ನರ್ಮದಾ ಸರೋವರ ಮಾದರಿ ಕೆಆರ್‍ಎಸ್ ಅಭಿವೃದ್ಧಿ
ಮಂಡ್ಯ

ನರ್ಮದಾ ಸರೋವರ ಮಾದರಿ ಕೆಆರ್‍ಎಸ್ ಅಭಿವೃದ್ಧಿ

July 17, 2021

ಕೆ.ಆರ್.ಪೇಟೆ, ಜು.16(ಶ್ರೀನಿವಾಸ್)- ವಿಶ್ವವೇ ನೋಡುವಂತೆ ಮಾದರಿ ಪ್ರವಾಸಿ ತಾಣವಾಗಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋ ದ್ಯಮ ಹಾಗೂ ಪರಿಸರ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಪ್ರವಾ ಸೋದ್ಯಮದ ಅಭಿವೃದ್ಧಿಗೆ ಯೋಜನೆ ಸಿದ್ಧ ಪಡಿಸುವ ನಿಟ್ಟಿನಲ್ಲಿ ಇಂದು ಕೆಆರ್‍ಎಸ್ ಹಿನ್ನೀರಿನ ದಡದಲ್ಲಿರುವ ಭೂವರಾಹ ನಾಥಸ್ವಾಮಿ ಶ್ರೀ ಕ್ಷೇತ್ರ, ಸಂಗಾಪುರ ಬಳಿಯ ತ್ರಿವೇಣಿ ಸಂಗಮ ಕ್ಷೇತ್ರ, ಬೆಳತೂರು ದ್ವೀಪ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕೆ.ಆರ್.ಪೇಟೆ ತಾಲೂಕಿನ ಬೆಳತೂರು ಸಮೀಪದ ಹಿನ್ನಿರಿನಲ್ಲಿರುವ ನಡುಗಡ್ಡೆ ದ್ವೀಪದಲ್ಲಿ ಐರೋಪ್ ಕ್ರೀಡೆಗೆ ಸೂಕ್ತ ಸ್ಥಳ ವೆಂದು ಕ್ರೀಡಾ ಇಲಾಖೆಯ ಅಧಿಕಾರಿ ಗಳು ಸಚಿವರಿಗೆ ತಿಳಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಕೆಆರ್‍ಎಸ್ ಅಣೆಕಟ್ಟೆ ಇನ್ನು ಮುಂದೆ ರೈತರಿಗೆ ಹಾಗೂ ಕುಡಿಯಲು ಬಳಸುವ ನೀರಿ ಗಷ್ಟೇ ಉಪಯೋಗವಾಗುವುದಿಲ್ಲ, ಗುಜ ರಾತ್ ರಾಜ್ಯದ ನರ್ಮದಾ ಸರೋವರದ ಮಾದರಿಯಲ್ಲಿ ಅಣೆಕಟ್ಟೆಯ ಹಿನ್ನೀರನ್ನು ಪ್ರವಾಸೋಧ್ಯಮದ ವಿವಿಧ ಕಾರ್ಯಗಳಿಗೆ ಬಳಕೆ ಮಾಡಿಕೊಂಡು ಮಂಡ್ಯ ಜಿಲ್ಲೆ ಯನ್ನು ಇಡೀ ವಿಶ್ವವೇ ನೋಡುವಂತೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡ ಲಾಗುವುದು ಎಂದು ತಿಳಿಸಿದರು.

