ಮೋದಿ ಸಾಧನೆಯ ಕರಪತ್ರ ಬರೀ ಸುಳ್ಳಿನ ಕಂತೆ
ಮೈಸೂರು

ಮೋದಿ ಸಾಧನೆಯ ಕರಪತ್ರ ಬರೀ ಸುಳ್ಳಿನ ಕಂತೆ

June 9, 2020

ಮೈಸೂರು, ಜೂ.8(ಆರ್‍ಕೆಬಿ)- ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಯನ್ನು ಬಿಜೆಪಿ ಶಾಸ ಕರು ಮನೆ ಮನೆಗೆ ಹಂಚುತ್ತಿದ್ದು, ಇದು ಬರೀ ಸುಳ್ಳಿನ ಕಂತೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇಂದಿಲ್ಲಿ ತಿಳಿಸಿದರು.

ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಸಾಧನೆಗಳ ಕರಪತ್ರ ಹಂಚುತ್ತಿದ್ದು, ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 16.5 ಕೋಟಿ ರೈತರು ಉಪಯೋಗ ಪಡೆದಿರು ವುದಾಗಿ ತಿಳಿಸಿದ್ದಾರೆ. ಆದರೆ ಭಾಷಣ ದಲ್ಲಿ 9 ಕೋಟಿ ಎಂದು ಹೇಳುತ್ತಿದ್ದಾರೆ. ಇದರಲ್ಲಿ ನಿಜ ಯಾವುದು? ಇದರಲ್ಲೇ ತಿಳಿಯುತ್ತದೆ ಮೋದಿ ವರ್ಷದ ಸಾಧನೆ ಸುಳ್ಳು ಎಂಬುದು ಎಂದರು.

ಸಾಧನೆಯ ಕರಪತ್ರದಲ್ಲಿ `ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಸೇರಿಸಿದ್ದಾರೆ. ಇದನ್ನು ಸಾಧನೆ ಎನ್ನಲಾಗುತ್ತದೆಯೇ? ಅಮೇರಿಕಾದ ಅಧ್ಯಕ್ಷ ಭಾರತಕ್ಕೆ ಆಗಮಿಸುವುದು ಸಾಧ ನೆಯೇ? ಎಂದು ಪ್ರಶ್ನಿಸಿದ ಅವರು, ಆ ಕಾರ್ಯಕ್ರಮದಿಂದಲೇ ಕೊರೊನಾ ದೇಶಕ್ಕೆ ವಕ್ಕರಿಸಿತು. ಇದನ್ನು ಮರೆಮಾಚಲು ಇಂತಹ ಸುಳ್ಳು ಮಾಹಿತಿಗಳನ್ನು ಸಾಧನೆ ಎನ್ನುತ್ತಿ ದ್ದಾರೆ. 750 ಜನ ಸೋಂಕಿತರಿದ್ದಾಗ ಲಾಕ್ ಡೌನ್ ಮಾಡಿ, ಚಪ್ಪಾಳೆ ತಟ್ಟಿ, ಗಂಟೆ ಬಾರಿಸುತ್ತೀರಿ. ಅದು 4 ಲಕ್ಷವಾದಾಗ ಲಾಕ್ ಡೌನ್ ಮುಕ್ತಗೊಳಿಸುತ್ತೀರಿ. ಇದು ಸಾಧ ನೆಯೇ ಎಂದು ವ್ಯಂಗ್ಯವಾಗಿ ಹೇಳಿದರು.

ಪ್ರಧಾನಮಂತ್ರಿಗಳ ನಿಧಿಗೆ ರಾಜ್ಯದಿಂದ 11,78,085 ಜನರಿಂದ ಹಣ ಸಂಗ್ರಹ ವಾಗಿದೆ ಎಂದು ಹೇಳುವ ಬಿಜೆಪಿ, ಎಲ್ಲಾ ರಾಜ್ಯಗಳಿಂದ ಎಷ್ಟು ಹಣ ಸಂಗ್ರಹವಾ ಗಿದೆ ಎಂಬುದರ ಲೆಕ್ಕ ನೀಡಿಲ್ಲ. ರಾಜ್ಯ ದಲ್ಲಿ 1.40 ಕೋಟಿ ದಿನಸಿ ಕಿಟ್ ಹಂಚಿದ್ದಾಗಿ ತಿಳಿಸಿದ್ದಾರೆ. ಆದರೆ ಯಾವ ಬಿಜೆಪಿ ನಾಯಕರು ಎಲ್ಲೂ ಕಿಟ್ ವಿತರಿಸಿದ ನಿದರ್ಶನವಿಲ್ಲ ಎಂದು ಟೀಕಿಸಿದರು.

ಬಿಜೆಪಿಯವರ ಈ ಸುಳ್ಳು ಸಾಧನೆಯ ಕರಪತ್ರಗಳ ಬಗ್ಗೆ ಕಾಂಗ್ರೆಸ್ ಸಹ ಕರಪತ್ರ ಮಾಡಿಸಿ ಮನೆ ಮನೆಗೆ ಹಂಚಿ ಬಿಜೆಪಿ ಯವರ ಬಣ್ಣ ಬಯಲು ಮಾಡುವ ಮೂಲಕ ಮೋದಿ ಸಾಧನೆಗಳು ಬರೀ ಸುಳ್ಳು ಎಂಬುದನ್ನು ಜನರ ಮುಂದಿಡಲಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಪಾಲಿಕೆ ಸದಸ್ಯ ಅಯೂಬ್ ಖಾನ್, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಇತರರು ಇದ್ದರು.

Translate »