ಮೈಸೂರಲ್ಲಿ ಪೌರಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ
ಮೈಸೂರು

ಮೈಸೂರಲ್ಲಿ ಪೌರಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ

June 3, 2021

ಮೈಸೂರು, ಜೂ.2(ಎಂಟಿವೈ)- ಕೊರೊನಾ ಹಾವಳಿ ನಡುವೆಯೂ ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿರುವ ಕೊರೊನಾ ವಾರಿಯರ್ಸ್‍ಗಳಾದ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಬುಧವಾರ 40 ಮಂದಿ ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಲಾಕ್‍ಡೌನ್‍ನಲ್ಲಿಯೂ ಪ್ರತಿದಿನ ಮೈಸೂರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿ ಕರು ಸೋಂಕಿನ ನಡುವೆಯೂ ಸೇವೆ ಮುಂದುವರೆಸುತ್ತಿದ್ದು, ಕೆಲವರು ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 15 ದಿನದಲ್ಲಿ ಪಾಲಿಕೆಯ ಮೂವರು ಸಿಬ್ಬಂದಿ ಸೋಂಕಿಗೆ ಬಲಿಯಾದ ಹಿನ್ನೆಲೆಯಲ್ಲಿ ಮುಂಚೂಣಿ ಕಾರ್ಯಕರ್ತರಾದ ಪೌರಕಾರ್ಮಿಕರಿಗೆ ಹಂತ ಹಂತವಾಗಿ ಕೋವಿಡ್ ಪರೀಕ್ಷೆ ನಡೆಸಲು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೂಚಿಸಿದ್ದಾರೆ.

ಮೈಸೂರಿನ ಚಿಕ್ಕಗಡಿಯಾರ ವೃತ್ತದ ಬಳಿಯಿರುವ ಕೊರೊನಾ ಪರೀಕ್ಷಾ ಕೇಂದ್ರದಲ್ಲಿ ಬುಧವಾರ 40 ಮಂದಿಗೆ ಪರೀಕ್ಷೆ ನಡೆಸ ಲಾಯಿತು. ಸಾರ್ವಜನಿಕರು ಹಾಗೂ ಪೌರಕಾರ್ಮಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿ ಪರೀಕ್ಷೆ ನಡೆಸಲಾಯಿತು. ಪ್ರತಿದಿನ ಆಯಾ ವಲಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕ ರನ್ನು ತಂಡವಾಗಿ ಕರೆತಂದು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

4 ಬಸ್, 9 ಟಿಟಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾ ರಕ್ಕೆ ಕಡಿವಾಣ ಹಾಕಲಾಗಿದ್ದು, ಪಾಲಿಕೆಯ 9 ವಲಯಗಳಲ್ಲಿ ಸೇವೆ ಸಲ್ಲಿಸುವ ಪೌರಕಾರ್ಮಿಕರು ಸೂಕ್ತ ಸಮಯಕ್ಕೆ ಕರ್ತವ್ಯ ಹಾಜರಾಗಲು ತೊಡಕಾಗುತ್ತಿತ್ತು. ಇದನ್ನು ಮನಗಂಡ ಅಧಿಕಾರಿ ಗಳು ವಿವಿಧ ಬಡಾವಣೆಗಳಲ್ಲಿ ನೆಲೆಸಿರುವ ಪೌರಕಾರ್ಮಿಕರನ್ನು ಪ್ರತಿದಿನ ಕರೆದುಕೊಂಡು ಬರಲು ಹಾಗೂ ಕೆಲಸ ಮುಗಿದ ನಂತರ ಮತ್ತೆ ವಾಪಸ್ಸು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಿದ್ದಾರೆ. ಸಾರಿಗೆ ಸಂಸ್ಥೆಯ 4 ಬಸ್‍ಗಳ ಸೇವೆಯನ್ನು ಮೈಸೂರು ಮಹಾ ನಗರ ಪಾಲಿಕೆ ಗುತ್ತಿಗೆ ಆಧಾರದಲ್ಲಿ ಪಡೆದಿದ್ದರೆ, ಸೇಫ್ ವ್ಹೀಲ್ ಸಂಸ್ಥೆಯ ಬಿ.ಎಸ್.ಪ್ರಶಾಂತ್ 9 ಟಿಟಿಯನ್ನು ನೀಡಿದ್ದಾರೆ. ಈ ವಾಹನಗಳು ಪ್ರತಿದಿನ 9 ವಲಯದಲ್ಲೂ ಸಂಚರಿಸಿ, ಪೌರ ಕಾರ್ಮಿಕರನ್ನು ಕರೆತರಲಿದೆ. ಭಾರತ್‍ನಗರ. ಕೈಲಾಸಪುರಂ, ಬಿ.ಬಿ.ಕೇರಿ, ಜೆ.ಪಿ.ನಗರ, ಶಾರದಾದೇವಿನಗರ, ಮಹಾದೇವ ಪುರ ಸೇರಿದಂತೆ ವಿವಿಧೆಡೆ ನೆಲೆಸಿರುವ ಪೌರಕಾರ್ಮಿಕರು ಪಾಲಿಕೆ ವ್ಯವಸ್ಥೆ ಮಾಡಿರುವ ವಾಹನದಲ್ಲೇ ತಮಗೆ ನಿಗದಿ ಮಾಡಿರುವ ಸ್ಥಳಕ್ಕೆ ಕಾರ್ಯನಿರ್ವಹಿಸಲು ಬರುತ್ತಿದ್ದಾರೆ. ಕೆಲಸ ಮುಗಿದ ನಂತರ ಎಲ್ಲಾ ಪೌರಕಾರ್ಮಿಕರು ನಿಗಧಿತ ಸ್ಥಳಕ್ಕೆ ಬಂದು ಸೇರಲಿದ್ದು, ಅಲ್ಲಿಗೆ ಬರುವ ವಾಹನದಲ್ಲಿಯೇ ಮನೆಗೆ ವಾಪಸ್ಸು ಮರಳುವ ವ್ಯವಸ್ಥೆ ಮಾಡಲಾಗಿದೆ.

Translate »