ರಸ್ತೆಗಿಳಿದ ನೂರಾರು ಸರ್ಕಾರಿ ಬಸ್‍ಗಳು ಗ್ರಾಮಾಂತರ ಪ್ರದೇಶಕ್ಕೂ ಸಂಚಾರ
ಮೈಸೂರು

ರಸ್ತೆಗಿಳಿದ ನೂರಾರು ಸರ್ಕಾರಿ ಬಸ್‍ಗಳು ಗ್ರಾಮಾಂತರ ಪ್ರದೇಶಕ್ಕೂ ಸಂಚಾರ

June 9, 2020

ಮೈಸೂರು, ಜೂ.8(ಎಸ್‍ಬಿಡಿ)- ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ದಿಂದ ಹೆಚ್ಚು ಬಸ್‍ಗಳನ್ನು ರಸ್ತೆಗಿಳಿಸಲಾ ಗಿದೆ. ಸೋಮವಾರ ಮೈಸೂರು ಗ್ರಾಮಾಂ ತರ ಸಾರಿಗೆ ವಿಭಾಗದಿಂದ 260 ಹಾಗೂ ನಗರ ಸಾರಿಗೆ ವಿಭಾಗದಿಂದ 202 ಬಸ್ ಗಳನ್ನು ಓಡಿಸಲಾಗಿದ್ದು, ಹಲವು ಗ್ರಾಮ ಗಳಿಗೂ ಸಂಚಾರ ಆರಂಭಿಸಲಾಗಿದೆ.

`ಸಂಚಾರ ಪುನಾರಂಭಗೊಂಡಾಗಿನಿಂದ ದಿನದಲ್ಲಿ 170ರಿಂದ 180 ಬಸ್‍ಗಳನ್ನು ಓಡಿಸಲಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಮವಾರ 260 ಬಸ್‍ಗಳನ್ನು ಓಡಿಸಲಾಗಿದೆ. ಈಗಾಗಲೇ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಡಿಪೋಗಳಿಂದ ಪ್ರಮುಖ ಹೋಬಳಿ ಕೇಂದ್ರ ಹಾಗೂ ದೊಡ್ಡ ಗ್ರಾಮಗಳಿಗೆ ದಿನದಲ್ಲಿ ಒಟ್ಟು 20 ಷೆಡ್ಯೂಲ್ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಬೇಡಿಕೆ ಅನುಸಾರ ಬಸ್‍ಗಳ ಸಂಚಾರ ಮಾರ್ಗ ಗಳ ವಿಸ್ತರಿಸಲಾಗುವುದು’ ಎಂದು ಮೈಸೂರು ಗ್ರಾಮಾಂತರ ಸಾರಿಗೆ ವಿಭಾ ಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

`ಮೈಸೂರು ನಗರ ಸಾರಿಗೆ ವಿಭಾಗದಿಂದ ಭಾನುವಾರದವರೆಗೆ ಸುಮಾರು 130 ಬಸ್‍ಗಳ ಸಂಚಾರವಿತ್ತು. ಸೋಮವಾರ 202 ಬಸ್ ಗಳನ್ನು ಓಡಿಸಲಾಗಿದೆ. ಧಾರ್ಮಿಕ ಕೇಂದ್ರ ಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ ಹಾಗೂ ಶ್ರೀರಂಗಪಟ್ಟಣಕ್ಕೆ ಸಂಚರಿ ಸುವ ಬಸ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಂಜನಗೂಡು, ಮೇಳಾಪುರ, ಪಾಲಹಳ್ಳಿ, ಹಳೇ ಕೆಸರೆ, ರಮ್ಮನಹಳ್ಳಿ ಸೇರಿದಂತೆ ಅನೇಕ ಮಾರ್ಗಗಳಿಗೆ ಸಂಚಾರ ಆರಂಭಿಸ ಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು ತಿಳಿಸಿದ್ದಾರೆ.

Translate »