ಮೈಸೂರಲ್ಲಿ ಒಂದಿಲ್ಲೊಂದು ಕಡೆ ನಿತ್ಯ ಹೊಂಡಮಯ
ಮೈಸೂರು

ಮೈಸೂರಲ್ಲಿ ಒಂದಿಲ್ಲೊಂದು ಕಡೆ ನಿತ್ಯ ಹೊಂಡಮಯ

November 11, 2020

ಮೈಸೂರು, ನ.10- ಮೈಸೂರಲ್ಲಿ ವರ್ಷವಿಡೀ ಒಂದಿಲ್ಲೊಂದು ಕಾರಣಕ್ಕೆ ರಸ್ತೆ ಅಗೆದು, ಹೊಂಡಾ ನಿರ್ಮಿಸುವುದು ರೂಢಿಯಾಗಿ ಬಿಟ್ಟಿದೆ. ಹೀಗೆಯೇ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದ ಸಮೀಪ, ಇರ್ವಿನ್ ರಸ್ತೆಯಲ್ಲಿ ಪೈಪ್ ಲೇನ್ ದುರಸ್ತಿಗೆಂದು ತೆಗೆದಿರುವ ಗುಂಡಿಯನ್ನು ನಾಲ್ಕೈದು ದಿನಗಳಾದರೂ ಮುಚ್ಚಿಲ್ಲ. ಬಸ್ ನಿಲ್ದಾ ಣಕ್ಕೆ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಸಮೀಪದಲ್ಲೇ ಮಿನಿ ವಿಧಾನಸೌಧ, ಜಿಲ್ಲಾ ಆರೋ ಗ್ಯಾಧಿಕಾರಿ ಕಚೇರಿ, ಎಸ್ಪಿ ಕಚೇರಿಗಳಿವೆ. ಅಲ್ಲದೆ ಇದು ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿ ರುವುದರಿಂದ ಸದಾ ಜನ ಜಂಗುಳಿ ಇರುತ್ತದೆ.

ಇಂತಹ ಸ್ಥಳದಲ್ಲಿ ಗುಂಡಿಯನ್ನು ಮುಚ್ಚದೆ, ಸುತ್ತಲೂ ಬ್ಯಾರಿಕೇಡ್‍ಗಳನ್ನೂ ಹಾಕದೆ ನಿರ್ಲಕ್ಷಿಸಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರು ಹಗಲಲ್ಲೂ ಗುಂಡಿಗೆ ಬೀಳು ವುದು ಖಚಿತ. ಪ್ರಾಣಾಪಾಯವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅನಾಹುತಕ್ಕೆ ಆಸ್ಪದವಾಗದಂತೆ ತಕ್ಷಣ ನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

Translate »