ಕೆಆರ್‍ಎಸ್‍ನಲ್ಲಿ ನಾಲ್ವಡಿ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ

June 9, 2020

ಮೈಸೂರು, ಜೂ.8(ಪಿಎಂ)- ಕೆಆರ್‍ಎಸ್ ಅಣೆಕಟ್ಟೆ ಎದುರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡದಂತೆ ಆಗ್ರಹಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 1911ರ ನವೆಂಬರ್‍ನಲ್ಲಿ ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿ 1932 ರಲ್ಲಿ ಮುಕ್ತಾಯಗೊಳ್ಳುತ್ತದೆ. ಒಟ್ಟು ನಿರ್ಮಾಣ ಕಾರ್ಯದ 21 ವರ್ಷಗಳ ಅವಧಿ ಯಲ್ಲಿ ವಿಶ್ವೇಶ್ವರಯ್ಯನವರು ಮುಖ್ಯ ಇಂಜಿನಿ ಯರ್ ಆಗಿ ಕಾರ್ಯ ನಿರ್ವಹಿಸಿರುವುದು ಕೇವಲ 1 ವರ್ಷ ಮಾತ್ರ. ವಿಶ್ವೇಶ್ವರಯ್ಯರ ಬಳಿಕ 20 ವರ್ಷಗಳ ಅವಧಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ 7 ಮಂದಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಕೆಆರ್‍ಎಸ್ ಅಣೆ ಕಟ್ಟೆ ಆವರಣದಲ್ಲಿ ಯಾವುದೇ ಕಾರ ಣಕ್ಕೂ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಿಸ ಬಾರದು ಎಂದು ಒತ್ತಾಯಿಸಿದರು.

ಕೆಆರ್‍ಎಸ್ ನಿರ್ಮಾತೃ ನಾಲ್ವಡಿಯವರೇ. ಅದರ ಪೂರ್ಣ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಈ ಹಿನ್ನೆಲೆಯಲ್ಲಿ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನಾಲ್ವಡಿ ಅವರ ಪ್ರತಿಮೆ ಮಾತ್ರ ನಿರ್ಮಿಸಬೇಕು. ನಾವು ನಾಲ್ವಡಿ ಯವರ ಅಭಿಮಾನಿಗಳೇ ಹೊರತು, ವಿಶ್ವೇ ಶ್ವರಯ್ಯ ಸೇರಿದಂತೆ ಯಾರ ವಿರೋಧಿ ಗಳೂ ಅಲ್ಲ ಎಂದು ಘೋಷಣೆ ಕೂಗಿದರು.

ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಡಾ.ಶಿವಕುಮಾರ್ ಮಾತ ನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಸರಿಸಮನಾಗಿ ವಿಶ್ವೇ ಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡು ತ್ತಿರುವುದು ಇತಿಹಾಸಕ್ಕೆ ಮಾಡುತ್ತಿರುವ ದ್ರೋಹ. ನಾಲ್ವಡಿಯವರು ಮಿಲ್ಲರ್ ಆಯೋ ಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರ ಸಮು ದಾಯಗಳಿಗೆ ಶೇ.75ರಷ್ಟು ಮೀಸಲಾತಿ ಕಲ್ಪಿಸಿಕೊಟ್ಟರು. ಪ್ರತಿ ವರ್ಗಕ್ಕೂ ಆಯಾಯ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಿದರೆ ಸರ್ವರ ಏಳಿಗೆ ಸಾಧ್ಯ ಎಂಬ ತತ್ವವನ್ನು ಹೊಂದಿದ್ದರು. ಡಾ.ಅಂಬೇಡ್ಕರ್ ಅವರಿಗೂ ಸಂವಿಧಾನ ರಚಿಸುವಲ್ಲಿ ಇದು ಸ್ಫೂರ್ತಿಯಾಗಿದೆ ಎಂದರು.

ವಿಶ್ವೇಶ್ವರಯ್ಯನವರು ಮೀಸಲಾತಿ ನೀಡಿ ದರೆ ಆಡಳಿತದ ದಕ್ಷತೆ ಹಾಳಾಗುತ್ತದೆ ಎಂದು ಪ್ರತಿಪಾದಿಸಿ, ವಿರೋಧಿಸಿದ್ದರು. ಕೆಆರ್‍ಎಸ್ ನಿರ್ಮಾಣದ ಅವಧಿಯಲ್ಲಿ 7 ಮಂದಿ ಇಂಜಿನಿಯರ್‍ಗಳ ಕೊಡುಗೆ ಇದೆ. ಅವರ ಯಾರ ಮೇಲೂ ಇಲ್ಲದ ಅಭಿಮಾನ ಸರ್ಕಾರಕ್ಕೆ ವಿಶ್ವೇಶ್ವರಯ್ಯನವರ ಮೇಲೆಯೇ ಏಕೆ ಎಂದು ಪ್ರಶ್ನಿಸಿದರಲ್ಲದೆ, ಇಂಜಿನಿಯರ್ ಎಂಬ ಗೌರವದಿಂದ ಮಾಡಿ ದರೆ ಆ 7 ಮಂದಿಯ ಪ್ರತಿಮೆಯನ್ನೂ ಮಾಡಬೇಕಲ್ಲವೇ? ಎಂದು ಕಿಡಿಕಾರಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಾಲ್ವಡಿಯವರು ಹಿಂದುಳಿ ದವರು, ಶೋಷಿತರು, ದೀನದಲಿತರನ್ನು ತಮ್ಮ ಮಕ್ಕಳಂತೆ ಅಪಾರ ವಾತ್ಸಲ್ಯದಿಂದ ಕಂಡು ಅವರಲ್ಲಿ ಸ್ವಾಭಿಮಾನ ಮತ್ತು ಆತ್ಮ ಗೌರವ ತುಂಬಿದ್ದಾರೆ. ಆದರೆ ವಿಶ್ವೇಶ್ವರಯ್ಯ ನವರು ಸರ್ಕಾರಿ ಹುದ್ದೆಗೆ ಅರ್ಹತೆ ಅಂದರೆ ಮೆರಿಟ್ ಒಂದೇ ಎಂದು ಹೇಳುತ್ತ ಹಿಂದು ಳಿದವರ ಶ್ರೇಯೋಭಿವೃದ್ಧಿಗೆ ಅಪಸ್ವರ ಎತ್ತಿ ದವರು. ಅಂದಿನ ಮೈಸೂರು ಸಂಸ್ಥಾನ ದಲ್ಲಿ ಪ್ರಜೆಗಳ ನಡುವೆ ತಾರತಮ್ಯದ ಗೋಡೆ ನಿಲ್ಲಿಸಲು ವಿಶ್ವೇಶ್ವರಯ್ಯ ಪ್ರಯತ್ನಿಸಿದರು ಎಂದು ಕಿಡಿಕಾರಿದರು. ಬಳಿಕ ಜಿಲ್ಲಾಧಿ ಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ನಿವೃತ್ತ ಪ್ರಾಧ್ಯಾ ಪಕ ಪ್ರೊ.ನಂಜರಾಜೇ ಅರಸು, ರೈತ ಸಂಘದ ಹೊಸಕೋಟೆ ಬಸವರಾಜು, ಮುಖಂಡ ರಾದ ದ್ಯಾವಪ್ಪ ನಾಯಕ, ಅರವಿಂದ ಶರ್ಮಾ, ಚೋರನಹಳ್ಳಿ ಶಿವಣ್ಣ, ಸೊಸಲೆ ಸಿದ್ದ ರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »