಹಮದ್, ಕರ್ನಾಟಕ ಮೀನು ಮಾರಾಟ ಮಹಾ ಮಂಡಳಿ ಮಾಜಿ ಅಧ್ಯಕ್ಷ ನಿಸಾರ್, ವಕೀಲ ಮುದಸ್ಸರ್ ಅಲಿ ಖಾನ್, ಮುಖಂಡರಾದ ಹಾಶಿಂ ಅಲಿಖಾನ್ (ನೂರಿ), ಕಿಂಗ್ ಇಮ್ರಾನ್ ಮುಂತಾದವರಿದ್ದರು.

Translate »