ಅಣೆಕಟ್ಟೆಯಿಂದ ಹೊರಬಿಡಲಾಗುವ ನೀರು ಕೃಷಿಗೆ ಹಾಗೂ ಜನರಿಗೆ ಕುಡಿ ಯಲು ಉಪಯೋಗವಾದರೆ, ಅಣೆಕಟ್ಟೆಯ ಒಳಭಾಗದ ಹಿನ್ನೀರು ವ್ಯರ್ಥವಾಗುವು ದರ ಬದಲು ಮನರಂಜನಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಹಿನ್ನೀರಿನ ವ್ಯಾಪ್ತಿ ಯಲ್ಲಿ ಹಲವಾರು ನಡುಗಡ್ಡೆಗಳಿದ್ದು, ಅವು ಗಳೆಲ್ಲವನ್ನೂ ಅಭಿವೃದ್ಧಿಪಡಿಸಿ ಪ್ರವಾಸಿಗ ರಿಗೆ ಬೇಕಾದ ಹೋಟೆಲ್, ರೆಸಾರ್ಟ್, ದೋಣಿ ವಿಹಾರ ಕೇಂದ್ರಗಳು, ಸಾಹಸ ಕ್ರೀಡೆಗಳು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ಬಗೆಯ ಸೌಲಭ್ಯಗಳನ್ನು ಒದಗಿಸುವುದಾಗಿ ಸಚಿವರು ಹೇಳಿದರು.
ಎಲ್ಲಾ ಸೌಲಭ್ಯಗಳ ಜೊತೆಗೆ ಹೆಲಿ ಟೂರಿಸಂ ಕೂಡ ಆರಂಭಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ನಾರಾಯಣಗೌಡರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಪ್ರವಾಸೋ ದ್ಯಮ ಇಲಾಖೆಯು ಸ್ಪಂದಿಸಿ ಕೆಲಸ ಮಾಡ ಲಿದೆ ಎಂದು ಯೋಗೇಶ್ವರ್ ತಿಳಿಸಿದರು.

ರಾಜ್ಯದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಮಾತ ನಾಡಿ, ಮಂಡ್ಯ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವನ್ನು ಆಕರ್ಷಿಸುವಂತಹ ನೂರಾರು ಸ್ಥಳ ಗಳಿವೆ, ಆದರೆ ಇದುವರೆವಿಗೂ ಪ್ರವಾಸೋ ದ್ಯಮ ಇಲಾಖೆಯು ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇನ್ನು ಮುಂದೆ ಹೀಗಾಗಲು ಬಿಡುವುದಿಲ್ಲ. ಮಂಡ್ಯ ಜಿಲ್ಲೆಯ ಹೆಸರನ್ನು ಜಾಗತಿಕ ಭೂಪಟದಲ್ಲಿ ಶಾಶ್ವತ ಗೊಳಿಸುವ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯೋನ್ಮುಖನಾಗಿದ್ದೇನೆ ಎಂದರು.

ದೇವಾಲಯಗಳು, ನದಿಗಳ ಹಿನ್ನೀರು ಹಾಗೂ ನಡುಗಡ್ಡೆಗಳು ಹೀಗೆ ಇರುವ ಎಲ್ಲಾ ಅವ ಕಾಶಗಳ ಜೊತೆಗೆ ಕೃಷಿಯಲ್ಲಿ ಪಾಂಡಿತ್ಯ ವನ್ನು ಪಡೆದಿರುವ ನೂರಾರು ರೈತರನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿಗರು ಸಂದರ್ಶಿಸುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದ ನಾರಾ ಯಣಗೌಡ, ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಭೂವರಾಹನಾಥ ಕಲ್ಲಹಳ್ಳಿ ಯಿಂದ ಹೇಮಾವತಿ ನದಿಗೆ ತೂಗುಸೇತುವೆ ಯನ್ನು ನಿರ್ಮಾಣ ಮಾಡಿ ದ್ವೀಪವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಅಶ್ವಥಿ, ಅಪರ ಜಿಲ್ಲಾಧಿಕಾರಿ ಎಂ.ಶೈಲಜಾ, ಜಿಲ್ಲಾ ಪಂಚಾ ಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿವ್ಯಪ್ರಭು, ಪಾಂಡವಪುರ ಉಪವಿಭಾ ಗಾಧಿಕಾರಿ ಶಿವಾನಂದಮೂರ್ತಿ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಹಶೀಲ್ದಾರ್ ಶಿವ ಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ, ಸಚಿವ ನಾರಾಯಣಗೌಡರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಭೂವರಾಹ ನಾಥ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್, ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ಡಾ.ಆರ್. ಕೆ.ವೆಂಕಟೇಶ್ ಸೇರಿದಂತೆ ಪ್ರವಾಸೋ ದ್ಯಮ, ಕ್ರೀಡೆ ಹಾಗೂ ಯುವಜನಸೇವಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Translate »