ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ  35,000 ಕೋಟಿ ಏನಾಯ್ತು?  ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ
News

ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

June 3, 2021

ನವದೆಹಲಿ, ಜೂ. 2- ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಸಿಗ ಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಲೇ ಇದೆ. ಇದರ ಮಧ್ಯೆ ಲಸಿಕೆ ಕುರಿತು ಕೇಂದ್ರ ಸರ್ಕಾ ರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು ಎಂದು ಲೆಕ್ಕ ಪರಿಶೋಧನೆಗೆ ಸೂಚಿಸಿದೆ.

ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯಿತು? ಇದುವರೆಗೂ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡ ಲಾಗಿದೆ. 3 ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು ಮತ್ತು ಎಷ್ಟು ಬೆಲೆ? ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್-ವಿ ಖರೀದಿಯ ದಾಖಲೆ ನೀಡಿ ಎಂದು ಆದೇಶಿಸಿದೆ. ಲಸಿಕೆ ಖಾಸಗಿ ಪಾಲಾಗುತ್ತಿರುವುದು ತರ್ಕಬದ್ಧವಲ್ಲ. ಜನರ ಹಕ್ಕು ಉಲ್ಲಂಘನೆಯಾದಾಗ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ. ಮೊದಲ ಡೋಸ್ ಲಸಿಕಾ ಕರಣದ ಮಾಹಿತಿ ಕೊಡಿ. ಎರಡನೇ ಅಲೆಯಲ್ಲಿ 18ರಿಂದ 44 ವರ್ಷದೊಳಗಿನ ಜನರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಷ್ಟು ಮಾತ್ರ ಅಲ್ಲದೇ ವಾರಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗುವ ಸನ್ನಿವೇಶ ಉಂಟಾಗಿದೆ. ಆದರೆ 18-44 ವರ್ಷದವರಿಗೆ ಇನ್ನು ಲಸಿಕೆ ನೀಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದೆ. ಲಸಿಕೆ ಹಂಚಿಕೆಗೆ ಡೆಡ್‍ಲೈನ್ ನಿಗದಿಪಡಿಸಬೇಕು. ಎರಡು ವಾರಗಳಲ್ಲಿ ವ್ಯಾಕ್ಸಿನ್ ಪಾಲಿಸಿ ದಾಖಲೆ ಸಲ್ಲಿಸಬೇಕು ಎಂದು ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

Translate »